ಹಾಕಿ ವಿಶ್ವಕಪ್: ವೇಲ್ಸ್ ವಿರುದ್ಧ ಭಾರತಕ್ಕೆ 4-2 ಜಯ
ಕ್ರಾಸ್ ಓವರ್‌ನಲ್ಲಿ ನ್ಯೂಝಿಲ್ಯಾಂಡ್ ಎದುರಾಳಿ

ಕ್ರಾಸ್ ಓವರ್‌ನಲ್ಲಿ ನ್ಯೂಝಿಲ್ಯಾಂಡ್ ಎದುರಾಳಿ
ಭುವನೇಶ್ವರ, ಜ.19: ಪುರುಷರ ಹಾಕಿ ವಿಶ್ವಕಪ್ ಟೂರ್ನಿಯ ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ವೇಲ್ಸ್ ತಂಡವನ್ನು 4-2 ಅಂತರದಿಂದ ಮಣಿಸಿತು.
ಮೊದಲ ಬಾರಿ ವಿಶ್ವಕಪ್ ಆಡುತ್ತಿರುವ ವೇಲ್ಸ್ ವಿರುದ್ಧ ಗುರುವಾರ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿರುವ ಭಾರತ ಜನವರಿ 22ರಂದು ನಡೆಯಲಿರುವ ಕ್ರಾಸ್ ಓವರ್ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿದೆ.
ಡಿ ಗುಂಪಿನ ಅಗ್ರಸ್ಥಾನಿ ಇಂಗ್ಲೆಂಡ್ ಕ್ವಾರ್ಟರ್ ಫೈನಲಿಗೆ ನೇರ ಪ್ರವೇಶ ಪಡೆದಿದೆ. ಡಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದಿರುವ ಹರ್ಮನ್‌ಪ್ರೀತ್ ಸಿಂಗ್ ಬಳಗಕ್ಕೆ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯಲು 7 ಗೋಲು ಗಳಿಸುವ ಅಗತ್ಯವಿತ್ತು. ಆದರೆ ಭಾರತವು 4 ಗೋಲುಗಳನ್ನು ಗಳಿಸಲಷ್ಟೇ ಶಕ್ತವಾಯಿತು.
ಮೊದಲಾರ್ಧದ ಅಂತ್ಯಕ್ಕೆ 1-0 ಮುನ್ನಡೆ ಪಡೆದಿದ್ದ ಭಾರತ ದ್ವಿತೀಯಾರ್ಧದಲ್ಲಿ ಇನ್ನೂ 3 ಗೋಲು ಗಳಿಸಿತು. ವೇಲ್ಸ್ ಎರಡು ಗೋಲು ಗಳಿಸಿ ಗಮನ ಸೆಳೆಯಿತು.
Next Story