Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಎಂಬಿಬಿಎಸ್‌ ವಿದ್ಯಾರ್ಥಿನಿ ನಾಪತ್ತೆಯಾಗಿ...

ಎಂಬಿಬಿಎಸ್‌ ವಿದ್ಯಾರ್ಥಿನಿ ನಾಪತ್ತೆಯಾಗಿ 13 ತಿಂಗಳ ನಂತರ ಬೀಚ್‌ ಜೀವರಕ್ಷಕನನ್ನು ಬಂಧಿಸಿದ ಪೊಲೀಸರು

ವಿದ್ಯಾರ್ಥಿನಿಯೊಂದಿಗೆ ಕೊನೆಯದಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಬಂಧಿತ

14 Jan 2023 2:07 PM IST
share
ಎಂಬಿಬಿಎಸ್‌ ವಿದ್ಯಾರ್ಥಿನಿ ನಾಪತ್ತೆಯಾಗಿ 13 ತಿಂಗಳ ನಂತರ ಬೀಚ್‌ ಜೀವರಕ್ಷಕನನ್ನು ಬಂಧಿಸಿದ ಪೊಲೀಸರು
ವಿದ್ಯಾರ್ಥಿನಿಯೊಂದಿಗೆ ಕೊನೆಯದಾಗಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಬಂಧಿತ

ಮುಂಬೈ: ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್‌ನಿಂದ ಎಂಬಿಬಿಎಸ್‌ (MBBS) ವಿದ್ಯಾರ್ಥಿನಿಯೊಬ್ಬರು ನಾಪತ್ತೆಯಾದ 13 ತಿಂಗಳ ನಂತರ ಪೊಲೀಸರು ಶುಕ್ರವಾರ ಆಕೆಯನ್ನು ಅಪಹರಿಸಿದ ಆರೋಪದ ಮೇಲೆ ಜೀವರಕ್ಷಕನೊಬ್ಬನನ್ನು ಬಂಧಿಸಿದ್ದಾರೆ. ಮಿಟ್ಟು ಸುಖದೇವ್‌ ಸಿಂಗ್‌ ಎಂಬ ಹೆಸರಿನ ಈತ ಆ ಹುಡುಗಿಯೊಂದಿಗೆ ಕ್ಲಿಕ್ಕಿಸಿದ ಸೆಲ್ಫಿಗಳೇ ಆಕೆಯ ಕೊನೆಯ ಚಿತ್ರಗಳಾಗಿದ್ದವು.

ಆರೋಪಿಯನ್ನು ಜನವರಿ 21 ರ ತನಕ ಪೊಲೀಸ್‌ ಕಸ್ಟಡಿಗೆ ವಹಿಸಲಾಗಿದೆ, ಆತ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಮುಂಬೈನ ಗ್ರ್ಯಾಂಟ್‌ ಮೆಡಿಕಲ್‌ ಕಾಲೇಜು ಹಾಗೂ ಸರ್‌ ಜೆ ಜೆ ಹಾಸ್ಪಿಟಲ್‌ನಲ್ಲಿ ಮೂರನೇ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿನಿಯಾಗಿದ್ದ ಸದಿಚ್ಛಾ ಸಾನೆ ಎಂಬಾಕೆ ನವೆಂಬರ್‌ 29, 2021 ರಂದು ವಿರಾರ್‌ ನಿಲ್ದಾಣದಿಂದ ಬೆಳಿಗ್ಗೆ 9.58 ಕ್ಕೆ ರೈಲು ಹತ್ತಿ ಅಂಧೇರಿ ತಲುಪಿದ್ದಳು. ಅದೇ ದಿನ ಅಪರಾಹ್ನ 2 ಗಂಟೆಗೆ ಆಕೆ ಪ್ರಿಲಿಮಿನರಿ ಪರೀಕ್ಷೆಗೆ ಹಾಜರಾಗಬೇಕಿತ್ತು. ಅಂಧೇರಿಯಲ್ಲಿ ಇನ್ನೊಂದು ರೈಲು ಹತ್ತಿ ಆಕೆ ಬಾಂದ್ರಾದಲ್ಲಿಳಿದು ನಂತರ ಬ್ಯಾಂಡ್‌ಸ್ಟ್ಯಾಂಡ್‌ ಗೆ ಆಟೋದಲ್ಲಿ ತೆರಳಿದ್ದಳು. ಆಕೆ ಅಪರಾಹ್ನವಿಡೀ ಅಲೆದಾಡುತ್ತಿದ್ದಳು ಎಂದು ಆಕೆಯ ಮೊಬೈಲ್‌ ಫೋನ್‌ ಲೊಕೇಶನ್‌ನಿಂದ ತಿಳಿದು ಬಂದಿತ್ತು. ರಾತ್ರಿ 12.30ಕ್ಕೆ ಆಕೆ  ತಾಜ್‌ ಲ್ಯಾಂಡ್ಸ್‌ ಎಂಡ್‌ ಕಡೆಯಿಂದ ಕಡಲ ಕಿನಾರೆಗೆ ತೆರಳುತ್ತಿರುವುದು ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.

ಆಕೆ ಆತ್ಮಹತ್ಯೆ ಮಾಡಬಹುದೆಂಬ ಶಂಕೆಯಿಂದ ಅಲ್ಲಿ ಜೀವರಕ್ಷಕನಾಗಿದ್ದ 32 ವರ್ಷದ ಸಿಂಗ್‌ ಆಕೆಯನ್ನು ಅನುಸರಿಸಿದ್ದ. ಆಗ ಆಕೆ ತಾನು ಆತ್ಮಹತ್ಯೆಗೈಯ್ಯಲು ಬಂದಿಲ್ಲ ಎಂದಿದ್ದಳು. ನಂತರ ಆತ ಮತ್ತು ಆಕೆ ಅಲ್ಲಿ ಮುಂಜಾನೆ 3.30 ರ ತನಕ ಮಾತನಾಡುತ್ತಿದ್ದರು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದರು.

ಈ ಅವಧಿಯಲ್ಲಿ ಸಿಂಗ್‌ ಆಕೆಯೊಂದಿಗೆ ಮೂರು ಸೆಲ್ಫಿ ಕ್ಲಿಕ್ಕಿಸಿದ್ದರೆ, ಯುವತಿ ಆತನೊಂದಿಗಿನ ಒಂದು ಸೆಲ್ಫಿಯನ್ನು ತನ್ನ ಫೋನ್‌ನಲ್ಲಿ ಕ್ಲಿಕ್ಕಿಸಿದ್ದಳು. ಇದು ಸಿಸಿಟಿವಿ ಕ್ಯಾಮರಾಗಳಲ್ಲಿ ಸೆಲ್‌ ಫೋನ್‌ ಸ್ಕ್ರೀನ್‌ಗಳು ಬ್ಲಿಂಕ್‌ ಆಗುತ್ತಿರುವುದು ಸೆರೆಯಾಗಿದ್ದವು. ಆದರೆ ನಂತರ ಅಲ್ಲಿಂದ ಒಂದು ಮೊಬೈಲ್‌ ಫೋನ್‌ ಬೆಳಕು ಹೊರಹೋಗುತ್ತಿರುವುದು ಮುಂಜಾನೆ 3 ಗಂಟೆ ಹೊತ್ತು ಕಾಣಿಸಿತ್ತು. ಆದರೆ ಯಾರೆಂದು ಕತ್ತಲಿನಿಂದಾಗಿ ತಿಳಿದಿರಲಿಲ್ಲ.

ನಂತರ ವಿದ್ಯಾರ್ಥಿನಿ ಕಾಣೆಯಾಗಿರುವ ಬಗ್ಗೆ ಸುದ್ದಿಯಾಗಿದ್ದರೂ ಸಿಂಗ್‌ ಈ ಕುರಿತು ಪೊಲೀಸರಿಗೆ  ಮಾಹಿತಿ ನೀಡಿರಲಿಲ್ಲ. ಆತನನ್ನು ಪತ್ತೆ ಹಚ್ಚಿ ವಿಚಾರಿಸಿದಾಗ ಮಾತ್ರ ಆಕೆಯೊಂದಿಗೆ ಮಾತನಾಡಿದ ಕೊನೆಯ ವ್ಯಕ್ತಿ ತಾನೆಂದು ಹೇಳಿದ್ದ.

ಈ ಹಿಂದೆಯೂ ಸಿಂಗ್‌ನನ್ನು ಪೊಲೀಸರು ಹಲವು ಬಾರಿ ವಿಚಾರಿಸಿದ್ದರೂ ಯುವತಿಗೆ ಏನಾಗಿರಬಹುದೆಂಬ ಮಾಹಿತಿ ದೊರಕಿರಲಿಲ್ಲ. ಆ ಪ್ರದೇಶದ ಆಟೋ ಚಾಲಕರು, ಆಕೆಯ ಕುಟುಂಬ, ಸ್ನೇಹಿತರ ಬಳಿ ವಿಚಾರಿಸಿದರೂ ಆಕೆಗೇನಾಯಿತೆಂಬ ಬಗ್ಗೆ ಸುಳಿವು ದೊರಕಿರಲಿಲ್ಲ.

ಇದನ್ನೂ ಓದಿ: ಪ್ರಿಯಕರನ ಎದುರೇ ಕಾಲೇಜು ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ; ಐವರು ಆರೋಪಿಗಳ ಬಂಧನ

share
Next Story
X