ಪ್ರವಾದಿ ಅವಹೇಳನ ಪ್ರಕರಣದ ಆರೋಪಿ ನೂಪುರ್ ಶರ್ಮಾಗೆ ಬಂದೂಕು ಲೈಸೆನ್ಸ್

ಹೊಸದಿಲ್ಲಿ: ಕಳೆದ ವರ್ಷ ಟಿವಿ ಚರ್ಚೆಯಲ್ಲಿ ಪ್ರವಾದಿಯವರ ಕುರಿತು ವಿವಾದಾತ್ಮಕ ಹೇಳಿಕೆಗಳು ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಹಾಗೂ ಭಾರೀ ಹಿಂಸಾಚಾರಕ್ಕೆ ಕಾರಣವಾಗಿದ್ದ ಮಾಜಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಈಗ ಬಂದೂಕು ಪರವಾನಗಿ ಪಡೆದುಕೊಂಡಿದ್ದಾರೆ ಎಂದು ದಿಲ್ಲಿ ಪೊಲೀಸ್ ಮೂಲಗಳು ಗುರುವಾರ ತಿಳಿಸಿವೆ.
ಆಕೆಯ ರಕ್ಷಣೆಗಾಗಿ ಬಂದೂಕು ಸಾಗಿಸಲು ಪರವಾನಗಿ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ವರ್ಷ ಖಾಸಗಿ ಟಿವಿ ಚಾನೆಲ್ ಒಂದರ ಚರ್ಚೆಯ ಸಂದರ್ಭದಲ್ಲಿ, ಪ್ರವಾದಿ ಮಹಮ್ಮದ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆಗಳು ನೀಡಿ ಭಾರೀ ಹಿಂಸಾಚಾರಕ್ಕೆ ಕಾರಣವಾಗಿದ್ದ ನೂಪುರ್ ಶರ್ಮಾರನ್ನು ಬಿಜೆಪಿ ಪಕ್ಷದ ವಕ್ತಾರೆ ಹುದ್ದೆಯಿಂದ ಅಮಾನತು ಮಾಡಿತ್ತು.
ಇತ್ತೀಚೆಗೆ ದಿಲ್ಲಿ ಪೊಲೀಸ್ ಪರವಾನಗಿ ಘಟಕದ ಮುಂದೆ ಮನವಿ ಸಲ್ಲಿಸಿರುವ ನೂಪುರ್ ಶರ್ಮಾ, ತನ್ನ ಜೀವಕ್ಕೆ ಅಪಾಯವಿದೆ ಮತ್ತು ಆತ್ಮರಕ್ಷಣೆಗಾಗಿ 24 ಗಂಟೆಯೂ ತನಗೆ ಗನ್ ಅಗತ್ಯವಿದೆ ಎಂದು ಮನವಿ ಮಾಡಿದ್ದರು. ಪೊಲೀಸ್ ಘಟಕವು ಅಭಿಪ್ರಾಯಗಳನ್ನು ಪಡೆದು ವಿಷಯದ ಗಂಭೀರತೆಯನ್ನು ಅರ್ಥಮಾಡಿಕೊಂಡ ನಂತರ ಆಕೆಯ ಮನವಿಗೆ ಅವಕಾಶ ಮಾಡಿಕೊಟ್ಟಿದೆ ಎಂದು deccanherald.com ವರದಿ ಮಾಡಿದೆ.





