ಭಾರತೀಯ ಆಹಾರ ನಿಗಮದಲ್ಲಿ ಅವ್ಯವಹಾರ: 50ಕ್ಕೂ ಅಧಿಕ ಸ್ಥಳಗಳಲ್ಲಿ ಸಿಬಿಐ ದಾಳಿ

ಹೊಸದಿಲ್ಲಿ, ಜ. 11: ಭಾರತೀಯ ಆಹಾರ ನಿಗಮ (ಎಫ್‌ಸಿಐ)ದ ಹಗರಣಕ್ಕೆ ಸಂಬಂಧಿಸಿ ಕೇಂದ್ರೀಯ ತನಿಖಾ ಮಂಡಳಿ (ಸಿಬಿಐ)ಯು ಬುಧವಾರ ದಿಲ್ಲಿ, ಪಂಜಾಬ್, ಹರ್ಯಾಣ ಮತ್ತು ಚಂಡೀಗಢ ಸೇರಿದಂತೆ 50ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದೆ.
‘‘ಧಾನ್ಯ ವ್ಯಾಪಾರಿಗಳು, ಗಿರಣಿಗಳು ಮತ್ತು ಆಹಾರ ಧಾನ್ಯಗಳ ವಿತರಕರೊಂದಿಗೆ ಭಾರತೀಯ ಆಹಾರ ನಿಗಮದಲ್ಲಿರುವ ಭ್ರಷ್ಟ ಅಧಿಕಾರಿಗಳು ಹೊಂದಿರುವ ಅಪವಿತ್ರ ಮೈತ್ರಿಯನ್ನು ಭೇದಿಸಲು ಸಿಬಿಐ ಬೃಹತ್ ಕಾರ್ಯಾಚರಣೆ ನಡೆಸಿದೆ. ಈ ಅಧಿಕಾರಿಗಳು ಕಳಪೆ ಗುಣಕ್ಷಿುಟ್ಟದ ಆಹಾರ ಧಾನ್ಯಗಳನ್ನು ಪೂರೈಸುತ್ತಿದ್ದರು’’ ಎಂದು ಸಿಬಿಯ ಅಧಿಕಾರಿಯೊಬ್ಬರು ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದರು.
ನಿಗಮದ ಉಪಮಹಾ ಪ್ರಬಂಧಕ ಮಿಶ್ರಾರನ್ನು ಸಿಬಿಐ ಬಂಧಿಸಿದೆ ಹಾಗೂ 50ಕ್ಕಿಂತಲೂ ಹೆಚ್ಚಿನ ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿದೆ.
ಇದಕ್ಕೆ ಸಂಬಂಧಿಸಿ ಸಿಬಿಐಯು 74 ಜನರ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಿದೆ.
Next Story





