ಮಂಗಳೂರು: ಬ್ಯಾಂಕ್ ಖಾತೆಯ ಮಾಹಿತಿ ಪಡೆದು ಸುಮಾರು 1 ಲಕ್ಷ ರೂ. ವಂಚನೆ

ಮಂಗಳೂರು: ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಹಣವನ್ನು ಉಪಾಯದಿಂದ ವಂಚಕನೊಬ್ಬ ತನ್ನ ಖಾತೆಗೆ ವರ್ಗಾಯಿಸಿರುವುದಾಗಿ ವರದಿಯಾದಿದ್ದು, ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ವ್ಯಕ್ತಿಯೊಬ್ಬರು ಜ.8ರಂದು yatra.comನಲ್ಲಿ ಟಿಕೆಟ್ ಬುಕ್ ಮಾಡಿ 6,380 ರೂ.ವನ್ನು ಆನ್‌ಲೈನ್‌ನಲ್ಲಿ ಪಾವತಿ ಮಾಡಿದ್ದರು. ಆದರೆ ಟಿಕೆಟ್ ಬಾರದಿದ್ದಾಗ ಜ.9ರಂದು ಅದೇ yatra.comನವರಿಗೆ ಕರೆ ಮಾಡಿ ಹಣ ಹಿಂತಿರುಗಿಸುವಂತೆ ಸೂಚಿಸಿದರು ಎನ್ನಲಾಗಿದೆ. ಕರೆ ಸ್ವೀಕರಿಸಿದ ಆ ವ್ಯಕ್ತಿಯು ಫಿರ್ಯಾದಿದಾರರ ಬ್ಯಾಂಕ್ ಖಾತೆಯ ಕೊನೆಯ 6 ಡಿಜಿಟ್ ಸಂಖ್ಯೆ ತಿಳಿಸುವಂತೆ ಕೋರಿಕೊಂಡರು. ಅದರಂತೆ ಫಿರ್ಯಾದಿದಾರರು ಕೊನೆಯ 6 ಡಿಜಿಟ್ ಸಂಖ್ಯೆ ಹೇಳಿದ್ದರು. ಜ.11ರಂದು ಎಸ್‌ಬಿಐನಿಂದ ಬಂದ ಸಂದೇಶವನ್ನು ಪರಿಶೀಲಿಸಿದಾಗ ಎಸ್‌ಬಿಐ ಬ್ಯಾಂಕ್‌ನ ತನ್ನ ಖಾತೆಯಿಂದ 99,860 ರೂ. ಬೇರೆ ಖಾತೆಗೆ ವರ್ಗಾವಣೆಯಾಗಿರುವುದಾಗಿ ವರದಿಯಾಗಿದೆ.
ತಾನು ಮೋಸ ಹೋಗಿರುವ ಬಗ್ಗೆ ತಿಳಿದ ಫಿರ್ಯಾದಿದಾರರು yatra.comನವರು ಎಂದು ನಂಬಿಸಿ ಮೋಸದಿಂದ ಕರೆ ಮಾಡಿ ಆನ್‌ಲೈನ್ ಮೂಲಕ 99,860 ರೂ. ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.