ಕಾರ್ಕಳ: ಕಳವು ಯತ್ನ
ಕಾರ್ಕಳ: ಕಾರ್ಕಳ ತಾಲೂಕು ಸಾಣೂರು ಗ್ರಾಮದಲ್ಲಿರುವ ಸಾಣೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಕಿಟಕಿ ಸರಳು ಕತ್ತರಿಸಿ ಒಳಪ್ರವೇಶಿಸಿ ಕಳ್ಳತನ ಕ್ಕೆ ವಿಫಲ ಯತ್ನ ನಡೆಸಿದ್ದು ಮಂಗಳವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.
ಕಳ್ಳರು ಸಂಘದ ಕಿಟಿಕಿಯ ಕಬ್ಬಿಣದ ಗ್ರಿಲ್ಸ್ ಗಳನ್ನು ಕತ್ತರಿಸಿ ತೆಗೆದು ಒಳಪ್ರವೇಶಿಸಿ ಸಿಸಿ ಕೆಮರಾಗಳಿಗೆ ಕಪ್ಪು ಬಣ್ಣ ಸ್ಪ್ರೇ ಮಾಡಿ ಒಳಗೆ ಇದ್ದ ವಸ್ತುಗಳನ್ನು ಹುಡುಕಾಡಿ ಕಳವುಗೈಯಲು ಯತ್ನಿಸಿದ್ದಾರೆಂದು ದೂರಲಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





