ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್: ಉಡುಪಿಯ ಅರೀಜ್ ಅಹ್ಮದ್ ಗೆ ಉತ್ತಮ ನಿರ್ಗಮನ ವಿದ್ಯಾರ್ಥಿ ಪ್ರಶಸ್ತಿ

ಉಡುಪಿ: ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್‌ನಲ್ಲಿ ನಡೆದ 23ನೇ ವಾರ್ಷಿಕ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಡುಪಿಯ ನಿವಾಸಿ ಅರೀಜ್ ಅಹ್ಮದ್ (Areej Ahmed) ಅವರು 2021ನೇ ಸಾಲಿನ ಅತ್ಯುತ್ತಮ ನಿರ್ಗಮನ ವಿದ್ಯಾರ್ಥಿ ಪ್ರಶಸ್ತಿ ಪಡೆದಿದ್ದಾರೆ
ಅರೀಜ್, ಆಡಿಯೊಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪ್ಯಾಥಾಲಜಿಯಲ್ಲಿ (BASLP) ತನ್ನ ಬ್ಯಾಚುಲರ್ ಪದವಿಯನ್ನು ಡಿಸ್ಟಿಂಕ್ಷನ್‌ನೊಂದಿಗೆ ಪೂರ್ಣಗೊಳಿಸಿದ್ದರು. ಇವರು ಉಡುಪಿಯ ಖಲೀಲ್ ಅಹಮದ್ ಮತ್ತು ಝೀನತ್ ದಂಪತಿಯ ಪುತ್ರಿಯಾಗಿದ್ದಾರೆ.
ಅರೀಜ್ ಅವರು ಮಣಿಪಾಲ ಮತ್ತು ಮಂಗಳೂರು ಕ್ಯಾಂಪಸ್‌ನಿಂದ ಬಿಎಎಸ್‌ಎಲ್‌ಪಿ ಬ್ಯಾಚ್‌ನ ಅತ್ಯುತ್ತಮ ನಿರ್ಗಮನ ವಿದ್ಯಾರ್ಥಿ ಪ್ರಶಸ್ತಿಯನ್ನು ಪಡೆದರು.
Next Story





