ಪಣಂಬೂರು: ಅಮೆಚೂರ್ ಕಬ್ಬಡಿ ಅಸೋಸಿಯೇಶನ್‌ನ ಮಹಾಸಭೆ

ಪಣಂಬೂರು: ದ.ಕ.ಜಿಲ್ಲಾ ಅಮೆಚೂರ್ ಕಬ್ಬಡಿ ಅಸೋಸಿಯೇಶನ್‌ನ ಮಹಾಸಭೆಯು ಇತ್ತೀಚೆಗೆ ನಗರದ ಖಾಸಗಿ ಸಭಾಂಗಣದಲ್ಲಿ ಜರಗಿತು.
ಅಸೋಸಿಯೇಶನ್‌ನ ಮಹಾಪೋಷಕ ಎ. ಸದಾನಂದ ಶೆಟ್ಟಿ ಮತ್ತು ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಗೌರವಾಧ್ಯಕ್ಷ ಅಮರನಾಥ ರೈ, ಜಿಲ್ಲಾ ಅಸೋಸಿಯೇಶನ್‌ನ ಅಧ್ಯಕ್ಷ ರಾಕೇಶ್ ಮಲ್ಲಿ ಮುಂದಾಳುತ್ವದಲ್ಲಿ ನಡೆದು ಮುಂದಿನ ನಾಲ್ಕು ವರ್ಷದ ಅವಧಿಗೆ ಪದಾಧಿಕಾರಿಗಳ ನೇಮಕ ನಡೆಸಲಾಯಿತು.
ಅಧ್ಯಕ್ಷರಾಗಿ ರಾಕೇಶ್ ಮಲ್ಲಿ ಪುನರಾಯ್ಕೆಗೊಂಡರೆ, ಕಾರ್ಯಧ್ಯಕ್ಷರಾಗಿ ಪುರುಷೋತ್ತಮ್ ಪೂಜಾರಿ,ಪ್ರಧಾನ ಕಾರ್ಯದರ್ಶಿಯಾಗಿ ರತನ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಪ್ರಮುಖರಾದ ದೇವಾನಂದ ಶೆಟ್ಟಿ, ಗಿರಿಧರ ಶೆಟ್ಟಿ, ತೇಜೋಮಯ, ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಉಪಾಧ್ಯಕ್ಷ ರಾಜೇಂದ್ರ ಸುವರ್ಣ, ಕಾನೂನು ಸಲಹೆಗಾರ ರವೀಂದ್ರನಾಥ ರೈ, ಕೋಶಾಧಿಕಾರಿ ಮೋಹಿತ್ ಸುವರ್ಣ, ಉಪಸ್ಥಿತರಿದ್ದರು.
Next Story





