ಜೋಶಿಮಠ: ಕೇವಲ 25 ಶೇ. ಮನೆಗಳು ಬಿರುಕು ಬಿಟ್ಟಿವೆ ಎಂದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್

ಹೊಸದಿಲ್ಲಿ: ಕುಸಿಯುತ್ತಿರುವ ಜೋಶಿಮಠ ಪಟ್ಟಣದಲ್ಲಿ ಕೇವಲ 25 ಶೇ. ಮನೆಗಳು ಬಿರುಕು ಬಿಟ್ಟಿವೆ. ಇಂದು ಸಂಜೆಯೊಳಗೆ ಸಂತ್ರಸ್ತರಿಗೆ 1.5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ NDTV ಗೆ ತಿಳಿಸಿದ್ದಾರೆ
ಜೋಶಿಮಠಕ್ಕೆ ಆಗಮಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಧಾಮಿ,"ಜೋಶಿಮಠದ ನಂತರ ರಾಜ್ಯ ಸರಕಾರವು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಇತರ ನಗರಗಳನ್ನು ಅಧ್ಯಯನ ಮಾಡುತ್ತಿದ್ದೇವೆ. ಅವರು ಎಷ್ಟು ತೂಕವನ್ನು ತೆಗೆದುಕೊಳ್ಳಬಹುದು. ಅದರ ಪ್ರಕಾರ, ನಾವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ" ಎಂದು ಹೇಳಿದರು.
ಬದರಿನಾಥದಂತಹ ಜನಪ್ರಿಯ ಯಾತ್ರಾಸ್ಥಳಗಳಿಗೆ ಹೆಬ್ಬಾಗಿಲು ಆಗಿರುವ ದೇವಾಲಯ ಪಟ್ಟಣ ಜೋಶಿಮಠವು ಹಲವು ವರ್ಷಗಳ ಯೋಜಿತವಲ್ಲದ ಮೂಲಸೌಕರ್ಯ ಕಟ್ಟಡ ನಿರ್ಮಾಣದಿಂದಾಗಿ ರಸ್ತೆಗಳಲ್ಲಿ ಭಾರಿ ಬಿರುಕುಗಳು ಕಾಣಿಸಿಕೊಂಡು ಬಿಕ್ಕಟ್ಟನ್ನು ಎದುರಿಸುತ್ತಿದೆ.
ಸುಮಾರು 20,000 ಜನರಿರುವ ಪಟ್ಟಣದಲ್ಲಿ ಅನೇಕ ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ ಹಾಗೂ ಸುಮಾರು 600 ಮನೆಗಳು ಮತ್ತು ಹೋಟೆಲ್‌ಗಳು ಮುಳುಗಿವೆ.





