ಫೆ.5ರಂದು ಮಂಗಳೂರಿನಲ್ಲಿ 'ಟೀನ್ಸ್ ಪಾಥ್' ವಿಚಾರ ಗೋಷ್ಠಿ

ಮಂಗಳೂರು, ಜ.21: ಇಂದು ವಿದ್ಯಾರ್ಥಿ ಸಮೂಹದಲ್ಲಿ ಹಲವರು ಡ್ರಗ್ಸ್, ಮಾನಸಿಕ ಖಿನ್ನತೆ, ದ್ವೇಷ, ವೈಷಮ್ಯ, ಕೌಟುಂಬಿಕ ಕಲಹ, ಅಪರಾಧ ಚಟುವಟಿಕೆ, ಲಜ್ಜಾಹೀನತೆ, ಆತ್ಮಹತ್ಯೆ ಇತ್ಯಾದಿಗಳಿಗೆ ಬಲಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕರ್ನಾಟಕ ಸಲಫಿ ಅಸೋಸಿಯೇಶನ್ ನ ಇದರ ವಿದ್ಯಾರ್ಥಿ ಘಟಕವು 'TEENSPATH' (ಟೀನ್ಸ್‌ಪಾಥ್) ಎಂಬ ವಿದ್ಯಾರ್ಥಿ ವಿಚಾರ ಗೋಷ್ಠಿಯನ್ನು ಫೆಬ್ರವರಿ 5ರಂದು ಮಂಗಳೂರಿನ ಹಂಪನಕಟ್ಟೆಯ ಐ.ಎಂ.ಎ. ಹೌಸ್‌ನಲ್ಲಿ ಆಯೋಜಿಸಿದೆ ಎಂದು ಪ್ರಕಟನೆ ತಿಳಿಸಿದೆ.
ಅಂದು ಬೆಳಗ್ಗೆ 8:30ರಿಂದ ಅಪರಾಹ್ನ 3ರವರೆಗೆ ನಡೆಯುವ ವಿಚಾರ ಗೋಷ್ಠಿಯಲ್ಲಿ ವಿದ್ವಾಂಸರು, ಅಧಿಕಾರಿಗಳು ಭಾಗವಹಿಸಲಿದ್ದು, ಹಲವಾರು ವಿಷಯಗಳ ಬಗ್ಗೆ ಚರ್ಚೆ, ವಿಷಯ ಮಂಡನೆ ಮಾಡಲಿದ್ದಾರೆ.
ಹತ್ತನೇ ತರಗತಿ, ಪದವಿ ಪೂರ್ವ ಹಾಗೂ ಪದವಿಯ ವಿದ್ಯಾರ್ಥಿಗಳಿಗೆ ಉಚಿತವಾಗಿರುವ ಈ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಲಿಚ್ಛಿಸುವವರು ಹೆಸರು ನೋಂದಾಯಿಸಿಕೊಳ್ಳಬೇಕು. ಹೆಸರು ನೋಂದಾಯಿಸಲು ಪೋಷಕರೂ, ವಿದ್ಯಾರ್ಥಿಗಳು ಮೊ.ಸಂ.: 8547843140, 9448386144, 8762900622 ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.







