ಬೈಂದೂರು: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
ಬೈಂದೂರು: ಹೊಳೆ ಸಮೀಪದ ನೀರಿನ ಹೊಂಡಕ್ಕೆ ಬಿದ್ದು 7 ವರ್ಷದ ಮಗು ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದ ಮದ್ದೋಡಿ ಎಂಬಲ್ಲಿ ನಡೆದಿದೆ.
ಅನಿಲ (7 ವರ್ಷ) ಮೃತ ಬಾಲಕ. ಇಲ್ಲಿನ ನಿವಾಸಿ ಸುರೇಶ್ ಬಹಾದೂರ್ ಎಂಬವರ ಪತ್ನಿ ಬಸಂತಿ, ಮಕ್ಕಳೊಂದಿಗೆ ವಾಸವಿದ್ದು, ಜ.10ರಂದು ಸಂಜೆ ತೋಟದ ಪಕ್ಕದ ಮದ್ದೋಡಿ ಹೊಳೆಗೆ ಬಟ್ಟೆ ಒಗೆಯಲು ತೆರಳಿದ್ದರು. ಈ ವೇಳೆ ಅನಿಲ್ ಕೂಡ ತಾಯಿಯನ್ನು ಹಿಂಬಾಲಿಸಿದ್ದ ಎಂದು ತಿಳಿದುಬಂದಿದೆ.
ವಾಪಾಸು ಮನೆಗೆ ಹೋಗುವಂತೆ ಅನಿಲನಿಗೆ ತಾಯಿ ಹೇಳಿದ್ದು, ಆತ ಆಡುತ್ತಾ ಹಿಂದಿರುಗುವ ವೇಳೆ ನೀರು ಬೀಳುವ ಜಾಗದಲ್ಲಿ ಚಿಕ್ಕ ನೀರಿನ ಗುಂಡಿಗೆ ಆಕಸ್ಮಿಕವಾಗಿ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





