Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕಾಫಿ ಲೋಕದಲ್ಲಿ ಕೋಲಾಹಲ

ಕಾಫಿ ಲೋಕದಲ್ಲಿ ಕೋಲಾಹಲ

ಮಾಧವ ಐತಾಳ್ಮಾಧವ ಐತಾಳ್20 Jan 2023 5:16 AM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಕಾಫಿ ಲೋಕದಲ್ಲಿ ಕೋಲಾಹಲ

ಹವಾಮಾನ ವ್ಯತ್ಯಯಗಳನ್ನು ತಡೆಯಬಲ್ಲ, ರೋಗರುಜಿನಗಳಿಗೆ ಪ್ರತಿರೋಧ ಶಕ್ತಿಯಿರುವ ಸದೃಢ ತಳಿಗಳ ಶೋಧನೆ ಆಗಬೇಕಿದೆ. ಆದರೆ, ಸಂಶೋಧನೆಗೆ ಸರಕಾರ ಅಗತ್ಯವಿರುವಷ್ಟು ನೆರವು ನೀಡುತ್ತಿಲ್ಲ. ಭಾರತೀಯ ಕೃಷಿ ಸಂಶೋಧನಾ ಮಂಡಳಿ(ಐಸಿಎಆರ್) ಸಂಶೋಧನೆಯನ್ನು ಹಾಗೂ ವಾಣಿಜ್ಯ ಮಂತ್ರಾಲಯವು ವ್ಯಾಪಾರ, ಉತ್ತೇಜನ ಇತ್ಯಾದಿ ವಾಣಿಜ್ಯಿಕ ಚಟುವಟಿಕೆ ನಡೆಸಬೇಕು ಎನ್ನುವುದು ಬೆಳೆಗಾರರ ನಿರೀಕ್ಷೆ. ಕಾಫಿ ಮಂಡಳಿ ಬೆಳೆಗಾರರಿಗೆ ಸ್ಪಂದಿಸುವುದಿಲ್ಲ ಎನ್ನುವ ದೂರು ಹಿಂದಿನಿಂದಲೂ ಇದೆ. ಅದು ಬೆಳೆಗಾರರು-ಮಂಡಳಿ ಹಾಗೂ ಸಂಶೋಧನೆ ನಡುವಿನ ಕಂದರವನ್ನು ಭರ್ತಿ ಮಾಡಬೇಕು ಮತ್ತು ಭಾರತೀಯ ಕಾಫಿಗೆ ಜಾಗತಿಕ ಮನ್ನಣೆ ದೊರಕಿಸಲು ಪ್ರಯತ್ನಿಸಬೇಕು. ಆಗಷ್ಟೇ ಕಾಫಿ ಬೆಳೆಗಾರರ ಬದುಕು ಸಹನೀಯವಾಗುತ್ತದೆ.

ನಮ್ಮಲ್ಲಿ ಹೆಚ್ಚಿನವರ ಮುಂಜಾವನ್ನು ತನ್ನ ಆಹ್ಲಾದದ ಮೂಲಕ ಅರಳಿಸುವ ಕಾಫಿಯ ಲೋಕ ಮಾತ್ರ ನಿರುಮ್ಮಳವಾಗಿಲ್ಲ. ಕಾಫಿ ಉದ್ಯಮ ಹಾಗೂ ಬೆಳೆಗಾರರು ಹಲವು ಕಾರಣಗಳಿಂದ ನೆಮ್ಮದಿ ಕಳೆದುಕೊಂಡಿದ್ದಾರೆ. ಅವರ ಸಮಸ್ಯೆಗೆ ಕಿವಿ ಕೊಡಬೇಕಾದವರು ನಿರ್ಲಕ್ಷ್ಯ ತಳೆದಿದ್ದಾರೆ.

ಕಾಫಿ ಉದ್ಯಮ-ಬೆಳೆಗಾರರ ಸಂಕಷ್ಟಕ್ಕೆ ಹಲವು ಕಾರಣಗಳಿವೆ. ಅವುಗಳೆಂದರೆ, ಬೆಲೆಯಲ್ಲಿ ಅನಿಶ್ಚಿತತೆ, ಹವಾಮಾನ ಬದಲಾವಣೆಯಿಂದ ಆಗುತ್ತಿರುವ ತೀವ್ರ-ಅಕಾಲಿಕ ಮಳೆ, ಬರ ಮತ್ತು ಪ್ರವಾಹ, ಋತುಮಾನದಲ್ಲಿ ವ್ಯತ್ಯಯ, ಭೂಕುಸಿತ, ಕುಶಲ ಕಾರ್ಮಿಕರ ಕೊರತೆ ಹಾಗೂ ಅವರ ವೇತನ ಹೆಚ್ಚಳ, ರಸಗೊಬ್ಬರ-ಕೀಟನಾಶಕ ಮತ್ತಿತರ ಒಳಸುರಿಗಳ ಬೆಲೆ ಹೆಚ್ಚಳ, ಮಾನವ-ವನ್ಯಜೀವಿ ಸಂಘರ್ಷ, ಸರಕಾರದಿಂದ ಬೆಂಬಲದ ಕೊರತೆ (ಬೆಳೆಗಾರರಿಗೆ ಕಡಿಮೆ ಬಡ್ಡಿಯಲ್ಲಿ ಸಾಲ, ಸಂಶೋಧನೆಗೆ ಅಗತ್ಯ ಅನುದಾನ ನೀಡಿಕೆ ಇತ್ಯಾದಿ).

ಕಾಫಿ 17ನೇ ಶತಮಾನದಲ್ಲಿ ಬಾಬಾ ಬುಡಾನ್‌ಗಿರಿಯಲ್ಲಿ ಪರಿಚಯಿಸಲ್ಪಟ್ಟಿತು. ದೇಶಿ ಉತ್ಪಾದನೆಯಲ್ಲಿ ಕರ್ನಾಟಕ ಶೇ.71, ಕೇರಳ ಶೇ.21 ಹಾಗೂ ತಮಿಳುನಾಡು ಶೇ.5ರಷ್ಟು ಉತ್ಪಾದಿಸುತ್ತವೆ. ದೇಶಿ ಉತ್ಪಾದನೆ(3.42 ಲಕ್ಷ ಟನ್)ಯಲ್ಲಿ ರಾಜ್ಯದ ಕೊಡಗು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳ ಪಾಲು 2.41 ಲಕ್ಷ ಟನ್. 2.5 ಲಕ್ಷ ಬೆಳೆಗಾರರಿದ್ದು, ಇವರಲ್ಲಿ ಶೇ.90ರಷ್ಟು ಬೆಳೆಗಾರರ ಹಿಡುವಳಿ ಪ್ರಮಾಣ 10 ಎಕರೆಗಿಂತ ಕಡಿಮೆ ಇದೆ. ಬೆಳೆದಿದ್ದರಲ್ಲಿ ಶೇ.75ರಷ್ಟು ರಫ್ತಾಗುತ್ತದೆ ಹಾಗೂ ಗಮನಾರ್ಹ ಪ್ರಮಾಣದ ವಿದೇಶಿ ವಿನಿಮಯ ಗಳಿಸುತ್ತದೆ. ಕಾಫಿಯ ವಾರ್ಷಿಕ ವಹಿವಾಟು 4,000-5,000 ಕೋಟಿ ರೂ. ಇದೆ. ಹೀಗಿದ್ದರೂ, ಐಟಿ-ಸೇವಾ ಕ್ಷೇತ್ರಕ್ಕೆ ಸಿಗುವ ಕೆಂಪುಹಾಸು ಕಾಫಿ ಕ್ಷೇತ್ರಕ್ಕೆ ಸಿಕ್ಕಿಲ್ಲ.

2018ರಿಂದ ಕಾಫಿ ಬೆಳೆಗಾರರ ಸಂಕಷ್ಟ ಉಲ್ಬಣಗೊಂಡಿದೆ. ಉತ್ಪನ್ನವು ಜಾಗತಿಕ ಮಾರುಕಟ್ಟೆಯೊಂದಿಗೆ ತಳಕು ಹಾಕಿಕೊಂಡಿರುವುದರಿಂದ, ಬೆಲೆಯಲ್ಲಿ ಸಾಕಷ್ಟು ಏರಿಳಿತ ಇರುತ್ತದೆ. ವಿಯಟ್ನಾಂ ಹಾಗೂ ಬ್ರೆಝಿಲ್‌ಗೆ ಹೋಲಿಸಿದರೆ, ಭಾರತದಲ್ಲಿ ಉತ್ಪಾದಕತೆ ಕಡಿಮೆ; ಉತ್ಪಾದನೆ ವೆಚ್ಚ ಅಧಿಕ. ಬ್ರೆಝಿಲ್‌ನಲ್ಲಿ ಕಾರ್ಮಿಕರ ವೇತನವು ಒಟ್ಟು ಉತ್ಪಾದನಾ ವೆಚ್ಚದ ಶೇ.25ರಷ್ಟು ಇದ್ದರೆ, ಭಾರತದಲ್ಲಿ ಅದು ಹೆಚ್ಚು ಇದೆ. ಯಾಂತ್ರೀಕರಣದಿಂದ ವೆಚ್ಚವನ್ನು ಕಡಿಮೆ ಮಾಡಬಹುದಾದರೂ, ತೋಟಗಳು ಸಮತಟ್ಟಾ ಗಿಲ್ಲದೆ ಇರುವುದರಿಂದ ಯಂತ್ರಗಳ ಬಳಕೆ ಕಷ್ಟಕರ. ಬೇರೆ ಉತ್ಪಾದಕ ದೇಶ(ಬ್ರೆಜಿಲ್, ಇಥಿಯೋಪಿಯಾ, ಕೊಲಂಬಿಯಾ, ವಿಯಟ್ನಾಂ)ಗಳಿಗೆ ಹೋಲಿಸಿದರೆ, ದೇಶಿ ಕಾಫಿ ಬೆಳೆಗಾರರು ಸಾಲಕ್ಕೆ ಹೆಚ್ಚು ಬಡ್ಡಿ ತೆರುತ್ತಾರೆ. ಖಾಸಗಿ ಬ್ಯಾಂಕ್‌ಗಳು ಸಾಲಕ್ಕೆ ಭದ್ರತೆ ಕೇಳುತ್ತವೆ. ಸಣ್ಣ-ಮಧ್ಯಮ ಬೆಳೆಗಾರರು ಭದ್ರತೆ ನೀಡಲು ಸಾಧ್ಯವಾಗದೆ ಇರುವುದರಿಂದ, ಹೆಚ್ಚು ಬಡ್ಡಿ(ಶೇ.12) ತೆರಬೇಕಾಗುತ್ತದೆ. ಇದರಿಂದ ಉತ್ಪಾದನೆ ವೆಚ್ಚ ಹೆಚ್ಚುತ್ತದೆ; ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೇಶಿ ಉತ್ಪನ್ನ ಸ್ಪರ್ಧಾತ್ಮಕತೆ ಕಳೆದುಕೊಳ್ಳುತ್ತದೆ. ಪೂರೈಕೆ ಸರಪಳಿಯಲ್ಲಿ ಬೆಳೆಗಾರರಿಗೆ ಕಿಮ್ಮತ್ತಿಲ್ಲ; ಸಂಸ್ಕರಣೆ ಮಾಡುವವರು ಹಾಗೂ ಮಾರಾಟಗಾರರದ್ದೇ ಪ್ರಾಬಲ್ಯ. ಕೊಳ್ಳುವವರೇ ರಾಜರಾದ್ದರಿಂದ, ಬೆಳೆಗಾರರು ಬದಿಗೆ ತಳ್ಳಲ್ಪಟ್ಟಿದ್ದಾರೆ.

ಕುಶಲ ಕಾರ್ಮಿಕರ ಕೊರತೆ ಜೊತೆಗೆ, ವೇತನ ಕೂಡ ಹೆಚ್ಚಿದೆ. ಕಾರ್ಮಿಕರ ಮಕ್ಕಳು ದೈಹಿಕ ಕೆಲಸ ಒಗ್ಗದೆ, ನಗರಗಳನ್ನು ಅರಸಿ ಹೊರಡುತ್ತಿದ್ದಾರೆ. ಇದರಿಂದ ಕೌಶಲರಹಿತ ವಲಸೆ ಕಾರ್ಮಿಕರನ್ನು ಅವಲಂಬಿಸಬೇಕಾಗಿ ಬಂದಿದೆ. ಇವರಿಗೆ ತರಬೇತಿಯಲ್ಲದೆ, ವಸತಿ, ವೈದ್ಯ ಸೌಲಭ್ಯ ಒದಗಿಸಬೇಕಾಗುತ್ತದೆ. ಇದು ಒಟ್ಟಾರೆ ವೆಚ್ಚವನ್ನು ಹೆಚ್ಚಿಸುತ್ತದೆ.

ದೇಶಿ ಕಾಫಿ ಕ್ಷೇತ್ರ ಸಾಲದ ಭಾರದಿಂದ ಹೆಣಗುತ್ತಿದೆ. ಉಪಾಸಿ(ಯುನೈಟೆಡ್ ಪ್ಲಾಂಟರ್ಸ್ ಅಸೋಷಿಯೇಷನ್ ಆಫ್ ಸೌತ್ ಇಂಡಿಯಾ) ಪ್ರಕಾರ, 2019ರ ಅಂತ್ಯದಲ್ಲಿ 1.98 ಲಕ್ಷ ಅಲ್ಪಾವಧಿ ಹಾಗೂ 5.05 ಲಕ್ಷ ದೀರ್ಘಾವಧಿ ಸಾಲ ಬಾಕಿ ಇದ್ದಿತ್ತು(ಒಟ್ಟು ಮೊತ್ತ 436 ಕೋಟಿ ರೂ.). ಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕಾಫಿ ಬೆಳೆಗಾರರಿಗೆ ವಿಶೇಷ ಅವಧಿ ಸಾಲ(ಟರ್ಮ್ ಲೋನ್) ಪ್ಯಾಕೇಜ್ ನೀಡಬೇಕೆಂಬ ಮನವಿಗೆ ಪ್ರತಿಸ್ಪಂದನೆ ಸಿಕ್ಕಿಲ್ಲ. ಕೃಷಿ ವೆಚ್ಚ ಹೆಚ್ಚಳದಿಂದ ಬೆಳೆಗಾರರ ಕೈಯಲ್ಲಿ ಸಾಲ ತೀರಿಸಲು ಹಣ ಉಳಿಯುತ್ತಿಲ್ಲ. ಎಕರೆವಾರು ವೆಚ್ಚ ಕಳೆದ 5 ವರ್ಷದಲ್ಲಿ 50,000 ರೂ.ನಿಂದ 80,000 ರೂ.ನಷ್ಟು ಹೆಚ್ಚಳಗೊಂಡಿದೆ. ಸಾಲವನ್ನು ಮರುವಿನ್ಯಾಸಗೊಳಿಸಬೇಕೆಂಬ ಮನವಿಗೆ ಸ್ಪಂದನೆ ಸಿಕ್ಕಿಲ್ಲ. ಇದರಿಂದ ಪ್ರಮುಖ ಕಾಫಿ ಬೆಳೆಗಾರರ ಸಾಲಗಳು ಅನುತ್ಪಾದಕ ಆಸ್ತಿ(ನಾನ್ ಪರ್ಫಾಮಿಂಗ್ ಅಸೆಟ್) ಆಗಿ, ಇವರೆಲ್ಲರೂ ಸರ್ಫೇಸಿ (ಸೆಕ್ಯುರಿಟೈಸೇಶನ್ ಆ್ಯಂಡ್ ರಿಕನ್‌ಸ್ಟ್ರಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಆ್ಯಂಡ್ ಎನ್ಫೋರ್ಸ್‌ಮೆಂಟ್ ಆಫ್ ಸೆಕ್ಯುರಿಟಿ ಇಂಟೆರೆಸ್ಟ್ ಆ್ಯಕ್ಟ್) ಕಾಯ್ದೆಯನ್ವಯ ಕಾನೂನು ಕ್ರಮ ಎದುರಿಸುತ್ತಿದ್ದು, ತೋಟ ಹರಾಜಾಗುವ ಸಾಧ್ಯತೆಯಿದೆ. ವ್ಯಂಗ್ಯ ನೋಡಿ; ಗೃಹ ಹಾಗೂ ವಾಹನಗಳ ಸಾಲಕ್ಕಿಂತ ಕೃಷಿ ಸಾಲದ ಬಡ್ಡಿ ದುಬಾರಿಯಾಗಿದೆ ಹಾಗೂ ಸುಲಭವಾಗಿ ಮಂಜೂರಾಗುವುದಿಲ್ಲ. ಕಾಫಿ ಬೆಳೆಗಾರರನ್ನು ಸರ್ಫೇಸಿ ಕಾಯ್ದೆಯಿಂದ ಹೊರಗಿಡಬೇಕೆಂದು ರಾಜ್ಯ ಪ್ಲಾಂಟರ್ಸ್ ಅಸೋಷಿಯೇಷನ್(ಕೆಪಿಎ) ಮನವಿ ಸಲ್ಲಿಸಿದೆ.

ಜಗತ್ತಿನೆಲ್ಲೆಡೆ ಗೊಬ್ಬರದ ಬೆಲೆ ಹೆಚ್ಚುತ್ತಿದೆ. ಉಕ್ರೇನ್ ಮೇಲೆ ರಶ್ಯ ದಾಳಿ ನಡೆಸಿದ ಬಳಿಕ ಸಮಸ್ಯೆ ಇನ್ನಷ್ಟು ತೀವ್ರಗೊಂಡಿದೆ. ರಶ್ಯ ಹಾಗೂ ಬೆಲಾರುಸ್ ಸಸ್ಯ ಪೋಷಕಾಂಶಗಳನ್ನು ಉತ್ಪಾದಿಸುವ ಪ್ರಮುಖ ರಾಷ್ಟ್ರಗಳು. ಗೊಬ್ಬರ-ಕೀಟನಾಶಕಗಳ ಬೆಲೆ ಶೇ.20ರಷ್ಟು ಹೆಚ್ಚಳಗೊಂಡಿದೆ. ಬೇಸಿಗೆಯಲ್ಲಿ ವಿದ್ಯುತ್ ಕಡಿತ ಇನ್ನೊಂದು ಸಮಸ್ಯೆ. ಇದರಿಂದ ತೋಟಕ್ಕೆ ನೀರುಣಿಸಲು ಡೀಸೆಲ್ ಜನರೇಟರ್ ಬಳಸಬೇಕಾಗುತ್ತದೆ. ಡೀಸೆಲ್ ಬೆಲೆ ಗಗನ ಮುಟ್ಟಿದೆ.

ಹವಾಮಾನ ವ್ಯತ್ಯಯ

ಹವಾಮಾನ ವ್ಯತ್ಯಯದಿಂದಾಗಿ ಕೀಟಬಾಧೆ ಹೆಚ್ಚುತ್ತಿದೆ ಮತ್ತು ಹೊಸ ಹೊಸ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಇಳುವರಿ ಹಾಗೂ ಗುಣಮಟ್ಟ ಎರಡೂ ಕುಸಿದಿದೆ. 2015, 2016ರಲ್ಲಿ ಬರ ಹಾಗೂ 2018, 2022ರಲ್ಲಿ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತ ಸಂಭವಿಸಿತು.

ಕಳೆದ ಸೆಪ್ಟಂಬರ್‌ನಲ್ಲಿ ಸುರಿದ ಮುಸಲಧಾರೆಗೆ ಕಾಫಿ ತೋಟಗಳಲ್ಲಿ ಎಳೆಯ ಕಾಯಿಗಳು, ಎಲೆಗಳು ಉದುರಿದವು. ನೀರು ನಿಂತು ಗಿಡಗಳು ಕೊಳೆತವು ಹಾಗೂ ರೋಗಪೀಡಿತವಾದವು. ತೋಟಗಳ ಮೂಲಸೌಲಭ್ಯಗಳು ಹಾನಿಗೀಡಾದವು. 2018ರಲ್ಲಿ ಭಾರೀ ಮಳೆಯಿಂದ ಕೊಡಗು ಜಿಲ್ಲೆಯ ಸೋಮವಾರಪೇಟೆ ಹಾಗೂ ಮಡಿಕೇರಿ ಸುತ್ತಮುತ್ತಲಿನ 39 ಗ್ರಾಮಗಳು ಭೂಕುಸಿತಕ್ಕೆ ಈಡಾದವು. 8,000ಕ್ಕೂ ಅಧಿಕ ರೈತರ ತೋಟಗಳು ಶಾಶ್ವತವಾಗಿ ಹಾನಿಗೀಡಾದವು. ಹಾರಂಗಿ ಜಲಾಶಯದಿಂದ ಒಮ್ಮೆಲೆ ಹೆಚ್ಚು ನೀರು ಬಿಟ್ಟಿದ್ದು ಪ್ರವಾಹಕ್ಕೆ ಕಾರಣ ಎನ್ನುವುದು ರೈತರ ದೂರು. ಈ ಸಂಬಂಧ ಹೈಕೋರ್ಟ್ ನಲ್ಲಿ ಸಲ್ಲಿಕೆಯಾದ ಅರ್ಜಿಯಲ್ಲಿ, ‘ನೀರು ನದಿ ಪಾತ್ರದಿಂದ ದೂರವಿದ್ದ ತೋಟಗಳಿಗೂ ನುಗ್ಗಿತು. ಜಲಾಶಯದಿಂದ ಬಿಡುಗಡೆಯಾದ ಭಾರೀ ಪ್ರಮಾಣದ ನೀರಿನಿಂದ ಭೂಪದರಗಳ ಮೇಲೆ ಒತ್ತಡ ಹೆಚ್ಚಿ ಭೂಕುಸಿತ ಸಂಭವಿಸಿತು’ ಎಂದು ತಿಳಿಸಲಾಗಿದೆ. ಹಾರಂಗಿ ಅಣೆಕಟ್ಟು ಪಾತ್ರದಲ್ಲಿ ನೂರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡರು. ಸ್ವಾಭಾವಿಕ ಅವಘಡಗಳ ಪರಿಹಾರ ನಿಧಿ(ಎನ್‌ಡಿಆರ್‌ಎಫ್) ನಿಯಮಗಳ ಅನ್ವಯ, ಎಕರೆಗೆ 35,000 ರೂ. ಹಾಗೂ ಗರಿಷ್ಠ 5 ಎಕರೆಗೆ ಪರಿಹಾರ ನೀಡಲಾಗುತ್ತದೆ. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾದ ಅರ್ಜಿಯಲ್ಲಿ, ‘ತೋಟಗಾರಿಕೆ ಬೆಳೆಗಳಿಗೆ ಹಾನಿ ಹಾಗೂ ರಾಗಿ, ಭತ್ತ, ಜೋಳದ ಬೆಳೆ ಹಾನಿಯನ್ನು ಒಂದೇ ಎಂದು ಪರಿಗಣಿಸಲಾಗುತ್ತಿದೆ. ಇದು ಸರಿಯಲ್ಲ. ತೋಟಗಾರಿಕೆ ಬೆಳೆಗಳಿಗೆ ಬೇರೆಯದೇ ಮಾನದಂಡ ರೂಪಿಸಬೇಕು’ ಎಂದು ಕೋರಲಾಗಿದೆ. ಈ ಸಂಬಂಧ ರಾಜ್ಯ ಮುಖ್ಯ ಕಾರ್ಯದರ್ಶಿ ಒಕ್ಕೂಟ ಸರಕಾರಕ್ಕೆ ಸಲ್ಲಿಸಿದ ಶಿಫಾರಸುಗಳಲ್ಲಿ ಪರಿಹಾರವನ್ನು ಎಕರೆಗೆ 72,000 ರೂ.ಗೆ ಹಾಗೂ 2 ಹೆಕ್ಟೇರ್ ಮಿತಿಯನ್ನು 10 ಹೆಕ್ಟೇರ್‌ಗೆ ಹೆಚ್ಚಿಸಬೇಕು ಎಂಬುದೂ ಒಂದು.

ದಿನಕಳೆದಂತೆ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿದ್ದು, ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಕೃಷಿ-ಉದ್ಯಮಕ್ಕಾಗಿ ಅರಣ್ಯಗಳ ಪರಿವರ್ತನೆ, ಗಣಿಗಾರಿಕೆ, ಒತ್ತುವರಿ, ರಸ್ತೆ, ರೆಸಾರ್ಟ್-ಹೋಂಸ್ಟೇ ಇತ್ಯಾದಿ ನಿರ್ಮಾಣದಿಂದ ಕಾಡುಗಳು ಛಿದ್ರ ಗೊಂಡಿವೆ. ರಾಜ್ಯದಲ್ಲಿ 2 ಲಕ್ಷ ಎಕರೆ ಅರಣ್ಯ ಒತ್ತುವರಿಯಾಗಿದ್ದು, 2014-19ರ ಅವಧಿಯಲ್ಲಿ ದೇಶದಲ್ಲಿ ವನ್ಯಜೀವಿ ದಾಳಿಯಿಂದ 2,500 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಂಚರಿಸುವ ಕಾರಿಡಾರ್ ಹಾಗೂ ವಾಸಸ್ಥಾನವನ್ನು ಕಳೆದುಕೊಂಡು ದಿಕ್ಕುಗೆಡುವ ವನ್ಯಜೀವಿಗಳು ಪಕ್ಕದ ಹಳ್ಳಿ ಇಲ್ಲವೇ ನಗರಕ್ಕೆ ನುಗ್ಗುತ್ತವೆ. ಬೇಸಿಗೆ ಕಾಲದಲ್ಲಿ ನೀರು ಲಭ್ಯವಿಲ್ಲದೆ, ಊರಿಗೆ ನುಗ್ಗುತ್ತವೆ. ಸಕಲೇಶಪುರ ತಾಲೂಕಿನಲ್ಲಿ ಆನೆಗಳು ಕಾಫಿ ತೋಟಕ್ಕೆ ನುಗ್ಗಿ ಬೆಳೆ ಹಾನಿ ಮಾಡುವುದು ದೈನಂದಿನ ಘಟನೆಯಾಗಿದೆ. ಸಿಗುವ ಅರೆಕಾಸಿನಷ್ಟು ಪರಿಹಾರ ಪಡೆಯಲು ರೈತರು ಸರಕಾರಿ ಕಚೇರಿಗಳಿಗೆ ಎಡತಾಕಬೇಕಾಗುತ್ತದೆ. ಹೀಗಾಗಿ, ಹೆಚ್ಚಿನವರು ಬೆಳೆ ನಷ್ಟ ಪರಿಹಾರಕ್ಕೆ ಅರ್ಜಿಯನ್ನೇ ಸಲ್ಲಿಸುವುದಿಲ್ಲ.

ಕಾಫಿ ಕಾಯ್ದೆಗೆ ತಿದ್ದುಪಡಿ

80 ವರ್ಷದಷ್ಟು ಪುರಾತನ ಕಾಫಿ ಕಾಯ್ದೆಯನು ್ನಕಾಫಿ(ಉತ್ತೇಜನ ಮತ್ತು ಅಭಿವೃದ್ಧಿ ಮಸೂದೆ) 2022ರಿಂದ ಬದಲಿಸಲು ಒಕ್ಕೂಟ ಸರಕಾರ ನಿರ್ಧರಿಸಿದೆ. ಕಾಯ್ದೆ ಸಂಸತ್ತಿನಲ್ಲಿ ಮಂಡನೆಯಾಗಬೇಕಿದೆ. ಕಾಫಿಯನ್ನು ವಾಣಿಜ್ಯ-ಕೈಗಾರಿಕಾ ಇಲಾಖೆಯಿಂದ ಕೃಷಿ ಇಲಾಖೆಗೆ ವರ್ಗಾಯಿಸಬೇಕು. ಇದರಿಂದ ಕೃಷಿ ಬೆಳೆಗಳಿಗೆ ಲಭ್ಯವಾಗುವ ಸವಲತ್ತುಗಳು ಕಾಫಿ ಬೆಳೆಗೂ ಸಿಗಲಿವೆ ಎನ್ನುವುದು ನಿರೀಕ್ಷೆ. ಆದರೆ, ಕೃಷಿ ಇಲಾಖೆಗೆ ಹೆಚ್ಚು ಅನುದಾನ ನೀಡಿದರೂ, ಅದು ರಾಗಿ, ಭತ್ತ, ಜೋಳ ಇತ್ಯಾದಿಯನ್ನು ಬಿಟ್ಟು ಕಾಫಿಗೆ ಆದ್ಯತೆ ನೀಡುತ್ತದೆ ಎನ್ನುವ ಖಾತ್ರಿ ಇಲ್ಲ. ಏನಾದರೂ ಸಹಾಯ ಆಗಬಹುದು ಎನ್ನುವುದು ಬೆಳೆಗಾರರ ನಿರೀಕ್ಷೆ.

ಏನು ಮಾಡಬಹುದು?

ದೇಶ-ರಾಜ್ಯದಲ್ಲಿ ಕಾಫಿ ತೋಟಗಳು ನೆರಳು ಹಾಗೂ ಎತ್ತರ ಪ್ರದೇಶದಲ್ಲಿ ಇರುವುದರಿಂದ, ಇಲ್ಲಿನ ಕಾಫಿ ವಿಶಿಷ್ಟ ಸ್ವಾದ ಹೊಂದಿದೆ. ಇನ್ನಿತರ ದೇಶಗಳು ಬಯಲಿನಲ್ಲಿ ಕಾಫಿ ಬೆಳೆಯುತ್ತವೆ. ಈ ವೈಶಿಷ್ಟ್ಯವನ್ನು ಬಳಸಿಕೊಂಡು, ಜಾಗತಿಕ ಮಟ್ಟದಲ್ಲಿ ಕಾಫಿಯನ್ನು ಇನ್ನಷ್ಟು ವಿಸ್ತರಿಸಬಹುದು. ವಿಶ್ವ ಮಾರುಕಟ್ಟೆಯಲ್ಲಿ ಭಾರತೀಯ ಕಾಫಿಗೆ ಹೆಚ್ಚು ಬೇಡಿಕೆ ಇರುವುದರಿಂದ, ದೇಶಿ ಮಾರುಕಟ್ಟೆಯನ್ನು ನಿರ್ಲಕ್ಷಿಸಲಾಗಿದೆ. ಇದರಿಂದ ವಿಯಟ್ನಾಂ ಅಥವಾ ಬ್ರೆಝಿಲ್‌ನಲ್ಲಿ ಬಂಪರ್ ಬೆಳೆ ಬಂದಲ್ಲಿ, ದೇಶಿ ಕಾಫಿಗೆ ಬೇಡಿಕೆ ಕುಸಿಯುತ್ತದೆ. ಬೆಳೆಗಾರರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇದನ್ನು ತಪ್ಪಿಸಲು ದೇಶಿ ಮಾರುಕಟ್ಟೆಯನ್ನು ಬಲಪಡಿಸಬೇಕಾಗುತ್ತದೆ.

19ನೇ ಶತಮಾನಕ್ಕೆ ಮೊದಲೇ ದೇಶ ಕಾಫಿಯನ್ನು ರಫ್ತು ಮಾಡಲು ಆರಂಭಿಸಿದ್ದರೂ, ಜಾಗತಿಕ ಮಾರುಕಟ್ಟೆಯಲ್ಲಿ ತನ್ನದೇ ಆದ ಅಸ್ಮಿತೆ ಹೊಂದಿಲ್ಲ. ‘ನೆರಳಲ್ಲಿ ಬೆಳೆದ ಉತ್ಪನ್ನ’ ಎನ್ನುವ ಮನ್ನಣೆ ಸಿಕ್ಕಿಲ್ಲ. ದೇಶದ ರೊಬಸ್ಟಾ/ಅರೇಬಿಕಾ ತಳಿಗಳಿಗೆ ಕೊಲಂಬಿಯಾದ ಅದೇ ಉತ್ಪನ್ನಗಳಿಗಿಂತ ಅಧಿಕ ಬೆಲೆ ಸಿಗುತ್ತದೆ. ಆದರೆ, ವಿದೇಶಿ ಗ್ರಾಹಕರಿಗೆ ಉತ್ಪನ್ನದ ಮೂಲ ತಿಳಿಯಬೇಕು. ‘ಇಂಡಿಯಾ ಕಾಫಿ’ ಎಂಬ ಬ್ರಾಂಡನ್ನು ಬೆಳಗಿಸಲು ಕಾಫಿ ಮಂಡಳಿ/ವಾಣಿಜ್ಯ-ಕೈಗಾರಿಕಾ ಮಂತ್ರಾಲಯ ಶ್ರಮಿಸಬೇಕು.

ಈ ಮೊದಲು ಕಾಫಿ ಹಣ್ಣನ್ನು ಹಾಗೆಯೇ ಮಾರಲಾಗುತ್ತಿತ್ತು. ಈಗ ಮೌಲ್ಯವರ್ಧನೆ ಮಾಡಿ ಬೀಜ, ಹಸಿರು ಬೀಜ, ಹುರಿದ ಬೀಜ, ಹುರಿದ ಪುಡಿ ಹಾಗೂ ಹಸಿರು ಉತ್ಪನ್ನವಾಗಿ ಮಾರಲಾಗುತ್ತಿದೆ. ಬೆಳೆಗಾರರು ಪರ್ಯಾಯ ಆದಾಯ ಮೂಲಗಳನ್ನು ಅನ್ವೇಷಿಸಬೇಕಿದೆ. ಕಾಫಿ ತೋಟದಲ್ಲಿ ಕಾಳು ಮೆಣಸು, ಏಲಕ್ಕಿಯಲ್ಲದೆ ವಿದೇಶಿ ಹಣ್ಣಿನ ಗಿಡಗಳು, ಆಹಾರ ಬೆಳೆಗಳು, ಮೀನುಗಾರಿಕೆ, ಹೈನುಗಾರಿಕೆ, ಜೇನು ಕೃಷಿ ಹಾಗೂ ಹಸಿರು ಪ್ರವಾಸೋದ್ಯಮವನ್ನು ಉತ್ತೇಜಿಸಬಹುದು. ಈಗಾಗಲೇ ಕಾಫಿ ನಡುವೆ ಅವಕಾಡೋ, ಮ್ಯಾಂಗೋಸ್ಟೀನ್, ಕಿತ್ತಳೆ, ಸೀಬೆ ಹಾಗೂ ಇನ್ನಿತರ ಹಣ್ಣಿನ ಗಿಡ ಬೆಳೆಯಲಾಗುತ್ತಿದೆ.

ಹವಾಮಾನ ವ್ಯತ್ಯಯಗಳನ್ನು ತಡೆಯಬಲ್ಲ, ರೋಗರುಜಿನಗಳಿಗೆ ಪ್ರತಿರೋಧ ಶಕ್ತಿಯಿರುವ ಸದೃಢ ತಳಿಗಳ ಶೋಧನೆ ಆಗಬೇಕಿದೆ. ಆದರೆ, ಸಂಶೋಧನೆಗೆ ಸರಕಾರ ಅಗತ್ಯವಿರುವಷ್ಟು ನೆರವು ನೀಡುತ್ತಿಲ್ಲ. ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಸಂಶೋಧನೆಯನ್ನು ಹಾಗೂ ವಾಣಿಜ್ಯ ಮಂತ್ರಾಲಯವು ವ್ಯಾಪಾರ, ಉತ್ತೇಜನ ಇತ್ಯಾದಿ ವಾಣಿಜ್ಯಿಕ ಚಟುವಟಿಕೆ ನಡೆಸಬೇಕು ಎನ್ನುವುದು ಬೆಳೆಗಾರರ ನಿರೀಕ್ಷೆ.

ಕಾಫಿ ಮಂಡಳಿ ಬೆಳೆಗಾರರಿಗೆ ಸ್ಪಂದಿಸುವುದಿಲ್ಲ ಎನ್ನುವ ದೂರು ಹಿಂದಿನಿಂದಲೂ ಇದೆ. ಅದು ಬೆಳೆಗಾರರು-ಮಂಡಳಿ ಹಾಗೂ ಸಂಶೋಧನೆ ನಡುವಿನ ಕಂದರವನ್ನು ಭರ್ತಿ ಮಾಡಬೇಕು ಮತ್ತು ಭಾರತೀಯ ಕಾಫಿಗೆ ಜಾಗತಿಕ ಮನ್ನಣೆ ದೊರಕಿಸಲು ಪ್ರಯತ್ನಿಸಬೇಕು. ಆಗಷ್ಟೇ ಕಾಫಿ ಬೆಳೆಗಾರರ ಬದುಕು ಸಹನೀಯವಾಗುತ್ತದೆ.

​

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಮಾಧವ ಐತಾಳ್
ಮಾಧವ ಐತಾಳ್
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X