Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕರ್ಣಪ್ರಯಾಗ, ಲಾಂಡೋರ್ ಸಹಿತ‌...

ಕರ್ಣಪ್ರಯಾಗ, ಲಾಂಡೋರ್ ಸಹಿತ‌ ಉತ್ತರಾಖಂಡದ ಹಲವು ಸ್ಥಳಗಳಿಗೆ ಭೂಕುಸಿತದ ಭೀತಿ

12 Jan 2023 10:10 PM IST
share
ಕರ್ಣಪ್ರಯಾಗ, ಲಾಂಡೋರ್ ಸಹಿತ‌ ಉತ್ತರಾಖಂಡದ ಹಲವು ಸ್ಥಳಗಳಿಗೆ ಭೂಕುಸಿತದ ಭೀತಿ

ಡೆಹ್ರಾಡೂನ್, ಜ.12: ಪ್ರಸಿದ್ಧ ತೀರ್ಥಯಾತ್ರಾ ಪಟ್ಟಣಗಳಾದ ಕರ್ಣ ಪ್ರಯಾಗ ಹಾಗೂ ಲಾಂಡೋರ್ ಸೇರಿದಂತೆ ಉತ್ತರಾಖಂಡದ ಹಲವಾರು ಸ್ಥಳಗಳು ಭೂಕುಸಿತದ ಭೀತಿಯನ್ನು ಎದುರಿಸುತ್ತಿದ್ದು ಜೋಶಿಮಠದ ಪರಿಸ್ಥಿತಿಯು ಈ ಸಮಸ್ಯೆಯ ಬಗ್ಗೆ ಹೊಸ ಬೆಳಕನ್ನು ಚೆಲ್ಲಿದೆ. ಜೋಶಿಮಠದಿಂದ 80 ಕಿ.ಮೀ. ದೂರದಲ್ಲಿರುವ ಕರ್ಣಪ್ರಯಾಗದ ಬಹುಗುಣ ನಗರದಲ್ಲಿ ಕನಿಷ್ಠ 50 ಮನೆಗಳಲ್ಲಿ 2015ರಿಂದಲೇ ಬಿರುಕುಗಳು ಕಂಡುಬಂದಿವೆ.

ಭೂಮಿಯಲ್ಲುಂಟಾದ ಬಿರುಕುಗಳೇ ಭೂಕುಸಿತಕ್ಕೆ ಕಾರಣವೆಂದು ಸ್ಥಳೀಯರ ವಾದವಾಗಿದೆ. ರಾಷ್ಟ್ರೀ ಯ ಹೆದ್ದಾರಿಯ ಅಗಲೀಕರಣ, ಮಂಡಿಪರಿಷದ್ ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ನಿಯಮಗಳ ಉಲ್ಲಂಘನೆ, ಪಿಂಡಾರ್ನದಿಯ ಪ್ರವಾಹದಿಂದ ಭೂಸವೆತ ಹಾಗೂ ಅವ್ಯವಸ್ಥಿತವಾಗಿ ಮಳೆನೀರಿನ ಹೊರಚೆಲ್ಲುವಿಕೆಯಿಂದಾಗಿ ಭೂಮಿ ಬಿರುಕುಬಿಡುತ್ತಿದೆಯೆಂದು ಅವರ ಅಭಿಪ್ರಾಯವಾಗಿದೆ.

2015ರಲ್ಲಿ ಮೇಲಿನ ಪ್ರದೇಶದಲ್ಲಿ ಉಂಟಾದ ಭೂಕುಸಿತದ ಅವಶೇಷಗಳು  ಬಹುಗುಣ ನಗರದ ಮೇಲೆ ರಾಶಿರಾಶಿಯಾಗಿ ಬಿದ್ದ ಪರಿಣಾಮ ಮೊದಲ ಬಾರಿಗೆ ಮನೆಗಳಿಗೆ ಹಾನಿಯುಂಟು ಮಾಡಿತ್ತೆಂದು ಕರ್ಣಪ್ರಯಾಗದ ನಗರಸಭೆಯ ಮಾಜಿ ಅಧ್ಯಕ್ಷ ಸುಭಾಷ್ ಗೈರೊಲಾ ತಿಳಿಸಿದ್ದಾರೆ. ಆದರೆ ಸ್ಥಳೀಯ ನಗರಸಭೆಯು ತಕ್ಷಣವೇ ಮಧ್ಯಪ್ರವೇಶಿಸಿ, ತ್ವರಿತವಾಗಿ ಕಾರ್ಯಾಚರಣೆ ನಡೆಸಿ  ಉಂಟಾಗಬಹುದಾದ  ಭಾರೀ ಹಾನಿಯನ್ನು ತಡೆಗಟ್ಟಲು ಸಫಲವಾಯಿತೆಂದು ಅವರು ಹೇಳುತ್ತಾರೆ.

ಆದರೂ, ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಗಲೀಕರಣ ಹಾಗೂ ಕರ್ಣಪ್ರಯಾಗ-ಕಂಖೂಲ್ ರಸ್ತೆಯುದ್ದಕ್ಕೂ ಚರಂಡಿಯಿಲ್ಲದೆ ಇರುವುದರಿಂದ ಮಳೆನೀರನ್ನು ಅವ್ಯವಸ್ಥಿತವಾಗಿ ಹೊರಹಾಕುತ್ತಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ.

ಆಲಕಾನಂದ ಹಾಗೂ ಪಿಂಡಾರ್ ನದಿಗಳ ಸಂಗಮಸ್ಥಳದಲ್ಲಿ ಸ್ಥಾಪಿತವಾಗಿರುವ ಕರ್ಣಪ್ರಯಾಗವು ಮಳೆಗಾಲದ ಸಂದರ್ಭದಲ್ಲಿ ಮಣ್ಣಿನ ತೀವ್ರ ಸವೆತದಿಂದ ಬಾಧಿತವಾಗಿದೆ. ಮಳೆಗಾಲದ ಸಂದರ್ಭದಲ್ಲಿ ನೆರೆನೀರು ಮನೆಗಳಿಗೆ ನುಗ್ಗುತ್ತಿರುವುದರಿಂದ, ತಳಪಾಯಗಳು ದುರ್ಬಲಗೊಳ್ಳುತ್ತಿವೆ.

ಗೋಪೇಶ್ವರದಲ್ಲಿರುವ ಚಮೋಲಿ ಜಿಲ್ಲೆಯ ಮುಖ್ಯಕಾರ್ಯಾಲಯ ಹಾಗೂ ಕೇದಾರನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗುಪ್ತಾಕ್ಷಿ ಸಮೀಪದ ಸೆಮಿ ಗ್ರಾಮ ಕೂಡಾ ಇಂತಹದೇ ಪರಿಸ್ಥಿತಿಯನ್ನು ಎದುರಿಸುತ್ತವೆಯೆಂದು ಗೈರೊಲಾ ತಿಳಿಸಿದ್ದಾರೆ. ಸಂತ್ರಸ್ತ ಜನತೆಗೆ ತಕ್ಷಣವೇ ನೆರವು ನೀಡಬೇಕೆಂದು ಆಗ್ರಹಿಸಿದ ಅವರು ಸ್ಥಳೀಯ ಸುರಕ್ಷತೆಯನ್ನು ಖಾತರಿಪಡಿಸಲು ದೀರ್ಘಾವಧಿಯ ಯೋಜನೆಗಳನ್ನು ಜಾರಿಗೊಳಿಸಬೇಕೆಂದು ಗೈರೋಲಾ ಆಗ್ರಹಿಸಿದ್ದಾರೆ. 

ಋಷಿಕೇಶ ಸಮೀಪ ಕುಸಿಯುತ್ತಿರುವ ರಸ್ತೆ

ಉತ್ತರಾಖಂಡದ ಪ್ರಸಿದ್ಧ ಯಾತ್ರಾಸ್ಥಳವಾದ ಋಷಿಕೇಶ ಸಮೀಪದ ಮುಸ್ಸೂರಿಯ ಲಾಂಡೋರ್ ಹಾಗೂ ಅಟಾಲಿ ಗ್ರಾಮದಲ್ಲಿಯೂ ಭೂಕುಸಿತದ ಘಟನೆಗಳು ವರದಿಯಾಗಿ. ಕಳೆದ 30 ವರ್ಷಗಳಿಂದೀಚೆಗೆ ಮುಸ್ಸೂರಿಯಲ್ಲಿರುವ ಲಾಂಡೌರ್ ಚೌಕದಿದ ಕೊಹಿನೂರ್ ಕಟ್ಟಡದವರೆಗಿನ 100 ಮೀಟರ್ ವಿಸ್ತೀರ್ಣದ ರಸ್ತೆಯು ನಿಧಾನವಾಗಿ ಕುಸಿಯುತ್ತಿದೆ. ಯಾತ್ರಾಸ್ಥಳದಲ್ಲಿರುವ ಬೃಹತ್ ನಿರ್ಮಾಣ ಚಟುವಟಿಕೆಗಳು ಹಾಗೂ ಕಳಪೆ ಒಳಚರಂಡಿ ವ್ಯವಸ್ಥೆಯು ನೀರು ನಿಲ್ಲಲು ಕಾರಣವಾಗಿದೆಯೆಂದವರು ಹೇಳಿದ್ದಾರೆ.

ರಿಶಿಕೇಶ ಸಮೀಪದ ಅಟಾಲಿ ಗ್ರಾಮದಲ್ಲಿಯೂ ನೆಲದಲ್ಲಿ ಬಿರುಕುಗಳು ಕಂಡುಬಂದಿವೆ. ಈ ಪ್ರದೇಶದಲ್ಲಿ ರೈಲ್ವೆ ಸುರಂಗವನ್ನು ನಿರ್ಮಿಸಲಾಗುತ್ತಿರುವುವುದರಿಂದ ಭೂಮಿಯಲ್ಲಿ ಬಿರುಕುಂಟಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಆಸುಪಾಸಿನ ಗ್ರಾಮಗಳಾದ ಸಿಂಗ್ತಾಲಿ, ಲೋಡ್ಸಿ, ಕೌಡಿಯಾಲಾ ಹಾಗೂ ಬಾವನಿ ಗ್ರಾಮಗಲ್ಲಿಯೂ ಬಿರುಕುಗಳು ಮೂಡಿವೆ.
ಜನವರಿ 15ರಿಂದ ಭೂಮಿಯಲ್ಲಿ ಬಿರುಕು ಕಂಡುಬಂದಿರುವ ಗ್ರಾಮಗಳ ಸ್ಥಳಪರಿಶೀಲನೆ ನಡೆಯಲಿದ್ದು, ಇದಕ್ಕಾಗಿ ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆಯೆಂದು ಜಿಲ್ಲಾಧಿಕಾರಿ ದೇವೇಂದ್ರ ನೇಗಿ ತಿಳಿಸಿದ್ದಾರೆ.

ಜೋಶಿಮಠದ 3,000 ಕುಟುಂಬಗಳಿಗೆ 45 ಕೋ. ರೂ. ಪುನರ್ವಸತಿ ಪ್ಯಾಕೇಜ್ 

ಬಿರುಕು ಮೂಡಿದ ಜೋಶಿಮಠದ ರಸ್ತೆಗಳ ಸಮೀಪ ಹಾಗೂ ಮನೆಗಳಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಉತ್ತರಾಖಂಡ ರಾಜ್ಯ ಸರಕಾರ 45 ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಿಸಿದೆ. ಉತ್ತರಾಖಂಡದಲ್ಲಿ ಭೂಕುಸಿತದಿಂದ ತೊಂದರೆಗೊಳಗಾದ ಸುಮಾರು 3,000 ಕುಟುಂಬಗಳಿಗೆ ಪರಿಹಾರ ಪ್ಯಾಕೇಜ್ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ತಿಳಿಸಿದ್ದಾರೆ. ‘‘ಪ್ರತಿಯೊಂದು ಕುಟುಂಬಕ್ಕೆ ತಾತ್ಕಾಲಿಕವಾಗಿ 1.50 ಲಕ್ಷ ರೂ. ಮಧ್ಯಂತರ ಪರಿಹಾರ ನೀಡಲಾಗುವುದು. ಖಾಯಂ ನಿವಾಸಿಗಳ ತೆರವು ನೀತಿ ರೂಪಿಸುವುದಕ್ಕಿಂತ ಮುನ್ನ ಇಲ್ಲಿದ್ದು, ಭೂಕುಸಿತದಿಂದ ತೊಂದರೆಗೊಳಗಾದ ಕುಟುಂಬಗಳು, ಭೂ ಮಾಲಿಕರಿಗೆ ಮುಂಗಡ ಮೊತ್ತ 1 ಲಕ್ಷ ರೂಪಾಯಿ ನೀಡಲಾಗುವುದು’’ ಎಂದು ಧಾಮಿ ಸುದ್ದಿಗಾರರಿಗೆ ತಿಳಿಸಿದರು. ತಮ್ಮ ಕಟ್ಟಡಗಳಿಗೆ ತತ್ಕ್ಷಣದ ಅಗತ್ಯಕ್ಕೆ ಹಾಗೂ ಸರಕುಗಳ ಸಾಗಾಟಕ್ಕೆ ಹೊಂದಾಣಿಕೆ ಮಾಡಲಾಗದ ಒಂದು ಬಾರಿಯ ಅನುದಾನವಾಗಿ ಪ್ರತಿ ಕುಟುಂಬಕ್ಕೆ ರಾಜ್ಯ ವಿಪತ್ತು ಪ್ರಾಧಿಕಾರದಿಂದ 50 ಸಾವಿರ ರೂಪಾಯ ನೀಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ.

share
Next Story
X