ಮಂಗಳೂರು: 10 ದಿನಗಳಲ್ಲಿ 7ಎನ್‌ಡಿಪಿಎಸ್ ಪ್ರಕರಣ; 1.90 ಲಕ್ಷ ಮೌಲ್ಯದ ಮಾದಕ ವಸ್ತುಗಳ ವಶ

ಮಂಗಳೂರು: ಹೊಸ ವರ್ಷದ ಹತ್ತು ದಿನಗಳ ಅವಧಿಯಲ್ಲಿ 7 ಎನ್ ಡಿಪಿಎಸ್(ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್‌ಟೆನ್ಸಸ್)ಪ್ರಕರಣಗಳು ಪತ್ತೆಯಾಗಿದ್ದು, 1.90 ಲಕ್ಷ ಮೌಲ್ಯದ ಮಾದಕ ವಸ್ತುಗಳ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
60 ಸಾವಿರ ರೂ. ಮೌಲ್ಯದ ಎಂಡಿಎಂಎ (ಮೀಥೈಲೆನೆಡಿಯಾಕ್ಸಿ ಮೆಥಾಂಫೆಟಮೈನ್), 90 ಸಾವಿರ ರೂ. ಮೌಲ್ಯದ 4 ಕೆ.ಜಿ.ಗಾಂಜಾ, 40 ಸಾವಿರ ರೂ. ಮೌಲ್ಯದ 8 ಗ್ರಾಮ್ ಮೆಥಾಂಫೆಟಮೈನ್ ವಶಪಡಿಸಿಕೊಳ್ಳಲಾಗಿದೆ.
59,59,280 ರೂ. ಮೌಲ್ಯದ ಮಾದಕ ವಸ್ತುಗಳ ವಶ: 2022ರಲ್ಲಿ ಒಟ್ಟು 398 ಎನ್‌ಡಿಪಿಎಸ್ ಪ್ರಕರಣಗಳು ದಾಖಲಾಗಿದ್ದು, 511 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ 59,59,280 ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 19,50,160 ರೂ . ಮೌಲ್ಯದ 596 ಗ್ರಾಮ್ 010 ಎಂಎಲ್ ಎಂಡಿಎಂಎ (ಮೀಥೈಲೆನೆಡಿಯಾಕ್ಸಿ ಮೆಥಾಂಫೆಟಮೈನ್), 7 ಸಾವಿರ ರೂ. ಮೌಲ್ಯದ 67 ಗ್ರಾಮ್ ಅಫೀಮ್, 37,68,120 ರೂ.ಮೌಲ್ಯದ 192 ಕೆ.ಜಿ. ಮತ್ತು 48 ಗ್ರಾಮ್ ಗಾಂಜಾ, 2,34,000 ರೂ. ಮೌಲ್ಯದ 57 ಗ್ರಾಮ್ ಮೆಥಾಂಫೆಟಮೈನ್ ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.





