ಮಿತ್ತೂರು: ಕೆಜಿಎನ್ ನಲ್ಲಿ ಶಿಷ್ಯ ಸಂಗಮ

ಮಿತ್ತೂರು: ಶೈಖುನಾ ಝೈನುಲ್ ಉಲಮಾ ಖಾಝಿ ಮಾಣಿ ಉಸ್ತಾದರ ಶಿಷ್ಯ ಸಂಗಮ ಮಿತ್ತೂರಿನ ಮಸ್ಜಿದುಲ್ ಬದ್ರ್‌ನಲ್ಲಿ ಜರುಗಿತು.
ಶೈಖುನಾ ಝೈನುಲ್ ಉಲಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆಜಿಎನ್ ದಅವಾ ಕಾಲೇಜಿನ ಪ್ರಾಂಶುಪಾಲರಾದ ಸೈಯದ್ ಸ್ವಲಾಹುದ್ದೀನ್ ಅದನಿ ಜಮಲುಲ್ಲೈಲಿ ದುಆಗೈದರು. ಇಬ್ರಾಹೀಂ ಫೈಝಿ ಕನ್ಯಾನ ಉದ್ಘಾಟಿಸಿದರು. ದಾರುಲ್ ಇರ್ಶಾದ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮುಹಮ್ಮದ್ ಶರೀಫ್ ಸಖಾಫಿ ಮಾಣಿ ಪ್ರಾಸ್ತಾವಿಸಿದರು. ಇಬ್ರಾಹೀಂ ಫೈಝಿ ಪುಲಿಕ್ಕೂರು, ಉಮರುಲ್ ಫಾರೂಖ್ ಮದನಿ ಮಚ್ಚಂಪಾಡಿ, ಇಬ್ರಾಹೀಂ ಸಅದಿ ಮಾಣಿ ಮಾತನಾಡಿದರು.
ರಫೀಖ್ ಸಅದಿ ಮಚ್ಚಂಪಾಡಿ ಸ್ವಾಗತಿಸಿದರು. ಕೆಜಿಎನ್ ದಅವಾ ಕಾಲೇಜಿನ ಪ್ರಧಾನ ಉಪನ್ಯಾಸಕ ಹುಸೈನ್ ಅಹ್ಸನಿ ಅಲ್ ಮುಈನಿ ಮಾರ್ನಾಡ್ ವಂದಿಸಿದರು.
Next Story





