ಬನ್ನಂಜೆ: ಡಾ.ಬಿ.ಆರ್.ಅಂಬೇಡ್ಕರ್ ರಿಕ್ಷಾ ನಿಲ್ದಾಣ ಉದ್ಘಾಟನೆ

ಉಡುಪಿ: ಬನ್ನಂಜೆಯಲ್ಲಿರುವ ಉಡುಪಿ ತಾಲೂಕು ಕಚೇರಿ ಸಮೀಪ ನೂತನಾಗಿ ನಿರ್ಮಿಸಲಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ರಿಕ್ಷಾ ನಿಲ್ದಾಣವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಇತ್ತೀಚೆಗೆ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ರಿಕ್ಷಾ ನಿಲ್ದಾಣದ ಅಧ್ಯಕ್ಷೆ ಶಿವಾನಂದ ಮೂಡಬೆಟ್ಟು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶ ಭಟ್ ಕೊಡವೂರು, ಸದಸ್ಯೆ ಸವಿತಾ ಹರೀಶ್ ರಾಮ್, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ, ಯುವ ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಗರ ಠಾಣಾ ಸಹಾಯಕ ಉಪನಿರೀಕ್ಷಕ ಜಯಕರ ಐರೋಡಿ, ಆಶಾ ಕಾರ್ಯಕರ್ತೆ ರೂಪಾ, ಮಹಿಳಾ ಆರೋಗ್ಯ ಸಹಾಯಕಿ ರೇಖಾ, ಅಂಗನವಾಡಿ ಕಾರ್ಯಕರ್ತೆ ಅನಿತಾ, ಸಮಾಜ ಸೇವಕ ಸುದೇಶ್ ಶೇಟ್ ಬನ್ನಂಜೆ, ದಯಾನಂದ ಕಲ್ಮಾಡಿ, ಅಟೋ ಚಾಲಕಿ ಜಾಸ್ಮಿನ್ ಅವರನ್ನು ಸನ್ಮಾನಿಸಲಾಯಿತು.
ರಿಕ್ಷಾ ನಿಲ್ದಾಣದ ಗೌರವಾಧ್ಯಕ್ಷ ಗಣೇಶ್ ಬಂಗೇರ, ಕಾರ್ಯದರ್ಶಿ ಗಿರೀಶ್ ಬನ್ನಂಜೆ, ಸಂಜೀವ ಚೆಂಡ್ಕಳ, ರಾಘವೇಂದ್ರ, ಮಲ್ಪೆ ಸಚ್ಚಿದಾನಂದ, ಚಿದಾನಂದ, ರಿಯಾಜ್ ಮೂಡಬೆಟ್ಟು, ಜಯಕರ ಮೂಡಬೆಟ್ಟು, ಧನ್ಯರಾಜ್ ಕಸ್ತೂರ್ಬಾ ನಗರ ಉಪಸ್ಥಿತರಿದ್ದರು. ಶಂಕರ್‌ದಾಸ್ ಚೆಂಡ್ಕಳ ಕಾರ್ಯಕ್ರಮ ನಿರೂಪಿಸಿದರು.