ಕೊಲೆಯತ್ನ ಪ್ರಕರಣ: ಲಕ್ಷದ್ವೀಪ ಸಂಸದನಿಗೆ 10 ವರ್ಷ ಜೈಲು ಶಿಕ್ಷೆ

ಕವರಟ್ಟಿ: ಕೊಲೆಯತ್ನ ಪ್ರಕರಣವೊಂದರಲ್ಲಿ ಲಕ್ಷದ್ವೀಪ (Lakshadweep) ಸಂಸದ ಮುಹಮ್ಮದ್ ಫೈಝಲ್ (Mohammed Faizal) ಮತ್ತು ನಾಲ್ಕು ಮಂದಿ ಇತರರಿಗೆ ಕವರಟ್ಟಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಎಲ್ಲಾ ದೋಷಿಗಳಿಗೂ ನ್ಯಾಯಾಲಯ ತಲಾ ರೂ 1 ಲಕ್ಷ ದಂಡ ವಿಧಿಸಿದೆ.
ಈ ಪ್ರಕರಣ 2009 ರಲ್ಲಿ ನಡೆದಿತ್ತು. ಫೈಝಲ್ ಮತ್ತು ಇತರ ನಾಲ್ಕು ಮಂದಿ ಆರೋಪಿಗಳು ಮಾಜಿ ಕೇಂದ್ರ ಸಚಿವ ಪಿ ಎಂ ಸಯೀದ್ ಅವರ ಅಳಿಯ ಪದನಾಥ್ ಸಾಲಿಹ್ ಅವರ ಮೇಲೆ ದಾಳಿ ನಡೆಸಿದ್ದರು. ಆ ವರ್ಷದ ಲೋಕಸಭಾ ಚುನಾವಣೆ ವೇಳೆ ಎದ್ದ ರಾಜಕೀಯ ಕಲಹವೊಂದರಲ್ಲಿ ಮಧ್ಯಪ್ರವೇಶ ವೇಳೆ ಈ ಘಟನೆ ನಡೆದಿತ್ತು.
ತಮ್ಮ ವಿರುದ್ಧ ಬಂದ ತೀರ್ಪಿಗೆ ಪ್ರತಿಕ್ರಿಯಿಸಿದ ಫೈಝಲ್, ಇದು ರಾಜಕೀಯ ಪ್ರೇರಿತ ಪ್ರಕರಣವಾಗಿದೆ ಹಾಗೂ ಇದರ ವಿರುದ್ಧ ಹೈಕೋರ್ಟ್ ಕದ ತಟ್ಟುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ | ಹೃದಯಾಘಾತದಿಂದ 10ನೇ ತರಗತಿ ವಿದ್ಯಾರ್ಥಿ ಮೃತ್ಯು
Next Story







