ಚಿಕ್ಕಮಗಳೂರು | ಕಾರು ಮರಕ್ಕೆ ಢಿಕ್ಕಿ: ಮೆಸ್ಕಾಂ ಜೆಇ ಸಹಿತ ಇಬ್ಬರು ಮೃತ್ಯು

ಚಿಕ್ಕಮಗಳೂರು, ಜ.21: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೆಸ್ಕಾಂ ಜೆ.ಇ. ಸಹಿತ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಅಜ್ಜಂಪುರ ತಾಲೂಕಿನ ಮಾಕನಹಳ್ಳಿ ಬಳಿ ಇಂದು ಬೆಳಗ್ಗೆ ನಡೆದಿದೆ.
ಮೃತರನ್ನು ಶಿವನಿ ಮೆಸ್ಕಾಂ ಜೆಇ ಕಿರಣ್ (32) ಹಾಗೂ ನಾಗರಾಜ್ (40) ಎಂದು ಗುರುತಿಸಲಾಗಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದವರಾದ ಕಿರಣ್ ಅವರ ವಿವಾಹವು ಫೆಬ್ರವರಿ 8ಕ್ಕೆ ನಿಗದಿಯಾಗಿತ್ತು. ನಾಗರಾಜ್ ಅಜ್ಜಂಪುರ ತಾಲೂಕಿನ ಶಿವನಿ ಮೂಲದವರು ಎಂದು ತಿಳಿದುಬಂದಿದೆ.
Next Story




.jpeg)
.jpeg)

