ನ್ಯಾಷನಲ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪದಕ

ಉಡುಪಿ: ಗುರ್‌ಗಾಂವ್‌ನಲ್ಲಿ ಇತ್ತೀಚೆಗೆ ನಡೆದ ಸಿಬಿಎಸ್‌ಸಿ ನ್ಯಾಷನಲ್ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಂಗಳೂರಿನ ಶ್ರೀರವಿಂಶಂಕರ್ ವಿದ್ಯಾಮಂದಿರದ 9ನೇ ತರಗತಿಯ ವಿದ್ಯಾರ್ಥಿನಿ ಸಮಖ್ಯ ಎಸ್.ಅಡಿಗ 300ಮೀಟರ್ ಟಿಟಿ 33.85 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ ಚಿನ್ನದ ಪದಕ ಹಾಗೂ 1000 ಮೀಟರ್ ರಿಂಕ್ ರೇಸ್‌ನಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಸಂದೀಪ್ ಅಡಿಗ ಮತ್ತು ಸೀಮಾ ಸಂದೀಪ್ ದಂಪತಿ ಪುತ್ರಿ ಯಾಗಿರುವ ಇವರು, 2018ರಿಂದ ಬೆಂಗಳೂರು ವಿದ್ಯಾರಣ್ಯಪುರ ಬೃಂದಾವನ್ ರೋಲರ್ ಸ್ಕೇಟಿಂಗ್ ಕ್ಲಬ್‌ನಲ್ಲಿ ನಾಗೇಶ್ ಮತ್ತು ಮಧುಚಂದ್ರ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
Next Story