ಮಂಗಳೂರು: ಜೋಸ್ ಆಲುಕ್ಕಾಸ್ ನೂತನ ಶೋರೂಂ ಉದ್ಘಾಟನೆ

ಮಂಗಳೂರು, ಜ.21: ನಗರದ ಕೆ.ಎಸ್. ರಾವ್ ರೋಡ್‌ನಲ್ಲಿರುವ ಜೋಸ್ ಆಲುಕ್ಕಾಸ್ ಮಳಿಗೆಯ ನೂತನ ಶೋರೂಂ ಇಂದು ಉದ್ಘಾಟನೆಗೊಂಡಿತು.
ಮಂಗಳೂರು ಪೊಲೀಸ್ ಉಪ ಆಯುಕ್ತ ಅಂಶುಕುಮಾರ್ ನೂತನ ಶೋರೂಂ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಚಲನಚಿತ್ರ ನಟರಾದ ಪ್ರಕಾಶ್ ತೂಮಿನಾಡು, ಸೋನಲ್ ಮೊಂತೆರೋ ಅತಿಥಿಗಳಾಗಿ ಭಾಗವಹಿಸಿದ್ದರು.
ಜೋಸ್ ಆಲುಕ್ಕಾಸ್ ಆಡಳಿತ ನಿರ್ದೇಶಕರಾದ ಪಾಲ್ ಜೆ. ಆಲುಕ್ಕಾ, ಜಾನ್ ಆಲುಕ್ಕಾ ಉಪಸ್ಥಿತರಿದ್ದರು. ಇನ್ನೋರ್ವ ಆಡಳಿತ ನಿರ್ದೇಶಕ ವರ್ಗಿಸ್ ಆಲುಕ್ಕಾ ವಂದಿಸಿದರು.
ಉದ್ಘಾಟನಾ ಸಂಭ್ರಮದ ಅಂಗವಾಗಿ ರೂ.40,000 ರೂ. ಮೌಲ್ಯದ ಚಿನ್ನಾಭರಣ ಖರೀದಿಸುವ ಗ್ರಾಹಕರು ಚಿನ್ನದ ನಾಣ್ಯವನ್ನು ಉಚಿತವಾಗಿ ಪಡೆಯಲಿದ್ದಾರೆ. ಅಲ್ಲದೆ ಅವರು ವಜ್ರಗಳ ಮೇಲೆ ಶೇ.20 ರಿಯಾ ಯಿತಿ ಮತ್ತು ಪ್ಲಾಟಿನಂ ಆಭರಣಗಳ ಮೇಲೆ ಶೇ.7 ರಿಯಾಯಿತಿ ಕೂಡಾ ಪಡೆಯಲಿದ್ದಾರೆ. ಅವರು ತಮ್ಮ ಹಳೆಯ 22 ಕ್ಯಾರಟ್ ಚಿನ್ನವನ್ನು ಬಿಐಎಸ್ ಹಾಲ್ ಮಾರ್ಕ್ ಮಾಡಿದ 916 ಚಿನ್ನದ ಆಭರಣಗಳಿಗೆ ಅಥವಾ ಐಜಿಐ ಪ್ರಮಾಣೀಕೃತ ವಜ್ರದ ಆಭರಣಗಳಿಗೆ ಹೆಚ್ಚುವರಿ ಲಾಭಗಳೊಂದಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು. ಇವುಗಳ ಜೊತೆಗೆ, ಮದುವೆಯ ಆಭರಣ ಖರೀದಿಗಳಿಗೆ ವಿಶೇಷ ರಿಯಾಯಿತಿಗಳು ಮತ್ತು ದರ ರಕ್ಷಣೆಗಾಗಿ ಅವರ ಎಲ್ಲಾ ಖರೀದಿಗಳಿಗೆ ಅಡ್ವಾನ್ಸ್ ಬುಕ್ಕಿಂಗ್ ಸೌಲಭ್ಯಗಳನ್ನು ಪಡೆಯಬಹುದು ಎಂದು ಸಂಸ್ಥೆಯ ಪ್ರತಿನಿಧಿಗಳು ತಿಳಿಸಿದ್ದಾರೆ.
ಪ್ರತಿಯೊಬ್ಬರೂ ಸಣ್ಣ ಬಜೆಟ್ ನೊಂದಿಗೆ ಮಾಸಿಕ ಚಿನ್ನ ಖರೀದಿ ಯೋಜನೆಗಳ ಮೂಲಕ ಶುದ್ಧ ಚಿನ್ನವನ್ನು ಖರೀದಿಸಬಹುದು ಮತ್ತು ವಿಶೇಷ ಲಾಭಗಳನ್ನು ಪಡೆಯಬಹುದು.
ಜೋಸ್ ಆಲುಕ್ಕಾಸ್ ಬ್ರಾಂಡ್ ಕಳೆದ 58 ವರ್ಷಗಳಿಂದ ನಂಬಿಕೆ ಮತ್ತು ಪರಿಶುದ್ಧತೆಗೆ ಸಮಾನಾರ್ಥಕವಾಗಿದೆ. ವಿಶಿಷ್ಟವಾದ ಕಾರ್ಯಾಚರಣೆಯ ವ್ಯವಸ್ಥೆ ಮತ್ತು ದೂರದೃಷ್ಟಿಯೊಂದಿಗೆ, ಬ್ರ್ಯಾಂಡ್ ಆಭರಣ ವ್ಯಾಪಾರ ಕ್ಷೇತ್ರದಲ್ಲಿ ಉನ್ನತ ಪರಂಪರೆ ಯನ್ನು ಸ್ಥಾಪಿಸಿದೆ ಎಂದು ಜೋಸ್ ಅಲುಕ್ಕಾಸ್ ಪ್ರತಿನಿಧಿ ತಿಳಿಸಿದ್ದಾರೆ.
ಹೊಸ ಶೋರೂಂ ಹಬ್ಬದ ವಿಶೇಷ ವಜ್ರದ ಆಫರ್‌ಗಳನ್ನು ಸಹ ಹೊಂದಿದೆ. ರೂ.1,00,000ಕ್ಕಿಂತ ಹೆಚ್ಚಿನ ಮೌಲ್ಯದ ವಜ್ರಾಭರಣ ಖರೀದಿಗೆ ವಜ್ರದ ಪೆಂಡೆಂಟ್ ಉಚಿತವಾಗಿ ದೊರೆಯುತ್ತದೆ, ರೂ.2,50,000ಕ್ಕಿಂತ ಹೆಚ್ಚಿನ ಮೌಲ್ಯದ ವಜ್ರಾಭರಣ ಖರೀದಿಗೆ ವಜ್ರದ ಕವಿಯೋಲೆಗಳು ಉಚಿತ ಮತ್ತು ರೂ. 5,00,000ಕ್ಕಿಂತ ಹೆಚ್ಚಿನ ಮೌಲ್ಯದ ವಜ್ರಾಭರಣ ಖರೀದಿಗೆ ವಜ್ರದ ನೆಕ್ಲೇಸ್ ಸೆಟ್ ದೊರೆಯುತ್ತದೆ. ಎಲ್ಲಾ ರೀತಿಯ ಆಭರಣಗಳನ್ನು ಖರೀದಿಸಲು ಮತ್ತು ಅದೇ ಸಮಯದಲ್ಲಿ ಹೊಚ್ಚ ಹೊಸ ಆಭರಣ ಶಾಪಿಂಗ್ ಅನುಭವವನ್ನು ಪಡೆಯಲು ಜನರಿಗೆ ಇದು ಉತ್ತಮ ಅವಕಾಶವಾಗಿದೆ.
ಜೋಸ್ , ಆಲುಕ್ಕಾಸ್ ಬ್ರ್ಯಾಂಡ್ ಕಳೆದ 58 ವರ್ಷಗಳಿಂದ ನಂಬಿಕೆ ಮತ್ತು ಪರಿಶುದ್ಧತೆಗೆ ಸಮಾನಾರ್ಥಕವಾಗಿದೆ. ವಿಶಿಷ್ಟವಾದ ಬ್ರ್ಯಾಂಡ್ ಆಭರಣ ವ್ಯಾಪಾರ ಕ್ಷೇತ್ರದಲ್ಲಿ ಗಟ್ಟಿಯಾದ ಪರಂಪರೆಯನ್ನು ಸ್ಥಾಪಿಸಿದೆ. ಹಲವಾರು ಕೈಗಾರಿಕಾ ಮಾನದಂಡಗಳನ್ನು ಭಾರತದಲ್ಲಿ ಮೊದಲು ಜೋಸ್ ಅಲುಕ್ಕಾಸ್ ಪರಿಚಯಿಸಿತು ಎಂಬುದನ್ನು ಗಮನಿಸ ಬೇಕು. ಆದು ಬಿಐಎಸ್ 916 ಹಾಲ್ ಮಾರ್ಕ್ ಪರಿಚಯಿಸಿದ್ದನ್ನು ಒಳಗೊಂಡಿದೆ. ಇದು ನಂತರ ಶುದ್ಧ ಚಿನ್ನಕ್ಕೆ ಕೈಗಾರಿಕಾ ಮಾನದಂಡವಾಯಿತು. ಈಗ josalukkasonline.com ಮೂಲಕ ಆನ್‌ಲೈನ್ ಮಾರಾಟದಲ್ಲಿ ಸಹ ತೊಡಗಿಸಿಕೊಂಡಿದೆ ಮತ್ತು ಇತ್ತೀಚೆಗೆ ಡಿಜಿ ಗೋಲ್ಡ್(www.josalukkasdigigold.com) ಅನ್ನು ಪ್ರಾರಂಭಿಸಿದೆ. ಇದರ ಮೂಲಕ ಪ್ರತಿಯೊಬ್ಬರೂ, ರೂ.1ರಿಂದ ಆರಂಭವಾಗುವಂತೆ, ಡಿಜಿಟಲ್ ಆಗಿ ಚಿನ್ನವನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು ಎಂದು ಸಂಸ್ಥೆ ಯ ಪ್ರಕಟನೆ ತಿಳಿಸಿದೆ.