ಆಸ್ಟ್ರೇಲಿಯನ್ ಓಪನ್: ಹಾಲಿ ಚಾಂಪಿಯನ್ ರಫೆಲ್ ನಡಾಲ್ ಗೆ ಸೋಲು

ಮೆಲ್ಬೋರ್ನ್: ಹಾಲಿ ಚಾಂಪಿಯನ್ ರಫೆಲ್ ನಡಾಲ್ Rafael Nadal ಎರಡನೇ ಸುತ್ತಿನಲ್ಲಿ ನೇರ ಸೆಟ್‌ಗಳಿಂದ ಸೋಲುವ ಮೂಲಕ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಿಂದ ನಿರ್ಗಮಿಸಿದ್ದಾರೆ.
ನಡಾಲ್ ಅವರನ್ನು 6-4, 6-4, 7-5 ಸೆಟ್‌ಗಳಿಂದ ಸೋಲಿಸಿದ ಅಮೆರಿಕದ ಮೆಕೆಂಝಿ ಮೆಕ್‌ಡೊನಾಲ್ಡ್ ಮೂರನೇ ಸುತ್ತಿಗೆ ಮುನ್ನಡೆದರು.
ಈ ವರ್ಷದ ಮೊದಲ ಗ್ರ್ಯಾನ್ ಸ್ಲಾಮ್‌ನಲ್ಲಿ ನಂ. 1 ಶ್ರೇಯಾಂಕದ ಆಟಗಾರನಾಗಿರುವ ನಡಾಲ್ ವಿರುದ್ಧ ಮೆಕ್‌ಡೊನಾಲ್ಡ್ ತಮ್ಮ ವೃತ್ತಿಜೀವನದ ಅತಿದೊಡ್ಡ ಗೆಲುವು ಸಾಧಿಸಿದರು.
ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಸ್ಪ್ಯಾನಿಷ್ 36 ವರ್ಷ ವಯಸ್ಸಿನ ನಡಾಲ್ ಮೊದಲಿನ ಲಯ ಕಂಡುಕೊಳ್ಳಲು ವಿಫಲರಾದರು.
Next Story