ಡಿ.ಐ. ಅಬೂಬಕರ್ ಕೈರಂಗಳ ಅವರಿಗೆ ಗುರುಕುಲ ಪ್ರತಿಷ್ಠಾನ ರಾಜ್ಯ ಪ್ರಶಸ್ತಿ

ಮಂಗಳೂರು: ಗುರುಕುಲ ಕಲಾ ಪ್ರತಿಷ್ಠಾನ ಕೇಂದ್ರ ಸಮಿತಿ ತುಮಕೂರು ವತಿಯಿಂದ ನೀಡಲಾಗುವ "ಗುರುಕುಲ ಜ್ಞಾನ ಸಿಂಧು ರಾಜ್ಯ ಪ್ರಶಸ್ತಿಗೆ ಪತ್ರಿಕೋದ್ಯಮಿ, ಸಾಹಿತಿ ಡಿ.ಐ.ಅಬೂಬಕರ್ ಕೈರಂಗಳ ಆಯ್ಕೆಯಾಗಿದ್ದಾರೆ.
ಜ. 23 ರಂದು ಬೆಂಗಳೂರು ಸ್ಪೂರ್ತಿಧಾಮದಲ್ಲಿ ನಡೆಯುವ ಗುರುಕುಲ ಕಲಾ ಪ್ರತಿಷ್ಠಾನದ ಎರಡನೇ ಸಮ್ಮೇಳನದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಕಳೆದ 30 ವರ್ಷಗಳಿಂದ ಸಾಹಿತ್ಯ ಸೇವೆ ಸಲ್ಲಿಸುತ್ತಿರುವ ಪ್ರಸ್ತುತ ಉದ್ಯಮಿಯಾಗಿರುವ ಡಿ.ಐ.ಅಬೂಬಕರ್ ಕೈರಂಗಳ ಎಸ್ ಎಸ್ ಎಫ್ ಮುಖವಾಣಿ ಅಲ್ ಮುನೀರ್, ಮಂಗಳೂರಿನ ಹೆಸರಾಂತ ಉದ್ಯಮಿ ಮರ್ಹೂಂ ಇಬ್ರಾಹಿಂ ಬಾವ ಹಾಜಿ ಪ್ರಕಾಶಕತ್ವದ ಅಲ್ ಅನ್ಸಾರ್,ಮೊಯ್ಲಾಂಜಿ ಮತ್ತು ತನ್ನದೇ ಆದ "ಸಾಮಾಜಿಕ ಪತ್ರಿಕೆ "ಮದರಂಗಿ" ಮೂಲಕ ರಾಜ್ಯಾದ್ಯಂತ ಬರಹಗಾರರು, ಸಾಹಿತ್ಯಾಸಕ್ತ ಓದುಗರನ್ನು ಸೃಷ್ಟಿಸಿದ ಸಾಹಿತ್ಯ ಸಾಧಕರಾಗಿ ಗುರುತಿಸಿಕೊಂಡಿದ್ದಾರೆ.
Next Story