ಮಂಗಳೂರು: ಗಾಂಜಾ ಸೇವನೆ; ಆರೋಪಿ ಸೆರೆ
ಮಂಗಳೂರು: ಗಾಂಜಾ ಸೇವನೆ ಮಾಡಿದ ಆರೋಪದ ಮೇರೆಗೆ ಯುವಕನನ್ನು ಮಂಗಳೂರು ಸೆನ್ ಠಾಣೆಯ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೋಟೆಕಾರ್ ನ್ಯೂ ಕಾಲನಿಯ ಝಾಹೀರ್ ಅಬ್ಬಾಸ್ ಸಫ್ವಾನ್ (26) ಬಂಧಿಸಲ್ಪಟ್ಟ ಯುವಕ. ಈತ ಮಂಗಳವಾರ ಬೆಳಗ್ಗೆೆ 9:30ಕ್ಕೆೆ
ನಗರದ ಬಂದರು ದಕ್ಷಿಣ ದಕ್ಕೆೆಯಲ್ಲಿರುವ ಟ್ರಾಲ್‌ಬೋಟ್ ಕಟ್ಟಡದ ಎದುರು ನಶೆಯಲ್ಲಿದ್ದ.
ಈತನನ್ನು ಪೊಲೀಸರು ವಶಕ್ಕೆೆ ಪಡೆದು ಪರೀಕ್ಷೆೆಗೊಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story