ಒಡಿಶಾ: ವೈದ್ಯಕೀಯ ಪರೀಕ್ಷೆಗಾಗಿ 12 ಗಂಟೆ ಪೊಲೀಸ್ ವ್ಯಾನ್ ನಲ್ಲಿ ಕಾದ ಅತ್ಯಾಚಾರ ಸಂತ್ರಸ್ತೆ

ಕಿಯೊಂಝಾರ್ (ಒಡಿಶಾ), ಜ. 21: ತಾನು ವೈದ್ಯಕೀಯ ಪರೀಕ್ಷೆಗಾಗಿ ಪೊಲೀಸ್ ವ್ಯಾನ್ನಲ್ಲಿ ಕುಳಿತು 12 ಗಂಟೆಗಳ ಕಾಲ ಕಾಯಬೇಕಾಯಿತು ಎಂದು ಕಿಯೊಂಝಾರ್ ಜಿಲ್ಲೆಯ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯೊಬ್ಬರು ಆರೋಪಿಸಿದ್ದಾರೆ. ಸೋಸೊ ಪೊಲೀಸ್ ಠಾಣೆಯಲ್ಲಿ ಗುರುವಾರ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾದ ಬಳಿಕ ಜಿಲ್ಲೆಯ ಆನಂದಪುರ ಉಪ ವಿಭಾಗದಲ್ಲಿ ಈ ಘಟನೆ ನಡೆದಿದೆ. ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ 37 ವರ್ಷದ ಮಹಿಳೆಯನ್ನು ಪೊಲೀಸ್ ಸಿಬ್ಬಂದಿ ಪೊಲೀಸ್ ವ್ಯಾನ್ ಆನಂದಪುರ ಉಪ ವಿಭಾಗಕ್ಕೆ ಗುರುವಾರ ಬೆಳಗ್ಗೆ ಕರೆದೊಯ್ದಿದ್ದರು.
ಆದರೆ, ಘಟನೆ ಸಲನಿಯಾ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್ಸಿ)ದ ಪ್ರದೇಶದಲ್ಲಿ ನಡೆದಿರುವುದರಿಂದ ವೈದ್ಯಕೀಯ ಪರೀಕ್ಷೆ ನಡೆಸಲು ವೈದ್ಯರು ನಿರಾಕರಿಸಿದರು. ಅನಂತರ ಪೊಲೀಸ್ ಸಿಬ್ಬಂದಿ ಮಹಿಳೆಯನ್ನು ಸಲನಿಯಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಅಲ್ಲಿ ಮಹಿಳೆ ಪೊಲೀಸ್ ವ್ಯಾನ್ನಲ್ಲಿ ಕುಳಿತು ಕಾದರು. ಆದರೆ, ಪರೀಕ್ಷೆ ನಡೆಸಲು ಆರೋಗ್ಯ ಕೇಂದ್ರದಲ್ಲಿ ಮಹಿಳಾ ವೈದ್ಯರೇ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ಮತ್ತೆ ಮಹಿಳೆಯನ್ನು ಆನಂದಪುರ ಉಪ ವಿಭಾಗೀಯ ಆಸ್ಪತ್ರೆಗೆ ಕರೆ ತಂದರು. ಕೊನೆಗೆ ಅಲ್ಲಿನ ವೈದ್ಯರು ಗುರುವಾರ 9.30ಕ್ಕೆ ಪ್ರಾಥಮಿಕ ಪರೀಕ್ಷೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ଡାକ୍ତରୀ ମାଇନା ପାଇଁ ଦୁଷ୍କର୍ମ ପୀଡ଼ିତା ବାରଦ୍ୱାର । ପୀଡିତାଙ୍କୁ ବୁଲିବାକୁ ପଡିଲା ଏକାଧିକ ମେଡିକାଲ ।#Keonjhar #OTV pic.twitter.com/FgMkPNId9c
— ଓଟିଭି (@otvkhabar) January 20, 2023







