Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಂಗಳೂರಿನಲ್ಲಿ 'ಹಮ್ದ್ ಹೋಮ್...

ಮಂಗಳೂರಿನಲ್ಲಿ 'ಹಮ್ದ್ ಹೋಮ್ ಪ್ರಾಡಕ್ಟ್ಸ್' ಮಳಿಗೆ ಶುಭಾರಂಭ

16 Jan 2023 6:50 PM IST
share
ಮಂಗಳೂರಿನಲ್ಲಿ ಹಮ್ದ್ ಹೋಮ್ ಪ್ರಾಡಕ್ಟ್ಸ್ ಮಳಿಗೆ ಶುಭಾರಂಭ

ಮಂಗಳೂರು: ಕಳೆದ ಐದು ವರ್ಷಗಳಿಂದ ರಾಜ್ಯದ ಗ್ರಾಹಕರಿಗೆ ತಾಜಾ ಆಹಾರ ಉತ್ಪನ್ನಗಳನ್ನು ತಲುಪಿಸುತ್ತಿರುವ ಮಂಗಳೂರು ಮೂಲದ 'ಹಮ್ದ್ ಹೋಮ್ ಪ್ರಾಡಕ್ಟ್ಸ್' ಇದೀಗ 75ಕ್ಕೂ ಹೆಚ್ಚು ಉತ್ಪನ್ನಗಳೊಂದಿಗೆ ತನ್ನ ಮೊದಲ ಮಳಿಗೆಯನ್ನು ಮಂಗಳೂರಿನಲ್ಲಿ ಆರಂಭಿಸಿದ್ದು, ಸೋಮವಾರ  ಅಧಿಕೃತವಾಗಿ ಶುಭಾರಂಭಗೊಂಡಿದೆ.

ಯೆನಪೋಯ ಸಂಸ್ಥೆಯ ಖ್ಯಾತ ಸ್ತ್ರೀರೋಗ ಕ್ಯಾನ್ಸರ್ ತಜ್ಞೆ ಡಾ.ಮರ್ಯಮ್ ಅಂಜುಮ್ ಇಫ್ತಿಕಾರ್ ಅವರು ನೂತನ ಮಳಿಗೆಯನ್ನು ಉದ್ಘಾಟಿಸಿ ಮಹಿಳೆಯರೇ ನಿರ್ವಹಿಸುತ್ತಿರುವ ಮಳಿಗೆ ಹಮ್ದ್ ಉತ್ತಮವಾಗಿ ಮುನ್ನಡೆಯಲಿ ಎಂದು ಹಾರೈಸಿದರು.

ಮುಖ್ಯ ಅತಿಥಿ ಅನುಪಮ ಮಹಿಳಾ ಮಾಸಿಕದ ಸಂಪಾದಕಿ ಶಹನಾಝ್ ಎಂ ಮಾತನಾಡಿ, "ವ್ಯವಹಾರದಲ್ಲಿ ಲಾಭ ನಷ್ಟ ಇರುವುದು ಸಹಜ. ಯಾವುದೇ ವ್ಯಾಪಾರ ಆರಂಭಿಸುವುದು ಸುಲಭ.  ತಕ್ಷಣ ಲಾಭ ನಿರೀಕ್ಷಿಸಲು ಸಾಧ್ಯವಿಲ್ಲ. ಆನೇಕ ಸವಾಲುಗಳು ಇರುತ್ತದೆ. ಎಲ್ಲವನ್ನು ನಿಭಾಯಿಸಿಕೊಂಡು ಮುಂದುವರಿದರೆ ಯಶಸ್ಸು  ಖಂಡಿತ ಸಾಧ್ಯ. ವ್ಯವಹಾರದಲ್ಲಿ ದಿಟ್ಟ ಹೆಜ್ಜೆ ಇರಿಸುವುದರ ಮೂಲಕ  ಮಹಿಳೆಯರು ಮಹಿಳೆಯರಿಗೆ ಮಾದರಿಯಾಬೇಕು" ಎಂದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆಸರೆ ವಿಮೆನ್ಸ್ ಫೌಂಡೇಶನ್ ಅಧ್ಯಕ್ಷೆ ಶಬೀನಾ ಅಕ್ತರ್, ಸ್ತ್ರಿರೋಗ ತಜ್ಞೆ ಡಾ.ದಿಶಾ ಅಜಿಲ, ಸಾಯಿರಾ ಲೋಬೊ, ಕಾರ್ಪೊರೇಟರ್ ಸಂಶಾದ್ ಅಬೂಬಕರ್ ಶುಭ ಹಾರೈಸಿದರು.

ನಸುಹಾ ಕಿರಾತ್ ಪಠಿಸಿದರು. ಆಯಿಷಾ ಆಯಾತ್ ಸ್ವಾಗತಿಸಿದರು. ಆಯಿಶಾ ಹಸನ್, ಸಾದಿಕ್ ಹಸನ್ ಮತ್ತಿತರರು ಉಪಸ್ಥಿತರಿದ್ದರು.

ಹಮ್ದ್ ನ ಸಂಸ್ಥಾಪಕರು, ವ್ಯವಸ್ಥಾಪಕರು, ನೌಕರರು ಸೇರಿದಂತೆ ಇಡೀ ಸಂಸ್ಥೆಯನ್ನು ಮಹಿಳೆಯರೇ ನಿರ್ವಹಿಸುತ್ತಿರುವುದು ಇದರ ವೈಶಿಷ್ಟತೆಯಾಗಿದೆ.

ನಗರದ ಹೃದಯಭಾಗವಾದ ಫಳ್ನೀರ್ ರಸ್ತೆಯ ಮಿಲೇನಿಯಂ ಟವರ್ಸ್ ನಲ್ಲಿ ಮಳಿಗೆ ಆರಂಭಿಸಲಾಗಿದ್ದು,  'ಆರೋಗ್ಯಕರ ಆಹಾರ, ಆರೋಗ್ಯಕರ ಜೀವನ' ಎಂಬ ಧ್ಯೇಯವಾಕ್ಯದೊಂದಿಗೆ ನವೋದ್ಯಮಿ ಶಾಹಿದಾ ಅವರು ಇದನ್ನು ಆರಂಭಿಸಿದ್ದು, ಸಾವಯವ, ನೈಸರ್ಗಿಕ, ರಾಸಾಯನಿಕ ಮುಕ್ತ ರುಚಿಕರ ಆಹಾರ ಪದಾರ್ಥಗಳನ್ನು ಅಡುಗೆ ಕೋಣೆಗೆ ತಲುಪಿಸುವ ಗುರಿಯನ್ನು ಕಂಪನಿಯು ಹೊಂದಿದೆ. ವಿವಿಧ ಮಸಾಲೆ ಪುಡಿ ಸೇರಿದಂತೆ ವಿವಿಧ ತಾಜಾ ಆಹಾರ ಪದಾರ್ಥಗಳನ್ನು ಹಮ್ದ್ ತಯಾರಿಸುತ್ತದೆ.    

2018ರಲ್ಲಿ ನಾವು ಕೇವಲ 20 ಉತ್ಪನ್ನಗಳೊಂದಿಗೆ ಸಣ್ಣ ಕಂಪನಿಯಾಗಿ ಪ್ರಾರಂಭಿಸಿದ್ದೆವು. ಅಂದಿನಿಂದ, ನಮ್ಮ ಕಂಪನಿಯನ್ನು ನಿರಂತರ ಪರೀಕ್ಷೆಗೊಳಪಡಿಸಿ, ಗ್ರಾಹಕರಲ್ಲಿ ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಶಾಹಿದಾ ಹೇಳಿದ್ದಾರೆ  

ನಮ್ಮ ಉತ್ಪನ್ನಗಳು ಮೊದಲಿಗಿಂತ ಶೀಘ್ರದಲ್ಲಿ ಖಾಲಿಯಾಗುತ್ತಿರುವುದರನ್ನು ಅರಿತುಕೊಂಡು ಇದೀಗ ನಾವು ಹಮ್ಡ್ ಹೋಮ್ ಪ್ರಾಡಕ್ಟ್ಸ್ ಅನ್ನುಹಮ್ದ್ ಹೋಮ್ ಸ್ಟೋರ್ ಗೆ ನವೀಕರಿಸಲು ನಿರ್ಧರಿಸಿದೆವು. ನಮ್ಮ ಕಂಪನಿಯಿಂದ ಮಾತ್ರವಲ್ಲದೆ ಇತರ ಸಾವಯವ ಉತ್ಪನ್ನಗಳ ಕಂಪನಿಗಳಿಂದ ವಿವಿಧ ಉತ್ಪನ್ನಗಳನ್ನು ನಮ್ಮ ಮಳಿಗೆಯಲ್ಲಿ ಮಾರಾಟಕ್ಕೆ ಇಡಲು ನಿರ್ಧರಿಸಿದೆವು. ಹೆಚ್ಚಿನ ಪಾರದರ್ಶಕತೆಗಾಗಿ ಮತ್ತು ವಿಶ್ವಾಸವನ್ನು ಬೆಳೆಸಲು ನಾವು ಈಗ ಹಮ್ದ್ ಹೋಮ್ ಸ್ಟೋರ್ ಅನ್ನು ತೆರೆದಿದ್ದೇವೆ, ಇದರಲ್ಲಿ ಗ್ರಾಹಕರು ಉತ್ಪನ್ನಗಳನ್ನು ಖರೀದಿಸುವ ಮೊದಲು ಅವುಗಳನ್ನು ನೋಡುವುದನ್ನು ಸುಲಭಗೊಳಿಸಿದ್ದೇವೆ, ಆನ್ ಲೈನ್ ಶಾಪಿಂಗ್ ಸಮಯದಲ್ಲಿ ಆಗಾಗ್ಗೆ ಎದುರಾಗುವ ಅನಾನುಕೂಲತೆಯನ್ನು ತೊಡೆದುಹಾಕಲು ಪ್ರಯತ್ನಿಸಿದ್ದೇವೆ ಎಂದು ಶಾಹಿದಾ ತಿಳಿಸಿದ್ದಾರೆ.

share
Next Story
X