ಹಾಜಿ ಕಾರ್ಕಳ ಶೇಖ್ ಶಾಬು ಸಾಹಿಬ್ ಮೆಮೋರಿಯಲ್ ಟ್ರಸ್ಟ್‌ನಿಂದ 11 ಜೋಡಿಗಳಿಗೆ ಸರಳ ವಿವಾಹ

ಮಂಗಳೂರು, ಜ.15: ಹಾಜಿ ಕಾರ್ಕಳ ಶೇಖ್ ಶಾಬು ಸಾಹಿಬ್ ಮೆಮೋರಿಯಲ್ ಟ್ರಸ್ಟ್ (ರಿ) ವತಿಯಿಂದ 11 ಜೋಡಿಗಳಿಗೆ ಸರಳ ಸಾಮೂಹಿಕ ವಿವಾಹವು ರವಿವಾರ ನಗರದ ಬೋಳಾರದ ಶಾದಿಮಹಲ್‌ನಲ್ಲಿ ನಡೆಯಿತು.
ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ಶೈಖುನಾ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮತ್ತು ಕುದ್ರೋಳಿಯ ಜಾಮಿಯಾ ಮಸ್ಜಿದ್‌ನ ಖತೀಬ್ ಅಲ್ಹಾಜ್ ಮುಫ್ತಿ ಮನ್ನಾನ್ ಸಾಹೇಬ್ ನಿಕಾಹ್‌ಗೆ ನೇತೃತ್ವ ನೀಡಿ ದುಆಗೈದರು.
ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಯೆನೆಪೊಯ ವಿವಿ ಕುಲಾಧಿಪತಿ ಡಾ.ಯೆನೆಪೊಯ ಅಬ್ದುಲ್ಲಾ ಕುಂಞಿ ಮತ್ತು ದುಬೈಯ ನಾಶ್ ಗ್ರೂಫ್ ಆಫ್ ಕಂಪೆನೀಸ್‌ನ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ನಿಸಾರ್ ಅಹ್ಮದ್ ಕಾರ್ಕಳ ಭಾಗವಹಿಸಿದ್ದರು. ಅಲ್ಹಾಜ್ ಕೆ.ಎಸ್. ಇಮ್ತಿಯಾಝ್ ಅಹ್ಮದ್ ಕಾರ್ಕಳ ಅವರು ಹಾಜಿ ಕಾರ್ಕಳ ಶೇಖ್ ಶಾಬು ಸಾಹಿಬ್ ಮೆಮೋರಿಯಲ್ ಟ್ರಸ್ಟ್‌ನ ಧ್ಯೇಯೋದ್ದೇಶಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಟ್ರಸ್ಟ್‌ನ ಕೋಶಾಧಿಕಾರಿ ಮುಹಮ್ಮದ್ ಆಸೀಫ್ ಮಸೂದ್, ಶಾದಿಮಹಲ್ ಅಧ್ಯಕ್ಷ ಯೂಸುಫ್ ಖಾದರ್, ಮಾಜಿ ಶಾಸಕ ಮೊಯ್ದಿನ್ ಬಾವಾ, ಬಿಸಿಸಿಐ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಸಿ.ಮಹಮೂದ್ ಹಾಜಿ, ಹನೀಫ್ ಹಾಜಿ ಬಂದರ್, ಭಾಷಾ ಸಾಹೇಬ್ ಕುಂದಾಪುರ, ಕಾರ್ಪೊರೇಟರ್ ಸಂಶುದ್ದೀನ್ ಎಚ್‌ಬಿಟಿ, ಲತೀಫ್ ಕಂದಕ್, ಮಾಜಿ ಕಾರ್ಪೊರೇಟರ್ ಅಬೂಬಕರ್ ಕುದ್ರೋಳಿ ಮತ್ತಿತರರು ಉಪಸ್ಥಿತರಿದ್ದರು.
ಮೌಲಾನಾ ಝುಬೈರ್ ಕಿರಾಅತ್ ಪಠಿಸಿದರು. ಟ್ರಸ್ಟ್‌ನ ಕಾರ್ಯದರ್ಶಿ ಡಾ. ಮುಹಮ್ಮದ್ ಆರೀಫ್ ಮಸೂದ್ ಸ್ವಾಗತಿಸಿದರು. ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ: ಕಾರ್ಯಕ್ರಮದಲ್ಲಿ ಸೆಂಟ್ರಲ್ ಮುಸ್ಲಿಂ ಕಮಿಟಿಯ ವತಿಯಿಂದ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್, ಅಲ್ಹಾಜ್ ಕೆ.ಎಸ್. ನಿಸಾರ್ ಅಹ್ಮದ್ ಕಾರ್ಕಳ, ಡಾ.ಯೆನೆಪೊಯ ಅಬ್ದುಲ್ಲಾ ಕುಂಞಿ ಅವರನ್ನು ಸನ್ಮಾನಿಸಲಾಯಿತು.
ನಾನು ಸಮಾಜ ಮತ್ತು ಸಮುದಾಯದಲ್ಲಿ ಈ ಎಲ್ಲಾ ಸ್ಥಾನಮಾನ ಪಡೆಯಲು ನಿಮ್ಮೆಲ್ಲರ ದುಆ ಆಶೀರ್ವಾದದ ಫಲವಾಗಿದೆ. ನಮ್ಮ ಟ್ರಸ್ಟ್ ವತಿಯಿಂದ ಇದೇ ಮೊದಲ ಬಾರಿಗೆ 11 ಜೋಡಿಯ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದ ತೃಪ್ತಿ ಇದೆ. ಮುಂದೆಯೂ ನಿಮ್ಮೆಲ್ಲರ ಸಹಕಾರ ಇರಲಿ. ಜನರ ಸೇವೆ ಮಾಡಲು ಅಲ್ಲಾಹನು ಅನುಗ್ರಹಿಸಲಿ.
-ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್, ಅಧ್ಯಕ್ಷರು, ಹಾಜಿ ಕಾರ್ಕಳ ಶೇಖ್ ಶಾಬು ಸಾಹಿಬ್ ಮೆಮೋರಿಯಲ್ ಟ್ರಸ್ಟ್ (ರಿ)
ಸಮುದಾಯದ ಹೆಮ್ಮೆಯ ನಾಯಕರಾದ ಹಾಜಿ ಮುಹಮ್ಮದ್ ಮಸೂದ್ ಅವರ ಸಮಾಜಮುಖಿ ಚಿಂತನೆಯ ಫಲವಾಗಿ ಇಂದು 11 ಜೋಡಿಯ ಸರಳ ವಿವಾಹ ಕಾರ್ಯ ನೆರವೇರಿದೆ. ಆ ಮೂಲಕ ಅವರು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ. ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ದಂಪತಿಗಳು ಭವಿಷ್ಯದಲ್ಲಿ ತಮ್ಮ ಮಕ್ಕಳನ್ನು ಸತ್ಫಥದಲ್ಲಿ ಮುನ್ನೆಡೆಸುವ ಸಂಕಲ್ಪ ಮಾಡಬೇಕು. ನಮ್ಮೆಲ್ಲಾ ಸಂಕಷ್ಟವನ್ನು ಶಿಕ್ಷಣದಿಂದ ಮಾತ್ರ ಪಾರಾಗಲು ಸಾಧ್ಯವಿದೆ. ಹಾಗಾಗಿ ಆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿ ಸತ್ಪ್ರಜೆಯಾಗುವಂತೆ ನೋಡಿಕೊಳ್ಳಬೇಕು.
-ಯು.ಟಿ.ಖಾದರ್, ವಿಪಕ್ಷ ಉಪನಾಯಕರು, ವಿಧಾನಸಭೆ
ಸಮುದಾಯದ ನಾಯಕರಾದ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ನೇತೃತ್ವದ ಈ ಟ್ರಸ್ಟ್ ಒಳ್ಳೆಯ ಕೆಲಸ ಮಾಡುವ ಮೂಲಕ ಶೇಖ್ ಶಾಬು ಸಾಹಿಬ್‌ರ ಕನಸನ್ನು ನನಸಾಗಿಸುವ ಪ್ರಯತ್ನ ನಡೆಸುತ್ತಿರುವುದು ಶ್ಲಾಘನೀಯ. ನವ ದಂಪತಿಗಳ ಬದುಕು ಹಸನಾಗಲಿ.
-ಡಾ.ಯೆನೆಪೊಯ ಅಬ್ದುಲ್ಲಾ ಕುಂಞಿ, ಕುಲಾಧಿಪತಿ ಯೆನೆಪೊಯ ವಿವಿ
ನನ್ನ ಅಣ್ಣಂದಿರಾದ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಮತ್ತು ಅಲ್ಹಾಜ್ ಕೆ.ಎಸ್.ನಿಸಾರ್ ಅಹ್ಮದ್ ಕಾರ್ಕಳ ಅದೆಷ್ಟೋ ವರ್ಷದಿಂದ ಸಮಾಜದ, ಸಮುದಾಯದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಜಿ ಮುಹಮ್ಮದ್ ಮಸೂದ್ ರಾಜಕೀಯವಾಗಿ ಅನೇಕ ಸ್ಥಾನಮಾನಗಳನ್ನು ಪಡೆದವರು. ಮತ್ತೋರ್ವ ಅಣ್ಣ ಹಾಜಿ ನಿಸಾರ್ ಅಹ್ಮದ್ ಕೂಡ ಉದ್ಯಮಿಯಾಗಿದ್ದುಕೊಂಡು ಸದಾ ಸಂಕಷ್ಟದಲ್ಲಿರುವ ಜನರ ಹಿತಕ್ಕಾಗಿ ಮನ ಮಿಡಿಯುವವರು. ಇದಕ್ಕೆ ನಮ್ಮ ತಂದೆ ಹಾಜಿ ಕಾರ್ಕಳ ಶೇಖ್ ಶಾಬು ಸಾಹಿಬ್ ಅವರೇ ಸ್ಫೂರ್ತಿಯಾಗಿದ್ದಾರೆ. ಬ್ರಿಟಿಷ್ ಸರಕಾರದಲ್ಲಿ ಕಂದಾಯ ನಿರೀಕ್ಷಕರಾಗಿದ್ದ ನಮ್ಮ ತಂದೆಯವರು ಶಿಸ್ತಿನ ಸಿಪಾಯಿ ಮತ್ತು ಪರೋಪಕಾರಿ ಆಗಿದ್ದರು. ತಂದೆಯ ಆ ಗುಣಸ್ವಭಾವವನ್ನು ಈ ಅಣ್ಣಂದಿರು ಮೈಗೂಡಿಸಿಕೊಂಡಿದ್ದು, ನಮಗೂ ಪ್ರೇರಣೆ ನೀಡುತ್ತಿದ್ದಾರೆ.
-ಅಲ್ಹಾಜ್ ಕೆ.ಎಸ್. ಇಮ್ತಿಯಾಝ್ ಅಹ್ಮದ್ ಕಾರ್ಕಳ