ಕಾಂಚನ ಗ್ರೂಪ್: ಏಥರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆ
ಬಿಡುಗಡೆಯ ದಿನದಂದೇ 200 ವಾಹನಗಳ ದಾಖಲೆಯ ಮಾರಾಟ

ಉಡುಪಿ: ಕಾಂಚನ ಸಮೂಹ ಸಂಸ್ಥೆಯ ಕಡಿಯಾಳಿ ಶೋರೂಮ್‍ನಲ್ಲಿ ಏಥರ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಬಿಡುಗಡೆಗೊಳಿಸಿ ಮಾತನಾಡಿದ ಬಿಗ್‍ಬಾಸ್ ಸೀಸನ್ 9ರ ವಿಜೇತ ನಟ ರಾಕ್‍ಸ್ಟಾರ್ ರೂಪೇಶ್ ಶೆಟ್ಟಿ, ದೇಶೀಯ ಬ್ರಾಂಡ್ ಆದ ಏಥರ್ ಎಲೆಕ್ಟ್ರಿಕ್ ದ್ವಿಚಕ್ರವಾಹನವನ್ನು ಗ್ರಾಹಕರು ಹೆಚ್ಚು ಖರೀದಿಸುವ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆಗೆ ಸಹಕರಿಸಬೇಕಾಗಿದೆ. ಕಾಂಚನ ಸಂಸ್ಥೆಯು ಉತ್ತಮ ಸೇವೆಯ ಮೂಲಕ ಈಗಾಗಲೇ ಜನಮನ್ನಣೆಗೆ ಪಾತ್ರವಾಗಿದೆ. ಬಿಡುಗಡೆಯ ದಿನದಂದೇ 200 ವಾಹನಗಳು ಮಾರಾಟವಾಗುತ್ತಿರುವುದು ದಾಖಲೆ, ಸಂಸ್ಥೆ ನೀಡುತ್ತಿರುವ ಸೇವೆಗೆ ಉತ್ತಮ ಉದಾಹರಣೆ ಎಂದರು.
ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಕಚೇರಿಯ ಜಿಎಂ ರಾಮ ನಾಯ್ಕ್ ಕೆ. ಮಾತನಾಡಿ, ಪ್ರಸ್ತುತ ಎಲೆಕ್ಟ್ರಿಕ್ ವಾಹನಕ್ಕೆ ಸಾಕಷ್ಟು ಬೇಡಿಕೆ ಇದೆ. ಉಡುಪಿ ಜಿಲ್ಲೆಯ ಜನತೆಗೆ ಕಾಂಚನ ಸಂಸ್ಥೆ ಪರಿಸರಸ್ನೇಹಿ ವಾಹನವನ್ನು ಪರಿಚಯಿಸುತ್ತಿರುವುದು ಸಂತೋಷ. ಸಂಸ್ಥೆಯಿಂದ ಹೊಸ ವಾಹನಗಳು ಹೆಚ್ಚಾಗಿ ಮಾರಾಟಗೊಂಡು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ ಶುಭ ಹಾರೈಸಿದರು.
ಕಾಂಚನ ಗ್ರೂಪ್‍ನ ಎಂಡಿ ಪ್ರಸಾದ್‍ರಾಜ್ ಕಾಂಚನ್ ಪ್ರಾಸ್ತಾವಿಕ ಮಾತನಾಡಿ, ಏಥರ್ ಎಲೆಕ್ಟ್ರಿಕ್ ವಾಹನವು ದ್ವಿಚಕ್ರ ವಾಹನದಲ್ಲಿಯೇ ಪ್ರಥಮ ಬಾರಿಗೆ ಅಳವಡಿಸಲಾದ ಆಟೋ ಹೋಲ್ಡ್ ಗೂಗಲ್ ಮ್ಯಾಪ್, 3.1 ಝೆನ್ ಸಾಫ್ಟ್ ವೇರ್, 5 ವರ್ಷ ವಾರಂಟಿಯುಳ್ಳ ಐಪಿ 67 ಪ್ರಮಾಣೀಕೃತ ಬ್ಯಾಟರಿ ಹೊಂದಿದೆ. 6 ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ ಎಂದರು.
ಕಾಂಚನ ಗ್ರೂಪ್‍ನ ನಿರ್ದೇಶಕಿ ಸುಕನ್ಯಾ ಕಾಂಚನ್, ಏಥರ್‍ನ ಎಎಸ್‍ಎಂ ಶ್ರೀತೇಜ್, ಕಾಂಚನ ಗ್ರೂಪ್‍ನ ಜಿಎಂ ಪ್ರತೀಕ್ ಕಾಮತ್, ವೀಕೆಂಡ್ ಆನ್ ವ್ಹೀಲ್ಸ್‍ನ ಕ್ರಿಯೇಟರ್ ಗಿರೀಶ್ ಶೇಟ್ ಉಪಸ್ಥಿತರಿದ್ದರು. ಅಜಯ್ ನಿರೂಪಿಸಿ, ವಂದಿಸಿದರು.









