ಸಿಎ ಪರೀಕ್ಷೆ: ಮಂಗಳೂರಿನ ರೂಹಿ ತೇರ್ಗಡೆ

ಮಂಗಳೂರು: ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆಯು (ಐಸಿಎಐ) 2022ರ ನವೆಂಬರ್‌ನಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಮಂಗಳೂರಿನ ಪಾಂಡೇಶ್ವರ ನಿವಾಸಿ ಎಂ.ಎಚ್.ಶರೀಫ್ ಮತ್ತು ರಝಿಯಾ ಶರೀಫ್ ದಂಪತಿಯ ಪುತ್ರಿ ರೂಹಿ ಎಂ.ಎಚ್. (ಮಂಗಳೂರಿನ ವೆಲೆನ್ಸಿಯಾದ ಫರ್ವೇಝ್‌ರ ಪತ್ನಿ) ತೇರ್ಗಡೆಯಾಗಿದ್ದಾರೆ. ಇವರು ಶ್ರೀರಾಮುಲು ನಾಯ್ಡು ಅವರ ಬಳಿ ತರಬೇತಿ ಪಡೆದಿರುತ್ತಾರೆ.
Next Story