ಕೋವಿಡ್ನಿಂದ ಒಂದು ತಿಂಗಳಲ್ಲಿ 60,000 ಮಂದಿ ಮೃತ್ಯು: ಚೀನಾ
ಬೀಜಿಂಗ್, ಜ.14: ಡಿಸೆಂಬರ್ 8ರಿಂದ 2023ರ ಜನವರಿ 12ರವರೆಗಿನ ಅವಧಿಯಲ್ಲಿ ಸುಮಾರು 60,000 ಕೋವಿಡ್ ಸೋಂಕಿಗೆ ಸಂಬಂಧಿಸಿದ ಮರಣದ ಪ್ರಕರಣ ದಾಖಲಾಗಿದೆ ಎಂದು ಚೀನಾದ ಆರೋಗ್ಯ ಇಲಾಖೆ ವರದಿ ಮಾಡಿದೆ.
ಇದರೊಂದಿಗೆ, ಕಳೆದ ತಿಂಗಳು ಶೂನ್ಯ ಕೋವಿಡ್ ನೀತಿಯನ್ನು ಕೈಬಿಟ್ಟ ಬಳಿಕ ಇದೇ ಮೊದಲ ಬಾರಿಗೆ ಕೋವಿಡ್ ಸೋಂಕಿಗೆ ಸಂಬಂಧಿಸಿದ ಸಾವಿನ ಮಾಹಿತಿಯನ್ನು ಚೀನಾ ಪ್ರಕಟಿಸಿದೆ.
ಈ ಒಂದು ತಿಂಗಳ ಅವಧಿಯಲ್ಲಿ ಕೋವಿಡ್ ಸೋಂಕಿನಿಂದ ಉಂಟಾದ ಉಸಿರಾಟದ ವೈಫಲ್ಯದ ಪರಿಣಾಮ 5,503 ಮಂದಿ ಮೃತಪಟ್ಟಿದ್ದಾರೆ. ಇದಲ್ಲದೆ, ಕ್ಯಾನ್ಸರ್ ಅಥವಾ ಹೃದಯನಾಳದ ಕಾಯಿಲೆಯ ಜತೆ ಕೋವಿಡ್ ಸೋಂಕು ದೃಢಪಟ್ಟ 54,435 ಮಂದಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ನಿರ್ದೇಶಕ ಜಿಯಾವೊ ಯಹುಯಿ ಹೇಳಿದ್ದಾರೆ.
Next Story