ಕೋಟ: ಇಸ್ಪೀಟು ಜುಗಾರಿ ಅಡ್ಡೆ ಪೊಲೀಸರ ದಾಳಿ, ನಾಲ್ವರ ಬಂಧನ
ಕೋಟ: ಹಾಡಿಯಲ್ಲಿ ಇಸ್ಪೀಟ್ ಜುಗಾರಿ ಆಡುತ್ತಿದ್ದ ವೇಳೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದ ಘಟನೆ ಬ್ರಹ್ಮಾವರ ತಾಲೂಕು ಅಚ್ಲಾಡಿ ಗ್ರಾಮದ ಗರಿಕೆಮಠದ ಬಳಿ ನಡೆದಿದೆ.
ಸಾಬ್ರಕಟ್ಟೆ ನಿವಾಸಿ ಮಂಜುನಾಥ (31), ಅಚ್ಲಾಡಿಯ ಪಳನಿ ಕುಮಾರ (31), ಅಚ್ಲಾಡಿ ಗರಿಕೆಮಠದವರಾದ ಬಸವರಾಜ್ (41), ನಾಗರಾಜ್ (46) ಅವರನ್ನು ವಶಕ್ಕೆ ಪಡೆದು ಅವರ ಬಳಿ ಜುಗಾರಿ ಆಟಕ್ಕೆ ಬಳಸಿದ 4,350 ರೂ. ಸಹಿತ ಇತರ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





