ಅಡಿಕೆ ಕುರಿತ ಹೇಳಿಕೆ ಸಮರ್ಥಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಉಡುಪಿ: ಅಡಿಕೆ ಬೆಳೆಗಾರರಿಗೆ ಪ್ರೋತ್ಸಾಹ ನೀಡಬಾರದು ಎಂಬ ವಿಧಾನಸಭೆಯಲ್ಲಿನ ತಮ್ಮ ಹೇಳಿಕೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಸಮರ್ಥಿಸಿಕೊಂಡಿದ್ದಾರೆ.
ಅಡಿಕೆ ಬೆಳೆಗಾರರ ಜೊತೆಗೆ ನಾನು ಇದ್ದೇನೆ. ಸರಕಾರ ಪ್ರೋತ್ಸಾಹ ಕೊಟ್ಟು ಬಯಲು ಸೀಮೆಯಲ್ಲಿ ಹೊಸ ಅಡಿಕೆ ತೋಟ ಮಾಡಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದೇನೆ. ಪರಂಪರಾಗತವಾಗಿ ಬೆಳೆಯುವ ಕರಾವಳಿ ಮಲೆನಾಡಿನಲ್ಲಿ ನಾವು ಮಾತ್ರ ಅಡಿಕೆ ಬೆಳೆಯುತ್ತೇವೆ ಎಂದರು.
ವರ್ಷಕ್ಕೆ ಒಂದು ಕೋಟಿ ಅಡಿಕೆ ಸಸಿ ಮಾರಾಟ ಆಗುತ್ತದೆ. ಆಂಧ್ರ ಪ್ರದೇಶದಲ್ಲಿ ಎರಡು ಸಾವಿರ ಎಕರೆಯಲ್ಲಿ ಈಗಾಗಲೇ ಫಸಲು ಬರಲು ಆರಂಭವಾಗಿದೆ. ಹಾಗಾದರೆ ಅಡಿಕೆ ದರ ಎಷ್ಟು ದಿನ ನಿಲ್ಲಬಹುದು. ಅಡಿಕೆಗೆ ಬಂದ ರೇಟ್ ಅಡಿಕೆಗೆ ಶಾಪ ಆಗಿದೆ. ಆದುದರಿಂದ ಸರಕಾರ ಪ್ರೋತ್ಸಾಹದಿಂದ ಹೊಸ ತೋಟ ಆಗುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದರು.
Next Story