ಕುಂದಾಪುರ: ವೃದ್ಧ ತಾಯಿ-ಮಗಳ ಮೃತದೇಹ ಬಾವಿಯಲ್ಲಿ ಪತ್ತೆ
ಕುಂದಾಪುರ: ಬಾವಿಯಲ್ಲಿ ವೃದ್ಧ ತಾಯಿ ಹಾಗೂ ಮಗಳ ಶವ ಪತ್ತೆಯಾದ ಘಟನೆ ಕುಂದಾಪುರ ತಾಲೂಕಿನ ಅಸೋಡು ಎಂಬಲ್ಲಿ ವರದಿಯಾಗಿದೆ.
ದೇವಕಿ ಶೆಡ್ತಿ(58) ಹಾಗೂ ಅವರ ತಾಯಿ ಗುಲಾಬಿ ಶೆಡ್ತಿ(85) ಮೃತ ದೇಹ ಇಂದು ಬಾವಿಯಲ್ಲಿ ಪತ್ತೆಯಾಗಿದೆ.
ಬಾವಿಯ ಬದಿಯಲ್ಲಿ ಕಾಲು ಜಾರಿದ ಗುರುತು ಕಂಡು ಬಂದಿದ್ದು, ಗುಲಾಬಿ ಶೆಡ್ತಿ ಅವರಿಗೆ ವಯಸ್ಸಾಗಿದ್ದರಿಂದ ಕಣ್ಣು ಕಾಣಿಸದ ಕಾರಣ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಅವರ ಮಗಳು ದೇವಕಿ ಶೆಡ್ತಿ ಪ್ರಯತ್ನಿಸಿದಾಗ ಅವರು ಕೂಡಾ ಆಯತಪ್ಪಿ ನೀರಿಗೆ ಬಿದ್ದು, ತಾಯಿ ಮಗಳು ಇಬ್ಬರು ಕೂಡಾ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story