Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಸರಕಾರದ ಫ್ಯಾಕ್ಟ್‌ಚೆಕ್ ಕಾರ್ಯವಿಧಾನದ...

ಸರಕಾರದ ಫ್ಯಾಕ್ಟ್‌ಚೆಕ್ ಕಾರ್ಯವಿಧಾನದ ಮೋಸವನ್ನು ಬಯಲಿಗೆಳೆದ ಆರ್ಟಿಐ ಅರ್ಜಿ

ತಪಸ್ಯಾ (Thewire.in)ತಪಸ್ಯಾ (Thewire.in)21 Jan 2023 4:25 PM IST
share
ಸರಕಾರದ ಫ್ಯಾಕ್ಟ್‌ಚೆಕ್ ಕಾರ್ಯವಿಧಾನದ ಮೋಸವನ್ನು ಬಯಲಿಗೆಳೆದ ಆರ್ಟಿಐ ಅರ್ಜಿ

ಆನ್ಲೈನ್ನಲ್ಲಿ ಪ್ರಕಟಗೊಳ್ಳುವ ಸುದ್ದಿ ವಿಷಯಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಕೇಂದ್ರ ಸರಕಾರದ ಕಾರ್ಯವಿಧಾನವು ಮೋಸದಿಂದ ಕೂಡಿದೆ ಎನ್ನುವುದನ್ನು ಆರ್ಟಿಐ ಅರ್ಜಿಯೊಂದು ಬಯಲಿಗೆಳೆದಿದೆ.

‌2023,ಜ.17ರಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 2021ರ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳಿಗೆ ಬದಲಾವಣೆಗಳನ್ನು ಪ್ರಸ್ತಾವಿಸಿದೆ. ಈ ಬದಲಾವಣೆಗಳು ಆನ್ಲೈನ್ ವಿಷಯಗಳಿಗೆ ಕಟ್ಟುನಿಟ್ಟಿನ ಸರಕಾರಿ ಸೆನ್ಸಾರ್ಶಿಪ್ನ್ನು ಅನುಷ್ಠಾನಿಸಲಿವೆ. ಅದರಂತೆ,ಸರಕಾರದ ಪ್ರಚಾರ ವಿಭಾಗ ಪ್ರೆಸ್ ಇನ್ಫಾರ್ಮೇಷನ್ ಬ್ಯೂರೊ (ಪಿಐಬಿ) ಅಥವಾ ಆನ್ಲೈನ್ ಕಂಟೆಂಟ್ಗಳ ಸತ್ಯ ಪರಿಶೀಲನೆಗೆ ಅಧಿಕಾರ ಹೊಂದಿರುವ ಯಾವುದೇ ಇತರ ಸರಕಾರಿ ಸಂಸ್ಥೆಗಳು ‘ಸುಳ್ಳು ’ಎಂದು ಬ್ರಾಂಡ್ ಮಾಡುವ ವಿಷಯವನ್ನು ದೂರಸಂಪರ್ಕ ಸೇವೆಗಳ ಪೂರೈಕೆದಾರರು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ತೆಗೆಯುವುದು ಅಗತ್ಯವಾಗುತ್ತದೆ. ಅಂದರೆ ಯಾವ ಸುದ್ದಿ ಲೇಖನಗಳು ಇಂಟರ್ನೆಟ್ನಲ್ಲಿ ವಿತರಿಸಲ್ಪಡಬೇಕು ಮತ್ತು ಯಾವುದನ್ನು ತೆಗೆದುಹಾಕಬೇಕು ಎನ್ನುವುದನ್ನು ಸರಕಾರಿ ಸಂಸ್ಥೆಯು ನಿರ್ಧರಿಸುತ್ತದೆ.

ಪ್ರಸ್ತಾವಿತ ಬದಲಾವಣೆಗಳು ಸಾರ್ವಜನಿಕರಿಗೆ ಲಭ್ಯ ಮಾಹಿತಿಯನ್ನು ನಿರ್ಬಂಧಿಸಲು ಮತ್ತು ತನ್ನ ಕಾರ್ಯ ನಿರ್ವಹಣೆಯನ್ನು ಟೀಕಿಸುವ ಕಂಟೆಂಟ್ ಅನ್ನು ತೆಗೆಯಲು ಸರಕಾರಕ್ಕೆ ವ್ಯಾಪಕ ಅಧಿಕಾರವನ್ನು ನೀಡುತ್ತದೆ. ಪಿಐಬಿ ಸತ್ಯ ಪರಿಶೀಲನೆ ಘಟಕವನ್ನು ಹೊಂದಿದೆ. ಪ್ರಕಟಗೊಂಡ ಸುದ್ದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಾಗಿ ಹೇಳಿಕೊಂಡಿರುವ ಅದು, ವರದಿಯೊಂದು ‘ಸುಳ್ಳು ’ಎಂದು ತನಗೆ ಅನಿಸಿದರೆ ಟ್ವೀಟ್ಗಳ ಮೂಲಕ ತಿಳಿಸುತ್ತದೆ.

ಹಾಗಾಗಿ,ನನ್ನ ತನಿಖಾ ವರದಿಯೊಂದಕ್ಕೆ ಪಿಐಬಿ ‘ಸುಳ್ಳು ’ ಮುದ್ರೆಯನ್ನೊತ್ತಿದಾಗ ನಮ್ಮ ‘ರಿಪೋಟರ್ಸ್ ಕಲೆಕ್ಟಿವ್’ ಒಂದು ವರದಿಯನ್ನು ಸರಿ ಅಥವಾ ತಪ್ಪು ಎನ್ನುವುದನ್ನು ನಿರ್ವಹಿಸುವ ತನ್ನ ಕಾರ್ಯದಲ್ಲಿ ಪಿಐಬಿ ನಿಜಕ್ಕೂ ಶ್ರದ್ಧೆಯಿಂದ ತೊಡಗಿಕೊಳ್ಳುತ್ತದೆಯೇ ಎನ್ನುವ ಬಗ್ಗೆ ತನಿಖೆ ನಡೆಸಲು ನಿರ್ಧರಿಸಿತ್ತು.

2022,ಜೂ.30ರಂದು ರಿಪೋರ್ಟರ್ಸ್ ಕಲೆಕ್ಟಿವ್ಗಾಗಿ ನಾನು ಅಂಗನವಾಡಿ ಕೇಂದ್ರಗಳಲ್ಲಿ ಆರು ವರ್ಷಕ್ಕೂ ಕಡಿಮೆ ಪ್ರಾಯದ ಮಕ್ಕಳು ಪೌಷ್ಟಿಕ ಆಹಾರವನ್ನು ಪಡೆಯಲು ಆಧಾರ್ ಅನ್ನು ಕಡ್ಡಾಯವಾಗಿಸಲು ಕೇಂದ್ರವು ಹೇಗೆ ಮುಂದಾಗಿದೆ ಎನ್ನುವುದನ್ನು ಬಹಿರಂಗಗೊಳಿಸಿದ್ದೆ. ಸರಕಾರದ ಈ ಕ್ರಮವು ಈ ಕೇಂದ್ರಗಳು ಒದಗಿಸುವ ಊಟವನ್ನೇ ಅವಲಂಬಿಸಿರುವ ಕೋಟ್ಯಂತರ ಮಕ್ಕಳ ಆಹಾರ ಭದ್ರತೆಗೆ ಬೆದರಿಕೆಯೊಡ್ಡಿತ್ತು. ಭಾರತದಲ್ಲಿ ಕೇವಲ ಶೇ.23ರಷ್ಟು ಐದು ವರ್ಷಕ್ಕೂ ಕಡಿಮೆ ಪ್ರಾಯದ ಮಕ್ಕಳು ಆಧಾರ್ ಕಾರ್ಡ್ ಹೊಂದಿದ್ದಾರೆ. ಈ ಕ್ರಮವು ಆಧಾರ್ ಇಲ್ಲವೆಂಬ ಕಾರಣಕ್ಕೆ ಮಕ್ಕಳಿಗೆ ಯಾವುದೇ ಸೇವೆಗಳು ಅಥವಾ ಕಲ್ಯಾಣ ಯೋಜನೆಗಳನ್ನು ನಿರಾಕರಿಸುವಂತಿಲ್ಲ ಎಂಬ ಸರ್ವೋಚ್ಚ ನ್ಯಾಯಾಲಯದ 2018ರ ತೀರ್ಪಿಗೂ ವಿರುದ್ಧವಾಗಿತ್ತು.

ನನ್ನ ಲೇಖನವು ಸಾಮಾಜಿಕ ಮಾಧ್ಯಮಗಳಲ್ಲಿ ಗಮನವನ್ನು ಸೆಳೆಯುತ್ತಿದ್ದಂತೆ ತನ್ನ ಯೋಜನೆಯಡಿ ಮಕ್ಕಳು ಆಹಾರವನ್ನು ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಟ್ವೀಟಿಸಿತ್ತು. ಸಚಿವಾಲಯದ ಹೆಜ್ಜೆಗಳಲ್ಲಿಯೇ ಸಾಗಿದ ಪಿಐಬಿಯ ಸತ್ಯ ಪರಿಶೀಲನೆ ಘಟಕವು ನನ್ನ ಲೇಖನಕ್ಕೆ ‘ಸುಳ್ಳು ’ಮುದ್ರೆಯನ್ನೊತ್ತಿತ್ತು. ತನ್ನ ಹೇಳಿಕೆಯನ್ನು ಬೆಂಬಲಿಸಲು ಅದು ಯಾವುದೇ ಸಾಕ್ಷಗಳನ್ನು ಒದಗಿಸಿರಲಿಲ್ಲ. ವಿವರಣೆಯಿಲ್ಲದೆ ಸುದ್ದಿಯೊಂದನ್ನು ಸುಳ್ಳು ಎಂದು ಬಿಂಬಿಸುವ ಪಿಐಬಿಯ ಈ ಕಾರ್ಯತಂತ್ರ ಹೊಸದೇನಲ್ಲ.

ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸಿದ್ದ ನಾನು ಪಿಐಬಿ ಹೇಗೆ ಸತ್ಯ ಪರಿಶೀಲನೆಯನ್ನು ನಡೆಸುತ್ತದೆ ಎನ್ನುವುದನ್ನು ಕಂಡುಕೊಳ್ಳಲು ಆರ್ಟಿಐ ಕಾಯ್ದೆಯಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಪ್ರಶ್ನೆಗಳನ್ನು ಕೇಳಿದ್ದೆ. ನನ್ನ ಅರ್ಜಿಯು ಪಿಐಬಿಗೂ ವರ್ಗಾವಣೆಗೊಂಡಿತ್ತು. ಅವರಿಂದ ನಾನು ಪಡೆದ ಆರ್ಟಿಐ ಉತ್ತರಗಳು ನನ್ನ ಹಿಂದಿನ ಕಳವಳಗಳು ಮತ್ತು ಪಿಐಬಿ ಸುದ್ದಿಯೊಂದರ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಯಾವುದೇ ನಿರ್ದಿಷ್ಟ ಕಾರ್ಯವಿಧಾನವನ್ನು ಪಾಲಿಸುವುದಿಲ್ಲ ಎಂಬ ಆರೋಪಗಳನ್ನು ಇನ್ನಷ್ಟು ಗಟ್ಟಿಗೊಳಿಸಿವೆ.

2022,ಆ.1ರ ಮಾರ್ಗಸೂಚಿಗಳಂತೆ ಪೋಷಕಾಂಶ ಯೋಜನೆಗೆ ಮಗುವಿನ ಆಧಾರ್ ಕಡ್ಡಾಯವಲ್ಲ ಎಂದು ಸಚಿವಾಲಯವು ತನ್ನ ಉತ್ತರದಲ್ಲಿ ತಿಳಿಸಿತ್ತು.

ನನ್ನ ಲೇಖನವು ‘ಸುಳ್ಳು’ ಮಾಹಿತಿಯಿಂದ ಕೂಡಿತ್ತು ಎನ್ನುವುದಕ್ಕೆ ಸಚಿವಾಲಯದ ಉತ್ತರವು ಪುರಾವೆಯಾಗಿದೆ ಎಂದು ಈಗ ಯಾರಾದರೂ ಹೇಳಬಹುದು. ಆದರೆ ನಿಲ್ಲಿ...ಲೇಖನವು ಪ್ರಕಟಗೊಂಡ ಮತ್ತು ಅದಕ್ಕೆ ‘ಸುಳ್ಳು ’ಹಣೆಪಟ್ಟಿಯನ್ನು ಹಚ್ಚಿದ ಒಂದು ತಿಂಗಳ ಬಳಿಕ ಮಾರ್ಗಸೂಚಿಗಳು ಹೊರಬಿದ್ದಿದ್ದವು. ಅಂದರೆ ಸಚಿವಾಲಯವು ವಾರಗಳ ನಂತರ ಪ್ರಕಟಗೊಳ್ಳಲಿರುವ ಮಾರ್ಗಸೂಚಿಗಳನ್ನು ತಿಳಿದುಕೊಳ್ಳಲು ಕಾಲದಲ್ಲಿ ಪಯಣಿಸಿತ್ತು ಮತ್ತು ನನ್ನ ಲೇಖನವನ್ನು ‘ಸುಳ್ಳು ’ಎಂದು ಬ್ರಾಂಡ್ ಮಾಡುವಾಗ ಅವುಗಳನ್ನು ಉಲ್ಲೇಖಿಸಿತ್ತು!

ಸಚಿವಾಲಯದ ಟ್ವೀಟ್ನ ಆಧಾರದಲ್ಲಿ ಲೇಖನದ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗಿದೆ ಎಂದು ತನ್ನ ಉತ್ತರದಲ್ಲಿ ಪಿಐಬಿ ತಿಳಿಸಿತ್ತು. ತನ್ನ ಉತ್ತರದೊಂದಿಗೆ ಟ್ವೀಟ್ನ ಲಿಂಕ್ ಕಳುಹಿಸಿದ್ದ ಅದು ಟ್ವೀಟ್ನ ಪೋಟೊವನ್ನೂ ಲಗತ್ತಿಸಿತ್ತು. ಅಲ್ಲಿಗೆ ಅದರ ಕೆಲಸ ಮುಗಿದಿತ್ತು,ಅಂದರೆ ಪಿಐಬಿಯಲ್ಲಿ ಸತ್ಯ ಪರಿಶೀಲನೆ ನಡೆದೇ ಇರಲಿಲ್ಲ. ಅದು ತನ್ನ ಸ್ವಂತ ವಿವೇಚನೆಯಿಲ್ಲದೆ ಸಚಿವಾಲಯವು ತನ್ನ ಟ್ವೀಟ್ನಲ್ಲಿ ಹೇಳಿದ್ದನ್ನೇ ಗಿಣಿಯಂತೆ ಪುನರುಚ್ಚರಿಸಿತ್ತು!

ನಿಜಕ್ಕೂ ಆಗಿದ್ದೇನೆಂದರೆ ನನ್ನ ಲೇಖನ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಶೇರ್ ಆದ ನಂತರ ಮತ್ತು ಜನರು ಆಧಾರ್ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡಾಗ ಸರಕಾರಕ್ಕೆ ಮಕ್ಕಳ ಪೌಷ್ಟಿಕ ಆಹಾರಕ್ಕೆ ಆಧಾರ್ ಕಡ್ಡಾಯಗೊಳಿಸುವ ಮೂಲಕ ತಾನು ತಪ್ಪು ಮಾಡಿದ್ದೇನೆ ಎನ್ನುವುದು ಅರಿವಾಗಿತ್ತು. ಆದರೆ ಅದನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಅದು ಸಿದ್ಧವಿರಲಿಲ್ಲ. ಹೀಗಾಗಿ ಸರಕಾರವು 2022,ಆಗಸ್ಟ್ನಲ್ಲಿ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಅದರಲ್ಲಿ ತನ್ನ ನಿಲುವು ಬದಲಿಸಿದ್ದ ಸರಕಾರವು ಮಕ್ಕಳಿಗೆ ಆಧಾರ್ ಕಡ್ಡಾಯವಲ್ಲ ಮತ್ತು ತಾಯಿಯ ಆಧಾರ್ ಸಾಕು ಎಂದು ತಿಳಿಸಿತ್ತು.

ನನ್ನ ಆರ್ಟಿಐ ಅರ್ಜಿಗೆ ಸರಕಾರವು ಉತ್ತರಿಸಿದಾಗ ಈ ಮಾರ್ಗಸೂಚಿಗಳು ಹೊರಬಿದ್ದಿದ್ದವು ಮತ್ತು ಅದನ್ನೇ ಹಿಡಿದುಕೊಂಡಿದ್ದ ಅದು ನನ್ನ ಲೇಖನವು ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಬ್ರಾಂಡ್ ಮಾಡಲು ಈ ಮಾರ್ಗಸೂಚಿಗಳನ್ನು ಉಲ್ಲೇಖಿಸಿತ್ತು!

ಕೃಪೆ: Thewire.in

share
ತಪಸ್ಯಾ (Thewire.in)
ತಪಸ್ಯಾ (Thewire.in)
Next Story
X