ತೆರಿಗೆ ವಂಚನೆ: ಡೊನಾಲ್ಡ್ ಟ್ರಂಪ್ ಸಂಸ್ಥೆಗೆ 1.6 ದಶಲಕ್ಷ ಡಾಲರ್ ದಂಡ

ವಾಷಿಂಗ್ಟನ್, ಜ.13: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕುಟುಂಬದ ವ್ಯವಹಾರ ಸಂಸ್ಥೆಯು ಸುಳ್ಳು ದಾಖಲೆ ಒದಗಿಸಿ ತೆರಿಗೆ ವಂಚಿಸಿದ ಅಪರಾಧಕ್ಕೆ ಸಂಸ್ಥೆಯ ವಿರುದ್ಧ 1.6 ದಶಲಕ್ಷ ಡಾಲರ್ ದಂಡ ವಿಧಿಸಿ ನ್ಯೂಯಾರ್ಕ್ನ ನ್ಯಾಯಾಲಯ ಶುಕ್ರವಾರ ಆದೇಶ ಜಾರಿಗೊಳಿಸಿದೆ.
‘ದಿ ಟ್ರಂಪ್ ಕಾರ್ಪೊರೇಶನ್ ಆ್ಯಂಡ್ ಟ್ರಂಪ್ ಪೇರೋಲ್ ಕಾರ್ಪೊರೇಶನ್ ಸಂಸ್ಥೆಯು ತೆರಿಗೆ ತಪ್ಪಿಸಿದ ಪ್ರಕರಣದಲ್ಲಿ 17 ಕೌಂಟ್ ಅಪರಾಧ ಎಸಗಿದೆ ಎಂದು ಕಳೆದ ತಿಂಗಳಲ್ಲಿ ನ್ಯಾಯಾಲಯ ತೀರ್ಪು ನೀಡಿತ್ತು. ಈ ಸಂಸ್ಥೆಯ ಮಾಜಿ ಮುಖ್ಯ ಆರ್ಥಿಕ ಅಧಿಕಾರಿ ಅಲೆನ್ ವೆಸೆಲ್ಬರ್ಗ್ಗೆ 3 ದಿನದ ಹಿಂದೆ ಮ್ಯಾನ್ಹಟನ್ ಕ್ರಿಮಿನಲ್ ಕೋರ್ಟ್ 5 ತಿಂಗಳ ಜೈಲುಶಿಕ್ಷೆ ವಿಧಿಸಿದೆ.
ಇದನ್ನು ಓದಿ: ತೀವ್ರ ಆರ್ಥಿಕ ಸಂಕಷ್ಟ: ಸೇನಾ ಸಿಬ್ಬಂದಿ ಕಡಿತಕ್ಕೆ ಶ್ರೀಲಂಕಾ ನಿರ್ಧಾರ
Next Story