ಭಟ್ಕಳ: ಲಾರಿ - ಬೊಲೆರೋ ನಡುವೆ ಢಿಕ್ಕಿ; ಐವರಿಗೆ ಗಾಯ
ಭಟ್ಕಳ: ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ತೆರ್ನಮಕ್ಕಿಯಲ್ಲಿ ಲಾರಿ ಹಾಗೂ ಬೊಲೆರೋ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಐವರು ತೀವ್ರವಾಗಿ ಗಾಯಗೊಂಡ ಘಟನೆ ಸೋಮವಾರ ನಡೆಸಿದೆ.
ಲಾರಿ ಚಾಲಕ ನರಗುಂದ ಬೆನಕೊಪ್ಪದ ಬಸವರಾಜಪ್ಪ ನಿಂಗಪ್ಪ ಮರ್ಚಕನವರ ಇವರು ತಮ್ಮ ಲಾರಿಯನ್ನು ಮುರ್ಡೇಶ್ವರ ಕಡೆಯಿಂದ ಭಟ್ಕಳದ ಕಡೆಗೆ ಚಲಾಯಿಸಿಕೊಂಡು ಬರುತ್ತಿರುವ ಸಂದರ್ಭ ರಾತ್ರಿ 2.30ರ ಸುಮಾರಿಗೆ ಭಟ್ಕಳ ಕಡೆಯಿಂದ ಹೊನ್ನಾವರ ಕಡೆಗೆ ಹೋಗುವ ಬೊಲೆರೋ ವಾಹನವೊಂದು ಡಿವೈಡರ್ ಗೆ ಢಿಕ್ಕಿಯಾಗಿ ಎದುರಿನಿಂದ ಬರುತ್ತಿರುವ ಲಾರಿಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಲಾರಿ ಚಾಲಕ, ಬೊಲೆರೋ ಚಾಲಕ ಸಹಿತ ಐವರು ಸೇರಿ ಗಾಯಗೊಂಡಿದ್ದಾರೆ.
ಈ ಕುರಿತು ಚಿಕ್ಕನರಗುಂದದ ರವಿಕುಮಾರ್ ರಮೇಶ ಕಂಬಾರ ಅವರು ನೀಡಿದ ದೂರಿನನ್ವಯ ಮುರ್ಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story