PSI ಹಗರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್ ಪತ್ತೆಗೆ ಪ್ರಕಟನೆ ಹೊರಡಿಸಿದ ಸಿಐಡಿ

ಬೆಂಗಳೂರು, ಜ.21: ಪಿಎಸ್ಸೈ ಹಗರಣದ ಪ್ರಮುಖ ಆರೋಪಿ ಆರ್.ಡಿ.ಪಾಟೀಲ್ ಪತ್ತೆಗಾಗಿ ಸಿಐಡಿ ಸಾರ್ವಜನಿಕ ಪ್ರಕಟನೆ ಹೊರಡಿಸಿದೆ.
ಪಿಎಸ್ಸೈ ಪ್ರಕರಣ ಬಳಿಕ ಈತ ತಲೆಮರೆಸಿಕೊಂಡಿದ್ದು, ನ್ಯಾಯಾಲಯದ ಆದೇಶದಂತೆ ಆರೋಪಿ ಕಂಡಬಂದಲ್ಲಿ ಮೊಬೈಲ್ ಸಂಖ್ಯೆ 99641 88636 ಅನ್ನು ಸಂಪರ್ಕಿಸುವಂತೆ ಸಿಐಡಿ ಪ್ರಕಟನೆ ಹೊರಡಿಸಿದೆ.
ವಿಡಿಯೊ ಹರಿಬಿಟ್ಟ ಆರೋಪಿ : ಮತ್ತೊಂದೆಡೆ ರಾಜಕೀಯ ಕುತಂತ್ರ ಮಾಡಿ ಪಿಎಸ್ಸೈ ನೇಮಕಾತಿ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ. ಕೆಲ ಸಿಐಡಿ ಅಧಿಕಾರಿಗಳು ರಾಜಕೀಯ ಮುಖಂಡರ ಕೈಗೊಂಬೆಯಾಗಿ, ನನ್ನ ಮೇಲೆ ಕುತಂತ್ರ ಹೆಣೆದಿದ್ದಾರೆ. ಅಫಜಲಪುರ ಕ್ಷೇತ್ರದ ಜನರು ಬಯಸಿದರೆ, ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವೆ ಎಂದು ಈತ ವಿಡಿಯೊವೊಂದನ್ನು ಆಜ್ಞಾತ ಸ್ಥಳದಿಂದ ಬಿಡುಗಡೆ ಮಾಡಿದ್ದಾನೆ.
ಇದನ್ನೂ ಓದಿ: ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧ: ಅಜ್ಞಾತ ಸ್ಥಳದಿಂದ ವಿಡಿಯೊ ಬಿಡುಗಡೆ ಮಾಡಿದ PSI ಹಗರಣದ ಆರೋಪಿ
Next Story





