ಅಮೆರಿಕದ ಆರ್'ಬೊನಿಗೆ ಭುವನಸುಂದರಿ ಕಿರೀಟ

ನ್ಯೂಆರ್ಲಿಯನ್ಸ್, ಜ.15: ಅಮೆರಿಕದ ಆರ್'ಬೊನಿ ಗ್ಯಾಬ್ರಿಯಲ್ (R’Bonney Gabriel) 2022ರ ಸಾಲಿನ ಭುವನಸುಂದರಿ ಕಿರೀಟ ಮುಡಿಗೇರಿಸಿಕೊಂಡರು. ಲೂಸಿಯಾನಾ ರಾಜ್ಯದ ಎರ್ನೆಸ್ಟ್ ಮೋರಿಯಲ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 2021ರ ಸಾಲಿನ ಭುವನಸುಂದರಿ ಭಾರತದ ಹರ್ನಾಝ್ ಸಂಧು ನೂತನ ಭುವನಸುಂದರಿಗೆ ಕಿರೀಟ ತೊಡಿಸಿದರು.
ಫ್ಯಾಶನ್ ಡಿಸೈನರ್ ಮತ್ತು ಮೋಡೆಲ್ ಆಗಿರುವ ಗ್ಯಾಬ್ರಿಯಲ್, ಕಳೆದ ವರ್ಷ ಮಿಸ್ ಯುಎಸ್ಎ ಪ್ರಶಸ್ತಿ ಗೆದ್ದಿದ್ದು ಈ ಪ್ರತಿಷ್ಟೆ ಪಡೆದ ಪ್ರಪ್ರಥಮ ಫಿಲಿಪ್ಪೀನ್ಸ್-ಅಮೆರಿಕನ್ ಎಂಬ ಸಾಧನೆ ಮಾಡಿದ್ದರು. ವೆನೆಝುವೆಲಾದ ಅಮಂಡಾ ಡುಡಾಮೆಲ್ ಪ್ರಥಮ ರನ್ನರ್ಸ್ ಅಪ್, ಡೊಮಿನಿಕನ್ ರಿಪಬ್ಲಿಕ್ನ ಆ್ಯಂಡ್ರಿಯಾನಾ ಮಾರ್ಟ್ನೆಝ್ ದ್ವಿತೀಯ ರನ್ನರ್ಆಪ್ ಕಿರೀಟ ಪಡೆದರು. ಭುವನ ಸುಂದರಿ ಕಿರೀಟ ಪಡೆದ ಅಮೆರಿಕದ 9ನೇ ಸುಂದರಿಯಾಗಿದ್ದಾರೆ ಗ್ಯಾಬ್ರಿಯಲ್.
ಅಗ್ರ 16 ಸ್ಪರ್ಧಿಗಳ ಪಟ್ಟಿಯಲ್ಲಿದ್ದ ಭಾರತದ ದಿವಿತಾ ರೈ ಅಂತಿಮ ಹಂತಕ್ಕೇರುವಲ್ಲಿ ವಿಫಲವಾಗಿ ನಿರಾಶೆಗೊಂಡರು.
Next Story





