ಗೂಡಿನಬಳಿ ಕ್ರಿಕೆಟ್ ಪಂದ್ಯಾಟ: ಟೀಮ್ ಯುನೈಟೆಡ್ ಗೂಡಿನಬಳಿ ತಂಡ ಚಾಂಪಿಯನ್

ಬಂಟ್ವಾಳ, ಜ.14: ಗೂಡಿನಬಳಿ ಡೆಡ್ಲಿ ಸ್ಕ್ವೇಡ್ ಆಶ್ರಯದಲ್ಲಿ 6 ತಂಡಗಳ ಸೀಸನ್ 8 ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ವು ಇತ್ತೀಚೆಗೆ ನಡೆಯಿತು. ಪಂದ್ಯಾಟವನ್ನು ಬಂಟ್ವಾಳ ಪುರಸಭಾ ಮಾಜಿ ಉಪಾಧ್ಯಕ್ಷ ಐ.ಎಂ.ಆರ್.ಇಕ್ಬಾಲ್ ಗೂಡಿನಬಳಿ ಉದ್ಘಾಟಿಸಿದರು, ಮಾಜಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದರು.
ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹೀಂ ನವಾಝ್ ಬಡಕಬೈಲ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಫಿರೋಝ್ ಗೂಡಿನಬಳಿ ಹಾಗೂ ನಿಸಾರ್ ಗೂಡಿನಬಳಿ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಪಂದ್ಯಾವಳಿಯಲ್ಲಿ ಟೀಮ್ ಯುನೈಟೆಡ್ ಗೂಡಿನಬಳಿ ತಂಡವು ಚಾಂಪಿಯನ್ ಆದರೆ, ಟಿಪ್ಪು ಗೈಸ್ ಗೂಡಿನಬಳಿ ತಂಡ ದ್ವಿತೀಯ ಸ್ಥಾನ ಗಳಿಸಿತು. ಟೀಮ್ ಯುನೈಟೆಡ್ ತಂಡದ ಅನ್ಸಾರ್ ಉತ್ತಮ ಬ್ಯಾಟರ್ ಹಾಗೂ ಸ್ವಾಲಿ ಆಲ್ ರೌಂಡರ್ ಪ್ರಶಸ್ತಿಯನ್ನು ಮತ್ತು ಟಿಪ್ಪು ಗೈಸ್ ತಂಡದ ಸಿನಾನ್ ಉತ್ತಮ ಬೌಲರ್ ಪ್ರಶಸ್ತಿಗೆ ಪಾತ್ರರಾದರು.
ಇಸ್ರಾರ್ ಸ್ವಾಗತಿಸಿದರು. ಸವಾದ್ ವಂದಿಸಿದರು. ಝಿಯಾನ್ ಗೂಡಿನಬಳಿ ಕಾರ್ಯಕ್ರಮ ನಿರೂಪಿಸಿದರು.