Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನಿಮಗೆ ಗೊತ್ತಿರಲಿ, ನಿಮ್ಮ ಉಗುರುಗಳ...

ನಿಮಗೆ ಗೊತ್ತಿರಲಿ, ನಿಮ್ಮ ಉಗುರುಗಳ ಮೇಲಿನ ಬಿಳಿಕಲೆಗಳಿಗೆ ಕ್ಯಾಲ್ಸಿಯಂ ಕೊರತೆ ಕಾರಣವಲ್ಲ

21 Jan 2023 5:15 PM IST
share
ನಿಮಗೆ ಗೊತ್ತಿರಲಿ, ನಿಮ್ಮ ಉಗುರುಗಳ ಮೇಲಿನ ಬಿಳಿಕಲೆಗಳಿಗೆ ಕ್ಯಾಲ್ಸಿಯಂ ಕೊರತೆ ಕಾರಣವಲ್ಲ

ನಿಮ್ಮ ಉಗುರುಗಳ ಮೇಲೆ ಸಾಮಾನ್ಯವಾಗಿ ಕ್ಯಾಲ್ಸಿಯಂ ಕೊರತೆಯನ್ನು ಸೂಚಿಸುತ್ತವೆ ಎಂದು ನಂಬಲಾಗಿರುವ ಬಿಳಿಯ ಚುಕ್ಕೆಗಳು ಅಥವಾ ಲಂಬ ಅಥವಾ ಅಡ್ಡಗೆರೆಗಳು ಉಂಟಾಗಿವೆಯೇ? ಈ ಸಾಮಾನ್ಯ ನಂಬಿಕೆ ಸಂಪೂರ್ಣ ಮಿಥ್ಯೆಯಾಗಿದೆ. ಏಕೆಂದರೆ ನಿಮ್ಮ ಉಗುರುಗಳ ಮೇಲಿನ ಬಿಳಿಕಲೆಗಳಿಗೆ ಝಿಂಕ್ ಅಥವಾ ಸತುವಿನ ಕೊರತೆಯು ಕಾರಣವಾಗಿದೆಯೇ ಹೊರತು ಕ್ಯಾಲ್ಸಿಯಂ ಕೊರತೆಯಲ್ಲ.

ನಮ್ಮ ಶರೀರಕ್ಕೆ, ವಿಶೇಷವಾಗಿ ಹೃದಯ, ಮೂಳೆಗಳು, ಶ್ವಾಸಕೋಶಗಳು ಮತ್ತು ಇತರ ನೂರಾರು ಕಿಣ್ವಗಳಿಗೆ ಅಗತ್ಯವಾಗಿರುವ ಸತುವು ಅಲ್ಪ ಪ್ರಮಾಣದಲ್ಲಿರುವ ಬೇಕಿರುವ ಖನಿಜವಾಗಿದೆ (ಟ್ರೇಸ್ ಮಿನರಲ್) ಎಂಬ ಅಂಶವನ್ನು ಪೋಷಕಾಂಶ ತಜ್ಞೆ ಪೂಜಾ ಮಖಿಜಾ ಅವರು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ನಮ್ಮ ಶರೀರವು ಅದನ್ನು ಉಳಿಸಿಕೊಳ್ಳುವುದಿಲ್ಲ ಎನ್ನುವುದು ಮಹತ್ವದ್ದಾಗಿದೆ ಮತ್ತು ಇದೇ ಕಾರಣದಿಂದಾಗಿ ನಾವು ಸತುವುಭರಿತ ಆಹಾರವನ್ನು ಸೇವಿಸುವುದು ಅತ್ಯಗತ್ಯವಾಗಿದೆ.

ಸತುವು ನಮ್ಮ ಶರೀರದಲ್ಲಿ ಕಬ್ಬಿಣದ ಬಳಿಕ ಅತಿ ಹೆಚ್ಚಿನ ಟ್ರೇಸ್ ಮಿನರಲ್ ಆಗಿದ್ದು, ಪ್ರೋಟಿನ್ ಉತ್ಪಾದನೆ, ಕೋಶಗಳ ಬೆಳವಣಿಗೆ ಮತ್ತು ವಿಭಜನೆ, ಡಿಎನ್ಎ ಸಂಶ್ಲೇಷಣೆ, ರೋಗ ನಿರೋಧಕ ಶಕ್ತಿಯನ್ನು ಕಾಯ್ದುಕೊಳ್ಳುವುದು ಮತ್ತು ಕಿಣ್ವ ಪ್ರತಿಕ್ರಿಯೆಯಂತಹ ವಿವಿಧ ದೈಹಿಕ ಕಾರ್ಯಗಳಿಗೆ ಅತ್ಯಗತ್ಯವಾಗಿದೆ. ‘ಮಿರಾಕಲ್ ಮಿನರಲ್ (ಪವಾಡದ ಖನಿಜ)’ ಎಂದೂ ಕರೆಯಲಾಗುವ ಸತುವು ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ರೋಗಲಕ್ಷಣಗಳಲ್ಲಿ ರಾತ್ರಿ ಬೆಳಗಾಗುವುದರಲ್ಲಿ ಸುಧಾರಣೆಯನ್ನು ತರಬಲ್ಲ ಜಾದೂ ಶಕ್ತಿಯನ್ನು ಹೊಂದಿದೆ ಎನ್ನುತ್ತಾರೆ ಮಖಿಜಾ.

ಸತುವಿನ ಕೆಲವು ಆಹಾರ ಮೂಲಗಳ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡಿರುವ ಮಖಿಜಾ ಹೇಳುವಂತೆ ಶೇ.70ರಷ್ಟು ಸತುವು ಪ್ರೋಟಿನ್ ಮತ್ತು ಆಲ್ಬುಮಿನ್ ಜೊತೆ ಗುರುತಿಸಿಕೊಂಡಿರುತ್ತದೆ, ಆದರೆ ಶೇ.73ರಷ್ಟು ಭಾರತೀಯರು ಪ್ರೋಟಿನ್ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಸತುವಿನ ಕೊರತೆಯನ್ನು ಇನ್ನಷ್ಟು ಪ್ರಚಲಿತವಾಗಿಸಿದೆ.

ಸತುವಿನ ಕೊರತೆಯ ಲಕ್ಷಣಗಳು
ಸತುವು ಅತ್ಯಲ್ಪ ಪ್ರಮಾಣದಲ್ಲಿ ನಮ್ಮ ಜೀವಕೋಶಗಳಲಿ ಹರಡಿದ್ದು ವಿಶ್ವಾಸಾರ್ಹ ರಕ್ತ ಪರೀಕ್ಷೆ ಫಲಿತಾಂಶವನ್ನು ಪಡೆಯುವುದು ಕಠಿಣವಾಗಿದೆ,ಹೀಗಾಗಿ ಸತುವಿನ ಕೊರತೆಯನ್ನು ಪತ್ತೆ ಹಚ್ಚುವುದು ಕಷ್ಟಕರವಾಗಿದೆ ಎಂದಿರುವ ಮಖಿಜಾ ಅದನ್ನು ಗುರುತಿಸಲು ನೆರವಾಗಬಲ್ಲ ಕೆಲವು ರೋಗಲಕ್ಷಣಗಳನ್ನು ಪಟ್ಟಿ ಮಾಡಿದ್ದಾರೆ.

►ಸಾಕಷ್ಟು ಸಮಯ ನಿದ್ರಿಸದಿರುವುದು
►ರೋಗ ನಿರೋಧಕ ಶಕ್ತಿಯು ದುರ್ಬಲಗೊಳ್ಳುವುದು
►ಲೈಂಗಿಕಾಸಕ್ತಿ ಕಡಿಮೆಯಾಗುವುದು
►ತೂಕ ಸುಲಭವಾಗಿ ಹೆಚ್ಚುವುದು
►ದಂತಕ್ಷಯ ಮತ್ತು ಒಸಡುಗಳಿಂದ ರಕ್ತಸ್ರಾವ
►ಕೈ ಮತ್ತು ಮುಖದಲ್ಲಿ ವಿವರಿಸಲಾಗದ ಸುಕ್ಕುಗಳು
►ರೋಗ ಗುಣವಾಗಲು ವಿಳಂಬವಾ
►ಅಕ್ಷಿಪಟಲದ ತ್ವರಿತ ಅವನತಿ

ಸತುವು ಸಮೃದ್ಧವಾಗಿರುವ ನೈಸರ್ಗಿಕ ಆಹಾರಗಳು
►ಆಯ್ಸ್ಟರ್ ಅಥವಾ ಗಟ್ಟಿಯಾದ ಚಿಪ್ಪನ್ನು ಹೊಂದಿರುವ ಸಮುದ್ರದ ಮೃದ್ವಂಗಿಗಳು
►ಏಡಿ ಮತ್ತು ಲೋಬ್ಸ್ಟರ್
►ಮಾಂಸ ಮತ್ತು ಕೋಳಿ
►ಅಣಬೆ, ಪಾಲಕ್, ಕೋಸುಗಡ್ಡೆಯಂತಹ ತರಕಾರಿಗಳು, ಬೆಳ್ಳುಳ್ಳಿ
►ಕಡಲೆ ಮತ್ತು ಅವರೆಯಂತಹ ದ್ವಿದಳ ಧಾನ್ಯಗಳು
►ಪೈನ್,ಚಿಯಾ ಮತ್ತು ಕುಂಬಳಕಾಯಿಯಂತಹ ಬೀಜಗಳು
►ಕಂದು ಅಕ್ಕಿ,ಓಟ್ಸ್ ಮತ್ತು ಕ್ವಿನೋವಾದಂತಹ ಇಡೀ ಧಾನ್ಯಗಳು
►ಕಾರ್ನ್ಫ್ಲೇಕ್ಸ್,ಮುಸ್ಲಿ ಮತ್ತು ವೀಟ್ಫ್ಲೇಕ್ಸ್ನಂತಹ ಬಲವರ್ಧಿತ ಉಪಾಹಾರ ಧಾನ್ಯಗಳು
►ಡೇರಿ ಉತ್ಪನ್ನಗಳು

►ಡಾರ್ಕ್ ಚಾಕೊಲೇಟ್

ಸತುವಿನ ಪೂರಕಗಳನ್ನು ಸೇವಿಸಬಹುದೇ?
ಸತುವಿನ ಕೊರತೆಯನ್ನು ನೀಗಿಸಲು ಅದರ ಪೂರಕಗಳನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು, ಝಿಂಕ್ ಗ್ಲುಕೋನೇಟ್, ಝಿಂಕ್ ಸಲ್ಫೇಟ್ ಮತ್ತು ಝಿಂಕ್ ಸಿಟ್ರೇಟ್ನಂತಹ ಹಲವಾರು ಸತುವಿನ ಪೂರಕಗಳು ಮಾರುಕಟ್ಟೆಗಳಲ್ಲಿ ಲಭ್ಯವಿವೆ. ಆದರೆ ಇವು ಕೆಲವರಲ್ಲಿ ಅಡ್ಡ ಪರಿಣಾಮಗಳನ್ನುಂಟು ಮಾಡುವುದರಿಂದ ವೈದ್ಯರ ಸಲಹೆಯ ಮೇರೆಗೆ ಮಾತ್ರ ತೆಗೆದುಕೊಳ್ಳಬೇಕು.

ಪೂರಕಗಳನ್ನು ಸೇವಿಸುವಾಗ ಗಮನದಲ್ಲಿರಲಿ
ಹೆಚ್ಚಿನ ಸತುವು ಸೇವನೆಯು ಶರೀರದಲ್ಲಿ ತಾಮ್ರ ಮತ್ತು ಕಬ್ಬಿಣದ ಹೀರುವಿಕೆಗೆ ಅಡ್ಡಿಯನ್ನುಂಟು ಮಾಡಬಲ್ಲದು ಹಾಗೂ ಕೆಲವರಲ್ಲಿ ವಾಕರಿಕೆ,ವಾಂತಿ,ಅತಿಸಾರ ಮತ್ತು ಹೊಟ್ಟೆನೋವಿಗೆ ಕಾರಣವಾಗಬಲ್ಲದು. ವಯಸ್ಕರಲ್ಲಿ ಧಾತುರೂಪದ ಸತುವು ದಿನವೊಂದಕ್ಕೆ 40 ಎಂಜಿ ಮೀರಿದರೆ ಜ್ವರ,ಕೆಮ್ಮು,ತಲೆನೋವು ಮತ್ತು ಬಳಲಿಕೆಯಂತಹ ಫ್ಲೂ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಅಲ್ಲದೆ ಸತುವಿನ ಪೂರಕವನ್ನು ಕೆಲವು ಆ್ಯಂಟಿಬಯಾಟಿಕ್ಗಳ ಜೊತೆಗೆ ಸೇವಿಸಿದರೆ ಅವುಗಳ ಹೀರಿಕೊಳ್ಳುವಿಕೆಗೆ ಅಡ್ಡಿಯನ್ನುಂಟು ಮಾಡುತ್ತದೆ ಮತ್ತು ಅವುಗಳ ಪರಿಣಾಮಕಾರಿತ್ವವನ್ನು ತಗ್ಗಿಸುತ್ತದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಕುರಿತ BBC ಸಾಕ್ಷ್ಯಚಿತ್ರವಿರುವ ಟ್ವೀಟ್‌ಗಳನ್ನು ನಿರ್ಬಂಧಿಸಿದ ಕೇಂದ್ರ ಸರಕಾರ

share
Next Story
X