Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಲಾಲ್ ಬಹದ್ದೂರ್ ಶಾಸ್ತ್ರಿ: ಕೆಲವು...

ಲಾಲ್ ಬಹದ್ದೂರ್ ಶಾಸ್ತ್ರಿ: ಕೆಲವು ಸಂಗತಿಗಳು

ಲಾಲ್ ಬಹದ್ದೂರ್ ಶಾಸ್ತ್ರಿ ನಿಧನರಾಗಿ 57 ವರ್ಷ

ಪೂರ್ವಿಪೂರ್ವಿ11 Jan 2023 11:15 AM IST
share
ಲಾಲ್ ಬಹದ್ದೂರ್ ಶಾಸ್ತ್ರಿ: ಕೆಲವು ಸಂಗತಿಗಳು
ಲಾಲ್ ಬಹದ್ದೂರ್ ಶಾಸ್ತ್ರಿ ನಿಧನರಾಗಿ 57 ವರ್ಷ

ಗಾಂಧಿ ಹುಟ್ಟಿದ 35 ವರ್ಷಗಳ ನಂತರ ಅದೇ ದಿನದಂದು 1904ರಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಜನಿಸಿದರು. ಉತ್ತರ ಪ್ರದೇಶದ ಮೊಗಲ್‌ಸರಾಯ್ ಪಟ್ಟಣದಲ್ಲಿ ಅಕ್ಟೋಬರ್ 2ರಂದು ಜನಿಸಿದ ಅವರು, ಭಾರತದ ಎರಡನೇ ಪ್ರಧಾನಿಯಾದರು. ನಮ್ಮ ಸಮಾಜದಲ್ಲಿ ಬದಲಾವಣೆಯನ್ನು ತರಲು ಶಾಸ್ತ್ರಿ ಅವರು ಮಾಡಿದ ಕಾರ್ಯಗಳೂ ಅಸಾಧಾರಣವಾದವುಗಳು. ಅವರ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.

ಅವರು ಸಮಾನತೆಯಲ್ಲಿ ನಂಬಿಕೆಯುಳ್ಳವರಾಗಿದ್ದರು ಮತ್ತು ಜಾತಿ ವ್ಯವಸ್ಥೆಯನ್ನು ವಿಭಜನೆಯನ್ನು ಸೃಷ್ಟಿಸುವ ಸಾಮಾಜಿಕ ಅನಿಷ್ಟವೆಂದು ಪರಿಗಣಿಸಿದ್ದರು. ಅವರು ಚಿಕ್ಕ ವಯಸ್ಸಿನಲ್ಲೇ ತಮ್ಮ ಕುಟುಂಬದ ಹೆಸರನ್ನು ತ್ಯಜಿಸಿದರು. ಕಾಶಿ ವಿದ್ಯಾಪೀಠಕ್ಕೆ ಸೇರಿ ತತ್ವಶಾಸ್ತ್ರದಲ್ಲಿ ಪದವಿ ಪಡೆದ ನಂತರವೇ ‘ಶಾಸ್ತ್ರಿ’ ಎಂಬ ಬಿರುದು ಪಡೆದರು.

ಲಾಲ್ ಬಹದ್ದೂರ್ ಶಾಸ್ತ್ರಿಯವರು ಜಾತಿ ವ್ಯವಸ್ಥೆಯ ವಿರುದ್ಧ ಮಾತ್ರ ಹೋರಾಡಲಿಲ್ಲ. ಅವರು ವರದಕ್ಷಿಣೆ ಪದ್ಧತಿಯ ವಿರುದ್ಧ ಧ್ವನಿ ಎತ್ತಿದರು ಮತ್ತು ಅವರ ಮದುವೆಯಲ್ಲಿ ತಮ್ಮ ಹೆಂಡತಿಯ ಕುಟುಂಬದಿಂದ ಏನನ್ನೂ ಸ್ವೀಕರಿಸಲು ನಿರಾಕರಿಸಿದರು. ಮಾವನಿಂದ ಪದೇ ಪದೇ ವಿನಂತಿಸಿದ ನಂತರವೇ, ಅವರು ಮದುವೆಯ ಉಡುಗೊರೆಯಾಗಿ ಕೆಲವು ಮೀಟರ್ ಖಾದಿ ಬಟ್ಟೆಯನ್ನು ತೆಗೆದುಕೊಂಡರು.

ಗಾಂಧಿ ಮತ್ತು ಬಾಲಗಂಗಾಧರ ತಿಲಕ್‌ರಿಂದ ಸ್ಫೂರ್ತಿ ಪಡೆದ ಲಾಲ್ ಬಹದ್ದೂರ್ ಶಾಸ್ತ್ರಿ 1921ರಲ್ಲಿ ಸ್ವಾತಂತ್ರ್ಯ ಚಳವಳಿಗೆ ಸೇರಲು ತಮ್ಮ ಅಧ್ಯಯನವನ್ನು ತ್ಯಜಿಸಿದರು.

ಭಾರತದ ಸ್ವಾತಂತ್ರ್ಯದ ನಂತರ, ಗೋವಿಂದ್ ವಲ್ಲಭ್ ಪಂತ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಶಾಸ್ತ್ರಿ ಅವರು ಪೊಲೀಸ್ ಮತ್ತು ಸಾರಿಗೆ ನಿಯಂತ್ರಣ ಸಚಿವರಾದರು. ಸಾರಿಗೆ ಇಲಾಖೆಯ ಉಸ್ತುವಾರಿಯಾಗಿ ಶಾಸ್ತ್ರಿಯವರು ಪ್ರಥಮ ಬಾರಿಗೆ ಮಹಿಳೆಯರನ್ನು ಕಂಡಕ್ಟರ್‌ಗಳನ್ನಾಗಿ ನೇಮಿಸುವ ಮೂಲಕ ಅರ್ಥಪೂರ್ಣ ಬದಲಾವಣೆ ತಂದರು. ಪೊಲೀಸ್ ಇಲಾಖೆಯ ಉಸ್ತುವಾರಿಯಾಗಿ, ಅವರು ಜನಸಂದಣಿಯನ್ನು ನಿಯಂತ್ರಿಸಲು ಸಾಂಪ್ರದಾಯಿಕ ಲಾಠಿಗಳ ಬದಲಿಗೆ ವಾಟರ್ ಜೆಟ್‌ಗಳೊಂದಿಗೆ ಬದಲಾಯಿಸಿದರು. ಅವರು 1947ರ ಕೋಮು ಗಲಭೆಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ಶಾಸ್ತ್ರಿ ಅವರು ಜೈಲುವಾಸದಲ್ಲಿದ್ದಾಗ ಪಿಂಚಣಿಯಾಗಿ ದಿ ಸರ್ವೆಂಟ್ ಆಫ್ ಇಂಡಿಯಾ ಸೊಸೈಟಿಯಿಂದ ಪ್ರತೀ ತಿಂಗಳೂ ಅವರ ಪತ್ನಿಗೆ 50 ರೂ. ಹೋಗುತ್ತಿತ್ತು. ಪತ್ನಿಗೆ ಪತ್ರ ಬರೆದ ಶಾಸ್ತ್ರಿಯವರು ಹಣ ಬರುತ್ತಿದೆಯೇ ಎಂದು ವಿಚಾರಿಸಿದ್ದರು. ಅದಕ್ಕೆ ಅವರ ಪತ್ನಿ 50 ರೂ. ಬರುತ್ತಿರುವುದನ್ನೂ ಅದರಲ್ಲಿ 40 ರೂ. ಮಾತ್ರ ಖರ್ಚು ಮಾಡಿ. ಇನ್ನು 10 ರೂ. ಉಳಿಸುತ್ತಿರುವುದಾಗಿಯೂ ಉತ್ತರಿಸಿದರು. ಕೂಡಲೇ ಶಾಸ್ತ್ರಿಯವರು ಸೊಸೈಟಿಗೆ ಪತ್ರ ಬರೆದು, ಪಿಂಚಣಿಯಾಗಿ 40 ರೂ. ಮಾತ್ರ ಕಳಿಸಿ ಎಂದು ಕೋರಿದ್ದರು.

ಅವರ ಮಗನಿಗೆ ಕೆಲಸದಲ್ಲಿ ಅನಗತ್ಯ ಭಡ್ತಿ ದೊರೆತಾಗ, ಅದು ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಕೆರಳಿಸಿತು. ಅವರು ತಕ್ಷಣವೇ ಭಡ್ತಿಯನ್ನು ಹಿಂದೆಗೆದುಕೊಳ್ಳುವ ಆದೇಶವನ್ನು ಹೊರಡಿಸಿದರು.

ಹೆಚ್ಚಿನ ಸ್ವಾಭಿಮಾನ ಮತ್ತು ನೈತಿಕತೆಯನ್ನು ಹೊಂದಿರುವ ವ್ಯಕ್ತಿ, ಶಾಸ್ತ್ರಿ ಭಾರತದ ಪ್ರಧಾನಿಯಾದ ನಂತರವೂ ಸ್ವಂತ ಕಾರು ಹೊಂದಿರಲಿಲ್ಲ. ಕುಟುಂಬ ಸದಸ್ಯರ ಕಿರಿಕಿರಿಯ ನಂತರ, ಶಾಸ್ತ್ರಿ ಅಂತಿಮವಾಗಿ ಫಿಯೆಟ್ ಕಾರಿನ ಬೆಲೆಯನ್ನು ತಿಳಿಯಲು ತನ್ನ ಕಾರ್ಯದರ್ಶಿಗೆ ಸೂಚಿಸಿದರು. ಕಾರಿನ ಬೆಲೆ ರೂ. 12,000 ಇತ್ತು. ಆದರೆ ಶಾಸ್ತ್ರಿಯವರ ಬಳಿ 5 ಸಾವಿರ ಕಡಿಮೆಯಿತ್ತು. ಅವರು ಕಾರ್ ಸಾಲಕ್ಕೆ ಅರ್ಜಿ ಸಲ್ಲಿಸಿದರು, ಅದು ಕ್ಷಣಾರ್ಧದಲ್ಲಿ ಮಂಜೂರಾಯಿತು. ಬ್ಯಾಂಕ್ ಅಧಿಕಾರಿಯನ್ನು ತಕ್ಷಣವೇ ಕರೆಸಲಾಯಿತು ಮತ್ತು ಇತರ ಗ್ರಾಹಕರಿಗೆ ಸಾಲ ಮಂಜೂರು ಮಾಡುವಲ್ಲಿ ಬ್ಯಾಂಕ್ ಇಷ್ಟೇ ತ್ವರಿತ ಕ್ರಮ ಅನುಸರಿಸಲಾಗುತ್ತಿದೆಯೇ ಎಂದು ವಿಚಾರಿಸಲಾಯಿತು.

ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ತತ್ವಗಳು ಎಷ್ಟು ಮುಖ್ಯವಾಗಿದ್ದವು ಎಂಬುದು ಸ್ಪಷ್ಟ, ಅವರು ಯಾವಾಗಲೂ ಸರಿಯಾದ ಮಾರ್ಗವನ್ನು ಅನುಸರಿಸಿದರು ಮತ್ತು ತಮ್ಮ ಕುಟುಂಬದ ವಿಚಾರದಲ್ಲಿ ಎಂದೂ ಸ್ವಲ್ಪವೂ ಪಕ್ಷಪಾತವನ್ನು ತೋರಿಸಲಿಲ್ಲ. ಭಾರತದ ಭವಿಷ್ಯವನ್ನು ರೂಪಿಸಿದ್ದ ಈ ಅಸಾಧಾರಣ ವಿದ್ವಾಂಸ ಮತ್ತು ನಾಯಕನನ್ನು ರಾಷ್ಟ್ರವು ಅವರ ಪ್ರಯತ್ನಗಳು ಮತ್ತು ನ್ಯಾಯಯುತ ಸ್ವಭಾವಕ್ಕಾಗಿ ಆತ್ಮೀಯವಾಗಿ ನೆನಪಿಸಿಕೊಳ್ಳಲೇಬೇಕು.

share
ಪೂರ್ವಿ
ಪೂರ್ವಿ
Next Story
X