Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹಡಗಿನಲ್ಲಿ ‘ಜಗತ್ತಿನ ಅತಿ ಉದ್ದದ ಯಾನ’...

ಹಡಗಿನಲ್ಲಿ ‘ಜಗತ್ತಿನ ಅತಿ ಉದ್ದದ ಯಾನ’ ಗಂಗಾ ನದಿಯ ಡಾಲ್ಫಿನ್ ಗಳಿಗೆ ಬೆದರಿಕೆ: ಪರಿಸರವಾದಿಗಳ ಎಚ್ಚರಿಕೆ

13 Jan 2023 11:40 PM IST
share
ಹಡಗಿನಲ್ಲಿ ‘ಜಗತ್ತಿನ ಅತಿ ಉದ್ದದ ಯಾನ’ ಗಂಗಾ ನದಿಯ ಡಾಲ್ಫಿನ್ ಗಳಿಗೆ ಬೆದರಿಕೆ: ಪರಿಸರವಾದಿಗಳ ಎಚ್ಚರಿಕೆ

ವಾರಾಣಸಿ, ಜ. 13: ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶದ ವಾರಾಣಸಿಯಿಂದ ‘‘ಜಗತ್ತಿನ ಅತಿ ಉದ್ದದ ನದಿ ಯಾನ’’ವನ್ನು ಶುಕ್ರವಾರ ಉದ್ಘಾಟಿಸಿದ್ದಾರೆ. ಈ ವಿಲಾಸಿ ಹಡಗು ಯಾನವು ಬಾಂಗ್ಲಾದೇಶದ ಢಾಕಾದಿಂದ ಅಸ್ಸಾಂ ದಿಬ್ರೂಗಢ್ವರೆಗೆ 27 ನದಿಗಳನ್ನು ದಾಟಿ 3,200 ಕಿ.ಮೀ. ದೂರ ಕ್ರಮಿಸುತ್ತದೆ. ಅದಕ್ಕಾಗಿ 51 ದಿನಗಳನ್ನು ತೆಗೆದುಕೊಳ್ಳುತ್ತದೆ.

ಮೂರು ಮಹಡಿಗಳ ಎಮ್ವಿ ಗಂಗಾ ವಿಲಾಸ್ ಹಡಗು ಪ್ರವಾಸಿಗರನ್ನು ಒಯ್ಯುತ್ತದೆ. ಗಂಗಾ ನದಿಯಲ್ಲಿರುವ ಹಡಗು ಯಾನ ಉದ್ದಿಮೆ ‘‘ಮಹತ್ವದ ಕ್ಷಣ’’ವಾಗಿದೆ ಎಂಬುದಾಗಿ ಮೋದಿ ಬಣ್ಣಿಸಿದ್ದಾರೆ. ಇದು ಭಾರತದಲ್ಲಿ ಪ್ರವಾಸೋದ್ಯಮದ ನೂತನ ಯುಗವೊಂದಕ್ಕೆ ನಾಂದಿ ಹಾಡುತ್ತದೆ ಎಂದು ಅವರು ಹೇಳಿದ್ದಾರೆ.
ಆದರೆ, ನದಿ ಯಾನಗಳ ಹೆಚ್ಚಳವು ಗಂಗಾ ನದಿಯಲ್ಲಿರುವ ಡಾಲ್ಫಿನ್ ಗಳ ವಾಸ ಸ್ಥಳಕ್ಕೆ ಶಾಶ್ವತ ಹಾನಿಯನ್ನು ಉಂಟು ಮಾಡಬಹುದಾಗಿದೆ ಎಂದು ಪರಿಸರವಾದಿಗಳು ಹೇಳುತ್ತಾರೆ.
‘ಎಮ್ವಿ ಗಂಗಾ ವಿಲಾಸ್’ ವಾರಾಣಸಿಯಿಂದ 30 ಕಿ.ಮೀ. ದೂರದಲ್ಲಿ ಗಂಗಾ ಮತ್ತು ಗೋಮತಿ ನದಿಗಳ ಸಂಗಮ ಸ್ಥಳವಾಗಿರುವ ಕೈತಿ ಗ್ರಾಮದ ಮೂಲಕ ಹಾದು ಹೋಗುತ್ತದೆ. ಈ ಸಂಗಮ ಸ್ಥಳದ ಸುತ್ತಮುತ್ತ ನದಿ ಆಳವಾಗಿದೆ ಮತ್ತು ನೀರಿನ ಸೆಳೆತ ನಿಧಾನವಾಗಿದೆ. ಹಾಗಾಗಿ, ಅಳಿವಿನಂಚಿನಲ್ಲಿರುವ ಡಾಲ್ಫಿನ್ ಗಳ ವಾಸಸ್ಥಳ ಇದಾಗಿದೆ. ಕಳೆದ ವರ್ಷದ ಅಕ್ಟೋಬರ್ ನಲ್ಲಿ, ಈ ಸ್ಥಳದಲ್ಲಿ ವನ್ಯಜೀವಿ ಅಧಿಕಾರಿಗಳು ಡಾಲ್ಫಿನ್ಗಳು ಮತ್ತು ಅವುಗಳ ಮರಿಗಳ ಒಂದು ಗುಂಪನ್ನು ಪತ್ತೆಹಚ್ಚಿದ್ದಾರೆ. ಅದರ ಆಧಾರದಲ್ಲಿ, ಈ ಸ್ಥಳದಲ್ಲಿ 35ರಿಂದ 39 ಡಾಲ್ಫಿನ್ ಗಳು ಇರಬಹುದು ಎಂಬುದಾಗಿ ಅಂದಾಜಿಸಿದ್ದಾರೆ.

ಡಾಲ್ಫಿನ್ ಗಳ ವಾಸಸ್ಥಾನಗಳು ಸಂರಕ್ಷಿತ ಪ್ರದೇಶಗಳಾಗಿವೆ. ಗಂಗಾ ಮತ್ತು ಗೋಮತಿ ನದಿಗಳ ಸಂಗಮವು ಇಂಥ ಒಂದು ಸಂರಕ್ಷಿತ ಪ್ರದೇಶವಾಗಿದೆ. ಬಿಹಾರದಲ್ಲಿರುವ ವಿಕ್ರಮ್ಶಿಲಾ ಗಂಗಾ ನದಿ ಡಾಲ್ಫಿನ್ ಅಭಯಧಾಮವು ಹಡಗು ಯಾನ ಮಾರ್ಗದಲ್ಲಿ ಬರುವ ಇಂಥ ಇನ್ನೊಂದು ಸಂರಕ್ಷಿತ ಪ್ರದೇಶವಾಗಿದೆ.
‘‘ಈಗಾಗಲೇ ಇರುವ ಅಪಾಯಗಳಿಗೆ ಹೆಚ್ಚುವರಿಯಾಗಿ, ಹಡಗು ಯಾನವು ಡಾಲ್ಫಿನ್ ಗಳನ್ನು ಇನ್ನಷ್ಟು ಹೆಚ್ಚಿನ ಅಪಾಯಕ್ಕೆ ಒಳಪಡಿಸುತ್ತದೆ’’ ಎಂದು ಪರಿಸರವಾದಿ ರವೀಂದ್ರ ಕುಮಾರ್ ಸಿನ್ಹಾ ಹೇಳುತ್ತಾರೆ.

ಅವರ ಪ್ರಯತ್ನಗಳಿಂದಾಗಿ, ಸರಕಾರವು 1990ರ ದಶಕದಲ್ಲಿ ಗಂಗಾ ನದಿಯ ಡಾಲ್ಫಿನ್ ಗಳನ್ನು ಸಂರಕ್ಷಿತ ಪ್ರಭೇದಗಳು ಎಂಬುದಾಗಿ ಘೋಷಿಸಿತ್ತು. ಅಂದಿನಿಂದ ಡಾಲ್ಫಿನ್ ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಸುಧಾರಿತ ನೀರಿನ ಗುಣಮಟ್ಟ ಮತ್ತು ಸಂರಕ್ಷಣಾ ಕ್ರಮಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಗಂಗಾ ನದಿಯಲ್ಲಿ ಸುಮಾರು 3,200 ಮತ್ತು ಬ್ರಹ್ಮಪುತ್ರ ನದಿಯಲ್ಲಿ ಸುಮಾರು 500 ಡಾಲ್ಫಿನ್ ಗಳಿವೆ ಎಂಬುದಾಗಿ ಅಂದಾಜಿಸಲಾಗಿದೆ.
ಆದರೆ, ಹಡಗು ಯಾನವು ಈ ಪ್ರಗತಿಯನ್ನು ನಾಶಪಡಿಸಬಹುದು ಎಂಬ ಕಳವಳವನ್ನು ಸಿನ್ಹಾ ವ್ಯಕ್ತಪಡಿಸುತ್ತಾರೆ.

share
Next Story
X