ಬಂಟ್ವಾಳ: ದ್ವಿಚಕ್ರ ವಾಹನಕ್ಕೆ ಸಿಮೆಂಟ್ ಮಿಕ್ಸರ್ ಲಾರಿ ಢಿಕ್ಕಿ; ಇಬ್ಬರಿಗೆ ಗಾಯ

ಬಂಟ್ವಾಳ: ದ್ವಿಚಕ್ರ ವಾಹನವೊಂದಕ್ಕೆ ಸಿಮೆಂಟ್ ಮಿಕ್ಸರ್ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ತಾಯಿ ಮತ್ತು ಮಗ ಗಾಯಗೊಂಡ ಘಟನೆ ಬಂಟ್ವಾಳ ಸಮೀಪದ ಚೆಂಡ್ತಿಮಾರ್ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ.
ಸರಪಾಡಿ ಗ್ರಾಮದ ವಚ್ಚಾರ್ ನಿವಾಸಿ ರಾಜೀವಿ ಹಾಗೂ ಅವರ ಮಗ ಸಂತೋಷ್ ಅಂಚನ್ ಗಾಯಗೊಂಡವರು. ಗಾಯಗೊಂಡವರನ್ನು ತುಂಬೆ ಖಾಸಗಿ ಆಸ್ಪತ್ರೆ ಗೆ ದಾಖಲಿಸಿಲಾಗಿದೆ.
ಇದೇ ಸ್ಥಳದಲ್ಲಿ ಹಲವು ಅಪಘಾತಗಳು ಸಂಭವಿಸಿದ್ದು, ಇಲ್ಲಿ ಸೂಚನಾ ಫಲಕ, ಸ್ಪೀಡ್ ಬ್ರೇಕರ್ ಹಾಕಿದ ಬಳಿಕವೂ ಇಲ್ಲಿ ಅಪಘಾತ ನಡೆಯುವುದು ಕಡಿಮೆಯಾಗದ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
Next Story





