ಅಡ್ವೆ-ನಂದಿಕೂರು ಕಂಬಳೋತ್ಸವಕ್ಕೆ ಚಾಲನೆ
ಪಡುಬಿದ್ರಿ: ಅಡ್ವೆ-ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಆಶ್ರಯದಲ್ಲಿ ಅಡ್ವೆ ನಂದಿಕೂರಿನಲ್ಲಿ ನಡೆದ 30 ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಕಂಬಳೋತ್ಸವ ಸೋಮವಾರ ಸಂಜೆ ತೆರೆಕಂಡಿತು.
169 ಜತೆ ಕೋಣಗಳು ಭಾಗವಹಿಸಿದ್ದವು. ಸೆಮಿ ಫೈನಲ್‍ನಲ್ಲಿ6 ಪದವು ಕಾಣಡ್ಕ ಮತ್ತು ಕಳಚೂರು ಕೊಂಡ ಕೊಣಗಳ ನಡುವೆ ಸಮಬಲ ಸಾಧಿಸಿದ್ದು, ಬಳಿಕ ನಡೆದ ಎರಡನೇ ಭಾರಿ ನಡೆದ ಸ್ಪರ್ಧೆಯಲ್ಲಿ 3 ಸೆಕೆಂಡ್ ಅಂತರದಲ್ಲಿ ಪದವು ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಇದು ಕಂಬಳ ಪ್ರಿಯರಿಗೆ ರೋಚಕತೆಗೆ ಕೊಂಡೊಯ್ಯಿತಿ. ಓಟಗಾರ ಬೈಂದೂರು ವಿವೇಕ್ ಪೂಜಾರಿ ಅವರು ಎರಡೂ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.
ಕನೆಹಲಗೆ (5 ಜತೆ)-(ನೀರು ನೋಡಿ ಬಹುಮಾನ): ಪ್ರಥಮ: ಬೇಲಾಡಿ ಬಾವ ಅಶೋಕ್ ಶೆಟ್ಟಿ, ಹಲಗೆ ಮುಟ್ಟಿದವರು- ತೆಕ್ಕಟ್ಟೆ ಸುೀರ್ ದೇವಾಡಿಗ, ದ್ವಿತೀಯ: ವಾಮಂಜೂರು ತಿರುವೈಲುಗುತ್ತು ನವೀನ್‍ಚಂದ್ರ ಆಳ್ವ, ಹಲಗೆ ಮುಟ್ಟಿದವರು-ಬೈಂದೂರು ಭಾಸ್ಕರ ದೇವಾಡಿಗ.
ಅಡ್ಡ ಹಲಗೆ(8 ಜತೆ): ಪ್ರಥಮ: ನಾರಾವಿ ಯುವರಾಜ್ ಜೈನ್, ಹಲಗೆ ಮುಟ್ಟಿದವರು-ಭಟ್ಕಳ ಹರೀಶ್, ದ್ವಿತೀಯ: ಹಂಕರ್ಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ "ಎ", ಹಲಗೆ ಮುಟ್ಟಿದವರು- ತೆಕ್ಕಟ್ಟೆ ಸುೀರ್ ದೇವಾಡಿಗ.
ಹಗ್ಗ ಹಿರಿಯ(19 ಜತೆ)-ಪ್ರಥಮ: ಪದವು ಕಾನಡ್ಕ ಫ್ಲೇವಿ ಡಿಸೋಜ "ಎ", ಓಡಿಸಿದವರು-ಬೈಂದೂರು ವಿವೇಕ್ ಪೂಜಾರಿ, ದ್ವಿತೀಯ: ಎರ್ಮಾಳ್ ಡಾ.ಚಿಂತನ್ ರೋಹಿತ್ ಹೆಗ್ಡೆ "ಎ", ಓಡಿಸಿದವರು-ಕೊಳಕೆ ಇರ್ವತ್ತೂರು ಆನಂದ್.
ಹಗ್ಗ ಕಿರಿಯ(18 ಜತೆ)ಪ್ರಥಮ: ನಿಟ್ಟೆ ಪರಪ್ಪಾಡಿ ಸುರೇಶ್ ಕೋಟ್ಯಾನ್, ಓಡಿಸಿದವರು-ಅತ್ತೂರು ಕೋಡಂಗೆ ಸುೀರ್ ಸಾಲ್ಯಾನ್, ದ್ವಿತೀಯ: ನಕ್ರೆ ಮಹೋಧರ ನಿವಾಸ ಇಶಾನಿ ನಾರಾಯಣ ಭಂಡಾರಿ, ಓಡಿಸಿದವರು-ಪಣಪಿಲ ಪ್ರವೀಣ್ ಕೋಟ್ಯಾನ್.
ನೇಗಿಲು ಹಿರಿಯ(30 ಜತೆ)ಪ್ರಥಮ: ಇರುವೈಲು ಪಾನಿಲ ಬಾಡ ಪೂಜಾರಿ "ಎ", ಓಡಿಸಿದವರು-ಬೈಂದೂರು ವಿವೇಕ್ ಪೂಜಾರಿ, ದ್ವಿತೀಯ: ಸಾಂತೂರು ಬೈಲುಮನೆ ವಿಜೇತ್ ಕುಮಾರ್ ಶೆಟ್ಟಿ "ಬಿ", ಓಡಿಸಿದವರು-ನಕ್ರೆ ಪವನ್ ಮಡಿವಾಳ್.
ನೇಗಿಲು ಕಿರಿಯ(89 ಜತೆ) ಪ್ರಥಮ: ವೇಣೂರು ಮುಡುಕೋಡಿ ಗಣೇಶ್ ನಾರಾಯಣ ಪಂಡಿತ್, ಓಡಿಸಿದವರು-ಪೆರಿಂಜೆ ಪ್ರಮೋದ್, ದ್ವಿತೀಯ: ಇನ್ನಾ ಮಡ್ಮಣ್ ಶಾರದಾ ನಿಲಯ ಸಂತೋಷ್ ಶೆಟ್ಟಿ "ಎ", ಓಡಿಸಿದವರು-ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ.
ಬಹುಮಾನ ವಿತರಣೆ: ಪಡುಬಿದ್ರಿ ಪೋಲಿಸ್ ಠಾಣಾ ಕ್ರೈಮ್ ಎಸ್‍ಐ ಪ್ರಕಾಶ್, ಎಎಸ್‍ಐ ಸುದೇಶ್ ಶೆಟ್ಟಿ, ಪ್ರಧಾನ ತೀರ್ಪುಗಾರರಾದ ಪ್ರೊ.ಕೆ.ಗುಣಪಾಲ ಕಡಂಬ, ನಂದಿಕೂರು ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ, ಅಧ್ಯಕ್ಷರುಗಳಾದ ಚಿತ್ತರಂಜನ್ ಶೆಟ್ಟಿ ಅಡ್ವೆ ಮೂಡ್ರಗುತ್ತು, ಸುರೇಶ್ ಶೆಟ್ಟಿ ಅಡ್ವೆ ಮೂಡ್ರಗುತ್ತು ಮತ್ತು ಆಶ್ರಿತ್ ಹರೀಶ್ ಶೆಟ್ಟಿ ಕಂಕಣಗುತ್ತು, ಪ್ರಧಾನ ಕಾರ್ಯದರ್ಶಿ ನವೀನ್‍ಚಂದ್ರ ಸುವರ್ಣ ಅಡ್ವೆ, ಕೋಶಾಕಾರಿ ಲಕ್ಷ್ಮಣ ಎಲ್.ಶೆಟ್ಟಿ ಅರಂತಡೆ, ಗಣೇಶ್ ಶೆಟ್ಟಿ ಸಾಂತೂರು, ಅಮರನಾಥ ಶೆಟ್ಟಿ ಅಣ್ಣೋಜಿಗೋಳಿ ಮತ್ತಿತರರು ಉಪಸ್ಥಿತರಿದ್ದರು.