ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಹೋದ್ಯೋಗಿಗಳಿಂದ 1.4 ಲಕ್ಷ ವಸೂಲಿ ಮಾಡಿದ ನಕಲಿ ಪೊಲೀಸರು!
![ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಹೋದ್ಯೋಗಿಗಳಿಂದ 1.4 ಲಕ್ಷ ವಸೂಲಿ ಮಾಡಿದ ನಕಲಿ ಪೊಲೀಸರು! ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಹೋದ್ಯೋಗಿಗಳಿಂದ 1.4 ಲಕ್ಷ ವಸೂಲಿ ಮಾಡಿದ ನಕಲಿ ಪೊಲೀಸರು!](https://www.varthabharati.in/sites/default/files/images/articles/2023/01/14/363765-1673665120.jpg)
ಗುರುಗ್ರಾಮ: ಕಾರಿನಲ್ಲಿ ಹೋಗುತ್ತಿದ್ದ ಪುರುಷ ಹಾಗೂ ಮಹಿಳಾ ಸಹೋದ್ಯೋಗಿಗಳಿಬ್ಬರನ್ನು ತಡೆದ ನಕಲಿ ಪೊಲೀಸರು ಅವರನ್ನು ಬೆದರಿಸಿ 1.4 ಲಕ್ಷ ರೂಪಾಯಿ ವಸೂಲಿ ಮಾಡಿದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಈ ಇಬ್ಬರು ಬುಧವಾರ ರಾತ್ರಿ 8.15ರ ಸುಮಾರಿಗೆ ಕಾರಿನಲ್ಲಿ ಅಕ್ಕಪಕ್ಕ ಕುಳಿತುಕೊಂಡು ಪ್ರಯಾಣಿಸುತ್ತಿದ್ದರು. ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ಅವರ ಬಳಿಗೆ ಬಂದ. ಶುಭಂ ತನೇಜಾ ನೀಡಿದ ದೂರಿನ ಪ್ರಕಾರ, ಈ ನಕಲಿ ಪೊಲೀಸ್ ಕಿಟಕಿ ಗಾಜನ್ನು ಕೆಳಕ್ಕೆ ಇಳಿಸುವಂತೆ ಸೂಚಿಸಿದ.
ಆ ವ್ಯಕ್ತಿ ಮೊಬೈಲ್ ಫೋನ್ ಹಾಗೂ ಇಬ್ಬರ ಐಡೆಂಟಿಟಿ ಕಾರ್ಡ್ಗಳನ್ನೂ ಕಿತ್ತುಕೊಂಡು ಇಬ್ಬರನ್ನೂ ಠಾಣೆಗೆ ಕರೆದೊಯ್ಯುವುದಾಗಿ ಬೆದರಿಸಿದ ಹಾಗೂ ಮನೆಗೆ ಹೋಗಬೇಕಾದರೆ 2 ಲಕ್ಷ ರೂಪಾಯಿ ನೀಡಬೇಕು ಎಂದು ಆಗ್ರಹಿಸಿದ ಎಂದು ತನೇಜಾ ದೂರಿದ್ದಾರೆ.
"ನಾವಿಬ್ಬರೂ 1 ಲಕ್ಷ ರೂಪಾಯಿಯನ್ನು ಎಟಿಎಂ ಕಾರ್ಡ್ನಲ್ಲಿ ಪಡೆದೆವು ಹಾಗೂ 40 ಸಾವಿರ ಕಾರಿನಲ್ಲಿ ಇರಿಸಿಕೊಂಡಿದ್ದೆವು. 1.4 ಲಕ್ಷ ರೂಪಾಯಿ ನೀಡಿದ ಬಳಿಕ ಆತ ಫೋನ್ ಹಾಗೂ ಐಟೆಂಟಿಟಿ ಕಾರ್ಡ್ ಮರಳಿಸಿ ಓಡಿಹೋದ. ಮನೆಗೆ ಹೋಗಿ ಬಳಿಕ ಗುರುವಾರ ಪೊಲೀಸರಿಗೆ ದೂರು ನೀಡಿದೆವು" ಎಂದು ಹೇಳಿದ್ದಾರೆ.
ಭಾರತೀಯ ದಂಡಸಂಹಿತೆಯ ಸೆಕ್ಷನ್ 384ರ ಅನ್ವಯ ಪ್ರಕರಣ ದಾಖಲಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ಆಧಾರದಲ್ಲಿ ಆರೋಪಿಯ ಪತ್ತೆಗೆ ಪ್ರಯತ್ನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.