ಜೋಧ್‌ಪುರದಲ್ಲಿ ಪ್ರಶಂಸಾ ಪುರಸ್ಕಾರ ಸ್ವೀಕರಿಸಿದ ಜೈಂಟ್ಸ್ ಗ್ರೂಪ್ ಉಡುಪಿ
ಜೈಪುರ: ರಾಜಸ್ಥಾನದ ಜೈಪುರದಲ್ಲಿ ಶುಕ್ರವಾರ ನಡೆದ 47ನೇ ಆವೃತ್ತಿಯ ಜೈಂಟ್ಸ್ ಸಮಾವೇಶದಲ್ಲಿ ಗ್ರೂಪ್‌ನ ಜಾಗತಿಕ ಅಧ್ಯಕ್ಷೆ ಶೈನಾ ಎಂ.ಸಿ. ಅವರಿಂದ ಜೈಂಟ್ಸ್ ಗ್ರೂಪ್ ಉಡುಪಿ ಪ್ರಶಂಸಾ ಪುರಸ್ಕಾರವನ್ನು ಸ್ವೀಕರಿಸಿದೆ.
ಉಡುಪಿ ಜೈಂಟ್ಸ್‌ನ ಅಧ್ಯಕ್ಷ ಇಕ್ಬಾಲ್ ಮನ್ನಾ, ನಿರ್ದೇಶಕ ವಾದಿರಾಜ್, ಸೆಂಟ್ರಲ್ ಸಮಿತಿಯ ಸದಸ್ಯ ದಿನಕರ್ ಅಮೀನ್ ಹಾಗೂ ಪುಷ್ಪಾ ಅವರು ಪ್ರಶಸ್ತಿ ಸಮಾರಂಭದಲ್ಲಿ ಹಾಜರಿದ್ದರು.
ಇಕ್ಬಾಲ್ ಮನ್ನಾ ಇತ್ತೀಚೆಗೆ ಬೆಲ್ಜಿಯಂನಲ್ಲಿ ನಡೆದ ಸಮಾವೇಶದಲ್ಲಿ ಶ್ರೇಷ್ಠ ಅಧ್ಯಕ್ಷ ಪ್ರಶಸ್ತಿ, ಶ್ರೇಷ್ಠ ಟೀಮ್ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು.
Next Story