ಮುಂದಿನ ತಿಂಗಳು ರಾಜೀನಾಮೆ: ನ್ಯೂಝಿಲ್ಯಾಂಡ್ ಪ್ರಧಾನಿಯ ಅಚ್ಚರಿಯ ನಿರ್ಧಾರ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಆರ್ಡರ್ನ್ ಮರು ಆಯ್ಕೆ ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದು, ಫೆಬ್ರವರಿ ಆರಂಭದಲ್ಲಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ.
ಗುರುವಾರ ನೀಡಿದ ವಿಡಿಯೊ ಹೇಳಿಕೆಯಲ್ಲಿ ಈ ವಿಷಯ ಸ್ಪಷ್ಟಪಡಿಸಿರುವ ಅವರು, ಅಕ್ಟೋಬರ್ 14ರಂದು ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ.
"ನಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲವಾದರೂ, ನ್ಯೂಝಿಲ್ಯಾಂಡ್ ಜನತೆಯ ಮೇಲೆ ಹೆಚ್ಚು ಪರಿಣಾಮ ಬೀರುವ ವಿಷಯಗಳು ಈ ವರ್ಷದ ಉದ್ದಕ್ಕೂ ಸರ್ಕಾರದ ಆದ್ಯತೆಯಾಗಿರುತ್ತವೆ ಹಾಗೂ ಚುನಾವಣೆಗೂ ಈ ವಿಷಯಗಳೇ ಪ್ರಮುಖವಾಗಿರುತ್ತವೆ" ಎಂದು ಹೇಳಿದ್ದಾರೆ.
ನ್ಯೂಝಿಲ್ಯಾಂಡ್ ಲೇಬರ್ ಪಾರ್ಟಿ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ತಮಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Next Story