ಮಂಗಳೂರು: ಮಾದಕ ದ್ರವ್ಯ ಸೇವನೆ ಆರೋಪ; ಇಬ್ಬರ ಸೆರೆ
ಮಂಗಳೂರು: ಮಾದಕ ದ್ರವ್ಯ ಸೇವನೆಯ ಆರೋಪದ ಮೇರೆಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರನ್ನು ನಗರ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ತೊಕ್ಕೊಟ್ಟು ಸಮೀಪದ ಒಳಪೇಟೆಯ ರೈಲ್ವೆ ಟ್ರ್ಯಾಕ್ ಬಳಿ ಮಂಜೇಶ್ವರ ತಾಲೂಕಿನ ಮಂಗಲ್ಪಾಡಿ ಗ್ರಾಮದ ಪೈವಳಿಕೆಯ ಅಬ್ದುಲ್ ಇರ್ಷಾದ್ (30)ಎಂಬಾತನನ್ನು ಉಳ್ಳಾಲ ಪೊಲೀಸರು ಬುಧವಾರ ಪೂ.11:15ಕ್ಕೆ ಬಂಧಿಸಿದ್ದಾರೆ.
ಆರೋಪಿಯು ಮಾದಕ ದ್ರವ್ಯ ಗಾಂಜಾ ಸೇವನೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಇನ್ನೊಂದು ಘಟನೆಯಲ್ಲಿ ನಗರದಲ್ಲಿ ಬುಧವಾರ ಪೂ.11:50ಕ್ಕೆ ಕದ್ರಿ ನಿವಾಸಿ ಶುಭಂ ನಂದನ್ (29)ಎಂಬಾತನನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯು ಸಿಗರೇಟ್‌ನೊಂದಿಗೆ ಮಾದಕ ದ್ರವ್ಯ ಬೆರೆಸಿ ಸೇವಿಸಿ ತಿರುಗಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Next Story