ನಾನು ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿಲ್ಲ, ಆಕೆಯೇ ಮಾಡಿರಬೇಕು: ಶಂಕರ್ ಮಿಶ್ರಾ
ಏರ್ ಇಂಡಿಯಾ ವಿಮಾನದಲ್ಲಿ ಅನುಚಿತ ವರ್ತನೆ ಆರೋಪ ನಿರಾಕರಿಸಿದ ಆರೋಪಿ

ಹೊಸದಿಲ್ಲಿ: ಏರ್ ಇಂಡಿಯಾ ವಿಮಾನದಲ್ಲಿ ಸಹಪ್ರಯಾಣಿಕೃೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಶಂಕರ್ ಮಿಶ್ರಾ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ. ದೂರುದಾರೆಯೇ ಸ್ವತಃ ಮೂತ್ರ ಮಾಡಿಕೊಂಡಿರಬಹುದು, ಅಥವಾ ಇನ್ಯಾರಾದರೂ ಅವರ ಮೇಲೆ ಮೂತ್ರ ವಿಸರ್ಜನೆ ಮಾಡಿರಬಹುದು, ನಾನು ಆ ತಪ್ಪು ಮಾಡಿಲ್ಲ ಎಂದು ಆರೋಪಿ ದಿಲ್ಲಿ ನ್ಯಾಯಾಲಯದ ಎದುರು ಹೇಳಿರುವುದಾಗಿ ವರದಿಯಾಗಿದೆ.
“ಆಕೆ (ದೂರುದಾರೆ) ಪ್ರಾಸ್ಟೇಟ್‌ಗೆ ಸಂಬಂಧಿಸಿದ ಯಾವುದೋ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆಕೆಯ ಸೀಟ್ ಬಳಿಗೆ ಯಾರೂ ಹೋಗದಂತಹ ಸ್ಥಿತಿ ಇತ್ತು. ಅವರ ಆಸನವನ್ನು ಹಿಂದಿನಿಂದ ಮಾತ್ರ ಸಂಪರ್ಕಿಸಬಹುದಾಗಿತ್ತು, ಯಾವುದೇ ಸಂದರ್ಭದಲ್ಲಿ ಮೂತ್ರವು ಸೀಟಿನ ಮುಂಭಾಗದ ಪ್ರದೇಶಕ್ಕೆ ತಲುಪಲು ಸಾಧ್ಯವಿರಲಿಲ್ಲ. ಅಲ್ಲದೆ, ದೂರುದಾರರ ಹಿಂದೆ ಕುಳಿತಿದ್ದ ಪ್ರಯಾಣಿಕರು ಅಂತಹ ಯಾವುದೇ ದೂರು ನೀಡಿಲ್ಲ” ಎಂದು ಆರೋಪಿ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
2022ರ ನವೆಂಬರ್ 26 ರಂದು, ಮುಂಬೈ ಮೂಲದ ಉದ್ಯಮಿ ಶಂಕರ್ ಮಿಶ್ರಾ ಕುಡಿದ ಮತ್ತಿನಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ್ದ ಎಂದು ಆರೋಪಿಸಲಾಗಿತ್ತು. ನ್ಯೂಯಾರ್ಕ್‌ನಿಂದ ದಿಲ್ಲಿಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿತ್ತು. ಪ್ರಕರಣ ಸಂಬಂಧಿಸಿದಂತೆ ಶಂಕರ್ ಮಿಶ್ರಾರಿಗೆ ದಿಲ್ಲಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು.
ಇದನ್ನು ಓದಿ: ಎಸ್‍ಸಿ-ಎಸ್‍ಟಿ ಮೀಸಲಾತಿ ಪ್ರಮಾಣ ಹೆಚ್ಚಳ: ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ







