ಟಾಸ್ ಗೆದ್ದ ಬಳಿಕ ತಂಡದ ನಿರ್ಧಾರವನ್ನೇ ಮರೆತುಬಿಟ್ಟ ನಾಯಕ ರೋಹಿತ್ ಶರ್ಮಾ: ವೀಡಿಯೊ ವೈರಲ್

ಹೊಸದಿಲ್ಲಿ: ಭಾರತದ ನಾಯಕ ರೋಹಿತ್ ಶರ್ಮಾ(Rohit Sharma ) ನ್ಯೂಝಿಲ್ಯಾಂಡ್ ವಿರುದ್ಧ ಶನಿವಾರ ರಾಯ್ಪುರದಲ್ಲಿ ದ್ವಿತೀಯ ಏಕದಿನ ಪಂದ್ಯದಲ್ಲಿ ಟಾಸ್ ಜಯಿಸಿದ ನಂತರ ಏನು ಮಾಡಬೇಕೆಂಬ ಬಗ್ಗೆ ತಂಡದ ನಿರ್ಧಾರವನ್ನು ಮರೆತುಬಿಟ್ಟ ಪ್ರಸಂಗ ನಡೆದಿದೆ.
ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್, ಕಿವೀಸ್ ನಾಯಕ ಟಾಮ್ ಲಾಥಮ್ ಹಾಗೂ ಕಾಮೆಂಟೇಟರ್ ರವಿ ಶಾಸ್ತ್ರಿ ಅವರನ್ನು ರೋಹಿತ್ ಸ್ವಲ್ಪ ಹೊತ್ತು ಕಾಯಿಸಿದರು.
"ನಾವು ಏನು ಮಾಡಬೇಕೆಂದು ನಾನು ಮರೆತಿದ್ದೇನೆ, ಟಾಸ್ ನಿರ್ಧಾರದ ಬಗ್ಗೆ ತಂಡದೊಂದಿಗೆ ಸಾಕಷ್ಟು ಚರ್ಚೆಗಳನ್ನು ನಡೆಸಿದ್ದೆ, ಕಠಿಣ ಪರಿಸ್ಥಿತಿಗಳಲ್ಲಿ ನಮ್ಮನ್ನು ನಾವು ಸವಾಲು ಮಾಡಲು ಬಯಸಿದ್ದೇವೆ, ಆದರೆ ನಾವು ಇಂದಿನ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡುತ್ತೇವೆ" ಎಂದು ರೋಹಿತ್ ಅವರು ರವಿ ಶಾಸ್ತ್ರಿಗೆ ತಿಳಿಸಿದರು.
Rohit Sharma forgets the team's decision after winning the toss. pic.twitter.com/FsAOyXnQZI
— Mufaddal Vohra (@mufaddal_vohra) January 21, 2023
Next Story