ಜಮ್ಮು-ಕಾಶ್ಮೀರ: ಕಮರಿಗೆ ಬಿದ್ದ ಮಿನಿಬಸ್, ಐವರು ಮೃತ್ಯು, 15 ಮಂದಿಗೆ ಗಾಯ

ಶ್ರೀನಗರ: ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಶುಕ್ರವಾರ ತಡರಾತ್ರಿ ಮಿನಿಬಸ್ ರಸ್ತೆಯಿಂದ ಸ್ಕಿಡ್ ಆಗಿ ಕಮರಿಗೆ ಬಿದ್ದ ಪರಿಣಾಮ ಮಹಿಳೆ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ ಹಾಗೂ 15 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಜಮ್ಮು -ಕಾಶ್ಮೀರದ ಬಿಲಾವರ್ ನ ಧನು ಪರೋಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಕೂಗ್‌ನಿಂದ ಡ್ಯಾನಿ ಪೆರೋಲ್‌ಗೆ ಸಾಗಿಸುತ್ತಿದ್ದ ವಾಹನವು ಸಿಲಾದಲ್ಲಿ ಆಳವಾದ ಕಮರಿಗೆ ಬಿದ್ದ ನಂತರ ಈ ಅಪಘಾತ ಸಂಭವಿಸಿದೆ. ಅಪಘಾತ ನಡೆದ ತಕ್ಷಣ ನಾಲ್ಕು ಜನರು ಸಾವನ್ನಪ್ಪಿದರು ಹಾಗೂ ಐದನೇ ವ್ಯಕ್ತಿ ತೀವ್ರ ಗಾಯದಿಂದ ಮೃತಪಟ್ಟರು.
ಗಾಯಗೊಂಡ 15 ಮಂದಿಯನ್ನು ಬಿಲಾವರ್ ನ ಉಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಬಂಟು, ಹನ್ಸ್ ರಾಜ್, ಅಜೀತ್ ಸಿಂಗ್, ಅಮ್ರೂ ಹಾಗೂ ಕಾಕು ರಾಮ್ ಎಂದು ಗುರುತಿಸಲಾಗಿದೆ.
ಈ ಸಂಬಂಧ ಬಿಲಾವರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ
Next Story





